ಬೆಂಗಳೂರು:ಹಲವರ ವಿರೋಧದ ನಡವೆಯೂ ನಿಗದಿತ ದಿನಾಂಕದಂದೇ ಗೆಜೆಟೆಡ್​ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​ಸಿ) ಮುಂದಾಗಿದ್ದು, ಅದರಂತೆ ಸೋಮವಾರ (ಆ.24) ಪರೀಕ್ಷೆ ನಡೆಯಲಿದೆ.
ಒಟ್ಟು 106 ಗೆಜೆಟೆಡ್​ ಪ್ರೊಬೇಷನರಿ ಹುದ್ದೆಗೆ ಈ ಪರೀಕ್ಷೆ ನಡೆಯಲಿದ್ದು, 1,65,258 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ 10 ಕಡೆ ಪರೀಕ್ಷೆ ನಡೆಯಲಿದ್ದು, ಬೆಂಗಳೂರು, ಬೆಳಗಾವಿ, ಬಳ್ಳಾರಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ರಾಯಚೂರು ಮತ್ತು ಶಿವಮೊಗ್ಗದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಎಕ್ಸಾಂ ನಡೆಯಲಿದೆ.ಇದನ್ನೂ ಓದಿರಿvideo/ ಗರಿಬಿಚ್ಚಿ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿದ ನವಿಲು… ಇದು ‘ನಮೋ’ ಅಮೂಲ್ಯ ಕ್ಷಣಗಳು!
ಕರೊನಾ ಲಾಕ್​ಡೌನ್​ನಿಂದ ಊರು ಸೇರಿದ್ದ ಅಭ್ಯರ್ಥಿಗಳು ಪರೀಕ್ಷೆಗಾಗಿ ದೂರದ ಊರುಗಳಿಂದ ಪರೀಕ್ಷಾ ಕೇಂದ್ರಗಳಿರುವ ನಗರಗಳಿಗೆ ಆಗಮಿಸಿದ್ದಾರೆ.ಕರೊನಾ ಇರುವುದರಿಂದ ಬಹುತೇಕ ವಾರಿಯರ್ಸ್​ಗಳು ಕರ್ತವ್ಯ ನಿರತವಾಗಿದ್ದು, ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಈ ವೇಳೆ ಪರೀಕ್ಷೆ ನಡೆಸುವುದು ಸೂಕ್ತವಲ್ಲವೆಂದು ಮಾಜಿ ಸಿಎಂಗಳಾದ ಎಚ್​.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಕೆಲ ರಾಜಕೀಯ ಮುಖಂಡರು ಸಲಹೆ ನೀಡಿದ್ದರು. ಪರೀಕ್ಷೆಯನ್ನು ಮುಂದೂಡಿ ಎಂದು ಆಗ್ರಹಿಸಿದ್ದರು. ಹಲವಾರು ಅಭ್ಯರ್ಥಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ನಿಗದಿತ ದಿನಾಂಕದಂದೇ ಕೆಪಿಎಸ್​ಸಿ ಪರೀಕ್ಷೆ ನಡೆಸುತ್ತಿದೆ. ಅಭ್ಯರ್ಥಿಗಳೇ ನಿಮ್ಮ ಕನಸನ್ನು ನನಸು ಮಾಡಿಕೊಳ್ಳುವ ಕಾಲ ಸನಿಹದಲ್ಲಿದೆ. ಶುಭವಾಗಲಿ… ಆಲ್ ದಿ ಬೆಸ್ಟ್…
ಮುಂಜಾಗ್ರತೆ ಕ್ರಮ:ಆರೋಗ್ಯ ಇಲಾಖೆ ನೀಡಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್​ಒಪಿ) ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮ ಅನುಸರಿಸುವ ಮೂಲಕ ಪರೀಕ್ಷೆ ನಡೆಸಲಿದೆ. ಪ್ರತಿ ಅಭ್ಯರ್ಥಿಗೂ ಎರಡು ಮೀಟರ್​ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಕೆಮ್ಮು, ಉಸಿರಾಟದ ತೊಂದರೆ, ನೆಗಡಿಯಂತಹ ಲಕ್ಷಣ ಕಂಡು ಬರುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಸಿಬ್ಬಂದಿಗೆ ಮಾಸ್ಕ್​ ಕಡ್ಡಾಯ.
https://www.facebook.com/VVani4U/videos/792261088186634
ಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್​… ಹುಡುಕಿಕೊಡಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + sixteen =
Remember me
