ಬೆಂಗಳೂರು: ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ.ಸುಧಾ (ಕೆ.ಎ.ಎಸ್) ಹಾಗೂ ಇವರ ಪರಿಚಿತರ ಹೆಸರಿನಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ 200ಕ್ಕೂ ಹೆಚ್ಚಿನ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
3.5 ಕೋಟಿ ರೂ. ಠೇವಣಿ
ದಾಳಿ ವೇಳೆ ಸುಧಾ ಹಾಗೂ ಇತರರ ಬಳಿ ಒಟ್ಟು 3.5 ಕೆ.ಜಿ ಚಿನ್ನಾಭರಣ, 10.5 ಕೆ.ಜಿ ಬೆಳ್ಳಿಯ ವಸ್ತುಗಳು, 36.89 ಲಕ್ಷ ರೂ. ಸಿಕ್ಕಿವೆ. ಸುಧಾ, ಆಪ್ತೆ ರೇಣುಕಾ ಹಾಗೂ ಇತರರ ಹೆಸರಿನಲ್ಲಿ ವಿವಿಧ ಬ್ಯಾಂಕ್​ಗಳಲ್ಲಿ 50 ಬ್ಯಾಂಕ್ ಖಾತೆಗಳಿರುವುದನ್ನು ಎಸಿಬಿ ಪತ್ತೆ ಹಚ್ಚಿದೆ. 50ಕ್ಕೂ ಅಧಿಕ ಚೆಕ್​ಲೀಫ್ ದೊರೆತಿವೆ. ಬ್ಯಾಂಕ್ ಖಾತೆಗಳಲ್ಲಿ 3.5 ಕೋಟಿ ರೂ. ಠೇವಣಿ ಇಟ್ಟಿರುವುದು ಕಂಡು ಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ನ.7ರಂದು ಎಸಿಬಿ ಅಧಿಕಾರಿಗಳ 6 ವಿವಿಧ ತಂಡಗಳು ಬೆಂಗಳೂರು, ಮೈಸೂರು, ಉಡುಪಿ ಸೇರಿ ರಾಜ್ಯದ 7 ಕಡೆ ದಾಳಿ ನಡೆಸಿದಾಗ ನೂರಾರು ಕೋಟಿ ರೂ. ಬೆಲೆ ಬಾಳುವ, ಸುಧಾ ಹಾಗೂ ಈಕೆಯ ಕುಟುಂಬಸ್ಥರು ಹಾಗೂ ಪರಿಚಿತರ ಹೆಸರಿನಲ್ಲಿ 200ಕ್ಕೂ ಹೆಚ್ಚಿನ ಸ್ವತ್ತಿಗೆ ಸಂಬಂಧಿಸಿದ ದಾಖಲೆ ಪತ್ತೆಯಾಗಿವೆೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಎಸಿಬಿ ಕೈ ಸೇರಿದೆ. ಆಸ್ತಿಗಳ ಕ್ರಯ ಪತ್ರಗಳು, ಜಿಪಿಎ ಪತ್ರಗಳು, ಕೆಲ ಒಪ್ಪಂದದ ಕರಾರು ಪತ್ರಗಳು, ಇತರ ದಾಖಲೆಗಳು ದೊರೆತಿದೆ. ಈ ಎಲ್ಲವನ್ನೂ ಜಪ್ತಿ ಮಾಡಿ ಎಸಿಬಿ ಕಚೇರಿಯಲ್ಲಿ ಪರಿಶೀಲಿಸಲಾಗುತ್ತಿದೆ. ಈ ಆಸ್ತಿ ಖರೀದಿಸಲು ಸುಧಾ, ಈಕೆಯ ಆಪ್ತೆ ರೇಣುಕಾ ಹಾಗೂ ಇತರರ ನಡುವೆ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ಈ ಪೈಕಿ ಸುಧಾ ಬೆಂಗಳೂರಿನಲ್ಲೇ ಅಧಿಕ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಮುಂದುವರಿದ ಪರಿಶೀಲನೆ :200ಕ್ಕೂ ಅಧಿಕ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರ ಇನ್ನಷ್ಟು ಅಕ್ರಮ ಹೊರ ಬೀಳಲಿವೆ. ಸೋಮವಾರ ಎಸಿಬಿ ಕಚೇರಿಗೆ ಹಾಜರಾಗುವಂತೆ ಸುಧಾಗೆ ಸೂಚಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಆಸ್ತಿಯ ಕೆಲ ಮಾಹಿತಿಯನ್ನು ಅವರಿಂದಲೇ ಕಲೆ ಹಾಕಬೇಕಿದೆ. ಆದಾಯಕ್ಕಿಂತ ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಆಸ್ತಿ ಗಳಿಸಿರುವುದು ಹೇಗೆ ಎಂಬ ಬಗ್ಗೆ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ಬೆಂಗಳೂರು ವಿಭಾಗದ ಎಸ್.ಪಿ. ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ ದಾಸ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + two =
Remember me
