ಬೆಂಗಳೂರು: ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ತಹಸೀಲ್ದಾರ್ ಹುದ್ದೆಗೆ ನೇಮಕವಾಗಿರುವ ಅಧಿಕಾರಿಗೆ ವ್ಯಕ್ತಿಯೊಬ್ಬ ಹಣಕ್ಕಾಗಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೀಣ್ಯ ನಿವಾಸಿ ಪೃಥ್ವಿ ಎಂಬುವರು ಕೊಟ್ಟ ದೂರಿನ ಮೇರೆಗೆ ಚಿತ್ರದುರ್ಗ ಮೂಲದ ನಟರಾಜ್ ನಾಡಿಗ್ ರೆಡ್ಡಿ ಎಂಬಾತನ ವಿರುದ್ಧ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ
ಚಿತ್ರದುರ್ಗ ಮೂಲದ ಪೃಥ್ವಿ ಪೀಣ್ಯದಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿದ್ದರು. ಚಿತ್ರದುರ್ಗದಲ್ಲಿ ಮನೆ ಕಟ್ಟಿಸುತ್ತಿರುವ ವೇಳೆ ಟೈಲ್ಸ್ ಕೆಲಸ ಮಾಡುತ್ತಿದ್ದ ರಾಜಶೇಖರ್ ಎಂಬಾತನ ಮೂಲಕ ನಟರಾಜ್ ಪರಿಚಯವಾಗಿದ್ದ. ಈ ವೇಳೆ ನಟರಾಜ್, ‘ನನಗೆ ಹಿರಿಯ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ಪರಿಚಯವಿದೆ. ಸಹಾಯಕ ಆಯುಕ್ತ ಅಥವಾ ಡಿವೈಎಸ್‌ಪಿ ಹುದ್ದೆ ಕೊಡಿಸುತ್ತೇನೆ. 8 ಲಕ್ಷ ರೂ. ಕೊಡಿ’ ಎಂದು ಹಿಂದೆ ಬಿದ್ದಿದ್ದ. ಆದರೆ ಪೃಥ್ವಿ ನಿರಾಕರಿಸಿದ್ದರು.
ಇದನ್ನೂ ಓದಿ:ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…
ಕಳೆದ ಡಿಸೆಂಬರ್‌ನಲ್ಲಿ ಕೆಎಎಸ್ ಫಲಿತಾಂಶ ಪ್ರಕಟವಾಗಿದ್ದು, ನಂತರ ತಹಸೀಲ್ದಾರ್ ಹುದ್ದೆಗೆ ಪೃಥ್ವಿ ನೇಮಕವಾಗಿದ್ದರು. ಈ ವಿಚಾರ ನಟರಾಜ್‌ಗೆ ಗೊತ್ತಾಗಿದೆ. ‘ನಾನೇ ತಹಸೀಲ್ದಾರ್ ಹುದ್ದೆಗೆ ಆಯ್ಕೆ ಮಾಡಿಸಿದ್ದು. ನನಗೆ ಹಣ ಕೊಡಲೇಬೇಕು’ ಎಂದು ಪೀಡಿಸತೊಡಗಿದ್ದ. ಕಳೆದ ಫೆಬ್ರವರಿಯಲ್ಲಿ ಪೀಣ್ಯದಲ್ಲಿರುವ ಕಚೇರಿ ಬಳಿ 4-5 ಯುವಕರನ್ನು ಕರೆದೊಯ್ದಿದ್ದ. ಈ ವೇಳೆ ಪೃಥ್ವಿ ಅಲ್ಲಿರಲಿಲ್ಲ. ಆದರೂ ಕಚೇರಿಯಲ್ಲಿದ್ದ ಹಿರಿಯ ಅಧಿಕಾರಿಗಳ ಮುಂದೆ ‘ಪೃಥ್ವಿಗೆ ತಹಸೀಲ್ದಾರ್ ಹುದ್ದೆ ಕೊಡಿಸಿದ್ದು ನಾನೇ. ಹಣ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದ. 2 ವಾರಗಳ ಬಳಿಕ ಮತ್ತೆ ತನ್ನ ಇಬ್ಬರು ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
