ಬೆಂಗಳೂರು:ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು, ಈ ಬಾರಿ ಕೆಎಎಸ್ ಅಧಿಕಾರಿ ಮತ್ತು ಭೂಮಾಪಕನಿಗೆ ಖೆಡ್ಡಾ ತೋಡಿ ಬಲೆಗೆ ಬೀಳಿಸಿದ್ದಾರೆ. ನಿರಾಕ್ಷೇಪಣಾ ಪತ್ರ ವಿತರಿಸಲು 2.5 ಲಕ್ಷ ರೂ. ಲಂಚ ಪಡೆದಿದ್ದ ಆರೋಪಿಗಳು, ವಾಪಸ್ ದೂರುದಾರನಿಗೆ ನೀಡುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಟ್ರ್ಯಾಪ್ ಆಗಿದ್ದಾರೆ.
ನಗರದ ಕೆಐಎಡಿಬಿ ಕಚೇರಿ ವಿಶೇಷ ಭೂಸ್ವಾಧೀನಾಧಿಕಾರಿ-2 ಕೆಎಎಸ್ ಅಧಿಕಾರಿ ಎ.ಬಿ. ವಿಜಯಕುಮಾರ್ ಮತ್ತು ಭೂಮಾಪಕ ರಘುನಾಥ್ ಬಂಧಿತರು. ಇಬ್ಬರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಶವಂತಪುರ ಹೋಬಳಿ ಲಗ್ಗೆರೆ ಗ್ರಾಮ ಸರ್ವೆ ನಂಬರ್ 4 ಎಕರೆ 33 ಗುಂಟೆ ಪೈಕಿ 30 ಗುಂಟೆ ಜಮೀನು ಕೆಐಎಡಿಬಿಯಿಂದ ಭೂ ಸ್ವಾಧೀನಕ್ಕೆ ಒಳಪಟ್ಟಿಲ್ಲ ಎಂದು ನಿರಾಕ್ಷೇಪಣಾ ಪತ್ರ ಕೋರಿ ಭೂ ಮಾಲೀಕ ಭಗತ್ ಸಿಂಗ್ ಅರುಣ್, ಕೆಐಎಡಿಬಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ವಿಜಯಕುಮಾರ್, ನಿರಾಕ್ಷೇಪಣಾ ಪತ್ರ ನೀಡಲು 2.5 ಲಕ್ಷ ರೂ. ಲಂಚ ಕೊಡುವಂತೆ ಬೇಡಿಕೆ ಒಡ್ಡಿದ್ದರು. ಅನಿವಾರ್ಯವಾಗಿ ಇದಕ್ಕೆ ಒಪ್ಪಿ ಭೂಮಾಲೀಕ ಭಗತ್ ಸಿಂಗ್, 2.5 ಲಕ್ಷ ರೂ. ಕೊಟ್ಟು ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದರು. ಈ ಬಗ್ಗೆ ನೊಂದ ಭಗತ್ ಸಿಂಗ್, ಕೆಐಎಡಿಬಿ ಉಪ ಆಯುಕ್ತ (ಭೂಸ್ವಾಧೀನ) ದೂರು ನೀಡಿದ್ದರು. ಇದರಿಂದ ಹೆದರಿದ ಕೆಎಎಸ್ ಅಧಿಕಾರಿ ವಿಜಯಕುಮಾರ್, ಭೂಮಾಲೀಕರನ್ನು ಸಂಪರ್ಕ ಮಾಡಿ 2.5 ಲಕ್ಷ ರೂ. ಲಂಚಕ್ಕೆ 50 ಸಾವಿರ ರೂ. ಸೇರಿಸಿ ವಾಪಸ್ ಕೊಡುವುದಾಗಿ ಒತ್ತಾಯ ಮಾಡುತ್ತಿದ್ದರು.
ಈ ಬಗ್ಗೆ ಭಗತ್ ಸಿಂಗ್, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಗಂಭೀರವಾಗಿ ಪರಿಗಣಿಸಿದ ನ್ಯಾ.ಬಿ.ಎಸ್. ಪಾಟೀಲ್ ಅವರು ಅಧಿಕಾರಿಗಳಿಗೆ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಲೋಕಾಯುಕ್ತ ಅಧಿಕಾರಿಗಳು, ಕಾರ್ಯಾಚರಣೆ ರೂಪಿಸಿದ್ದರು.
ವಿಜಯಕುಮಾರ್ ತನ್ನ ಸಹೋದ್ಯೋಗಿ ರಘುನಾಥ್, ಮೂಲಕ 2.5 ಲಕ್ಷ ರೂ. ಲಂಚ ಮತ್ತು ಹೆಚ್ಚುವರಿ 50 ಸಾವಿರ ರೂಪಾಯಿಯನ್ನು ದೂರುದಾರನಿಗೆ ಹಿಂದಿರುಗಿಸುವಾಗ ಪೊಲೀಸರು ಟ್ರ್ಯಾಪ್ ಮಾಡಿ 3 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
