ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2022ನೇ ಸಾಲಿನ 51 ವಿವಿಧ ದತ್ತಿ ಪ್ರಶಸ್ತಿಗಳಿಗೆ 57 ಬರಹಗಾರರನ್ನು ಆಯ್ಕೆ ಮಾಡಿದೆ.
ದೇಶ ವಿದೇಶಗಳಿಂದ 4 ಸಾವಿರ ಕೃತಿಗಳು ಪ್ರಶಸ್ತಿಗೆ ಬಂದಿದ್ದವು. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದಲ್ಲಿ 25 ಜನ ಪರಿಣಿತರ ಸಮಿತಿ ದತ್ತಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿವೆ. ಈ ದತ್ತಿ ಪ್ರಶಸ್ತಿಗಳು 250ರಿಂದ 10 ಸಾವಿರದವರೆಗೆ ನಗದು ಬಹುಮಾನ ಹೊಂದಿವೆ. ಪ್ರಶಸ್ತಿಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುವುದು ಎಂದು ಪರಿಷತ್ತು ತಿಳಿಸಿದೆ.
ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಕೃತಿಗಳು: ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿಗೆ ಮುಂಬೈನ ಶಾರದಾ ಎ. ಅಂಚನ್ ಅವರ ರಕ್ತ ಶುದ್ಧಿ, ಆರೋಗ್ಯ ವೃದ್ಧಿ, ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿಗೆ ಮೈಸೂರಿನ ಸುಕನ್ಯಾ ಸೂನಗಹಳ್ಳಿ ಅವರ ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ, ಭಾರತಿ ಮೋಹನ ಕೋಟಿ ದತ್ತಿಗೆ ಎಸ್.ಬಿ. ರಂಗನಾಥ ಅವರ ಕಗ್ಗತ್ತಲ ಕಾಲ, ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿಗೆ ಅಥಣಿಯ ಅಜಿತ ಮುರುಗುಂಡೆ ಅವರ ರತ್ನಾಕರವರ್ಣಿಯ ಹಾಡುಗಳು ಸಾಹಿತ್ಯ ಮತ್ತು ತಾತ್ವಿಕತೆ ಕೃತಿ ಭಾಜನವಾಗಿವೆ.
ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿಗೆ ಧಾರವಾಡದ ಶಾಂತಿನಾಥ ದಿಬ್ಬದ ಅವರ ಅಭಿನವ ಪಂಪಭಾರತ, ವಸುದೇವ ಭೂಪಾಲಂ ದತ್ತಿಗೆ ಮೂಡುಬಿದಿರೆಯ ಜಯಪ್ರಕಾಶ ಮಾವಿನಕುಳಿ ಅವರ ಅನುರೂಪ, ಬೆಂಗಳೂರಿನ ಎಸ್.ಜಿ. ಮಾಲತಿಶೆಟ್ಟಿ ಅವರ ದಡ ಸೇರಿದ ದೋಣಿ, ಹಾಸನದ ವತ್ಸಲೆ ಸುರೇಶ್ ಅವರ ಕಪ್ಪೆ ಮದುವೆ, ಬೆಂಗಳೂರಿನ ಸುಮಾ ಸತೀಶ್ ಅವರ ಹಾದಿಯಲ್ಲಿ ಮುಳ್ಳುಗಳು, ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿಗೆ ಧಾರವಾಡದ ನಳಿನಿ ಟಿ. ಭೀಮಪ್ಪ ಅವರ ಸೆಲ್ವಿ…, ಡಾ.ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿಗೆ ಉಡುಪಿಯ ವಿರೂಪಾಕ್ಷ ದೇವರಮನೆ ಅವರ ಕ್ರಾಸ್ ರೋಡ್ಸ್ ಕಿಶೋರದ ಕವಲು ಹಾದಿ, ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಗೆ ದಾವಣಗೆರೆಯ ಗಾಯಿತ್ರಿ ರಾಜ್ ಅವರ ಟ್ರಾಯ್, ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿಗೆ ಬೆಂಗಳೂರಿನ ಎ.ಜಿ. ರತ್ನಕಾಳೇಗೌಡ ಅವರ ಮಡಿಲ ಕೆಂಡ ಕೃತಿ ಆಯ್ಕೆಯಾಗಿವೆ.
ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿಗೆ ಚಿಕ್ಕಮಗಳೂರಿನ ನಂರುಶಿ ಕಡೂರು ಅವರ ಬೆಂಕಿ ಹರಿಸಿದ ನದಿ, ಅಮೃತ ಸಾಹಿತ್ಯ ಸವಿ ನೆನಪಿನ ದತ್ತಿಗೆ (ಎಲ್. ಬಸವರಾಜು ದತ್ತಿ) ಚಿಕ್ಕಬಳ್ಳಾಪುರದ ಕೆ.ಪಿ. ನಾರಾಯಣಪ್ಪ ಅವರ ದಲಿತ ಚಳುವಳಿ, ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿಗೆ ತುಮಕೂರಿನ ಮಂಜುನಾಥ ಕುಣಿಗಲ್ ಅವರ ಕುಣಿಗಲ್ ಕಂದಹಾರ್, ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿಗೆ ಕುಂದಾಪುರದ ಶಶಿಧರ ಹಾಲಾಡಿ ಅವರ ಅಬ್ಬೆ, ಗೌರುಭಟ್ ದತ್ತಿಗೆ ಉತ್ತರ ಕನ್ನಡದ ಗೀತಾ ವಸಂತ ಅವರ ಅವಳ ಅರಿವು, ಗಂಗಮ್ಮ ಟಿ. ಶಿವಣ್ಣ ದತ್ತಿಗೆ ಯಾದಗಿರಿಯ ಸಿದ್ದರಾಮ ಹೊನ್ಕಲ್ ಅವರ ಸಡಗರದ ಅಚ್ಚಪ್ಪಗೌಡ ಸುಬೇದಾರರು, ಡಾ.ಹಾ.ಮಾ. ನಾಯಕ ಸ್ಮಾರಕ ದತ್ತಿಗೆ ಬೆಳಗಾವಿಯ ಪಿ. ನಾಗರಾಜ್ ಅವರ ಕನ್ನಡ ಸಂಸ್ಕೃತಿ: ಸಂವಹನ, ಡಾ. ವೀಣಾ ಶಾಂತೇಶ್ವರ ದತ್ತಿಗೆ ಮಂಡ್ಯದ ದಯಾನಂದ ಅವರ ಬುದ್ಧನ ಕಿವಿ ಕೃತಿಗಳು ಪ್ರಶಸ್ತಿ ಪಟ್ಟಿಯಲ್ಲಿದೆ.
ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿಗೆ ತುಮಕೂರಿನ ವಿಜಯಾ ಮೋಹನ್ ಅವರ ಮೇವು, ಪಳಕಳ ಸೀತಾರಾಮಭಟ್ಟ ದತ್ತಿಗೆ ಬೆಂಗಳೂರಿನ ರಾಮಕೃಷ್ಣಯ್ಯ ಅವರ ಮನಸ್ಸಿದ್ದರೆ ಮಾರ್ಗ, ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿಗೆ ವಿಜಯಪುರದ ಶಂಕರ ಬೈಚಬಾಳ ಅವರ ಕೆಂಪು ಹುಡುಗಿ ಕಪ್ಪು ಕಾಲ್ಮರಿ, ಗೌರಮ್ಮ ಹಾರ್ನಹಳ್ಳಿ ಕೆ. ಮಂಜಪ್ಪ ದತ್ತಿಗೆ ಚಿಕ್ಕಮಗಳೂರಿನ ಶುಭಶ್ರೀ ಭಟ್ಟ ಅವರ ಹಿಂದಿನ ನಿಲ್ದಾಣ, ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿಗೆ ಉಡುಪಿಯ ಆನಂದರಾಮ ಉಪಾಧ್ಯ ಅವರ ಸೋಮೇಶ್ವರ ಶತಕ ಸೌರಭ, ಜಿ.ಆರ್. ರೇವಯ್ಯ ದತ್ತಿಗೆ ಮೈಸೂರಿನ ಅಮ್ಮಸಂದ್ರ ಸುರೇಶ್ ಅವರ ಮಹಾ ಮಾನವತಾವಾದಿ, ಆರ್.ಜೆ. ಗಲಗಲಿ ದತ್ತಿಗೆ ಬೆಳಗಾವಿಯ ಸುರೇಶ ಮುದ್ದಾರ ಅರಮನೆಯಿಂದ ಅರಿವಿನರಮನೆಗೆ, ಕಾಕೋಳು ಸರೋಜಮ್ಮ ದತ್ತಿಗೆ ಕೋಲಾರದ ಅಮರೇಂದ್ರ ಹೊಲ್ಲಂಬಳ್ಳಿ ಅವರ ಚಂದ್ರಗುಪ್ತ, ನಾ.ಕು. ಗಣೇಶ್ ದತ್ತಿಗೆ ಕೊಪ್ಪಳದ ವೀರಪ್ಪ ಮಲ್ಲಪ್ಪ ನಿಂಗೋಜಿ ಅವರ ಕರವೀರನ ಶಾಯಿರಿಗಳು, ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿಗೆ ಬೆಂಗಳೂರಿನ ಕಾಕೋಳು ಶೈಲೇಶ್ ಅವರ ಮುತ್ತಿನ ಮುಕುಟ ಮಣಿ ಕೃತಿ ಆಯ್ಕೆಯಾಗಿದೆ.
ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿಗೆ ಹೊನ್ನಾಳಿಯ ಸದಾಶಿದ ಸೊರಟೂರು ಅವರ ಅರ್ಧ ಬಿಸಿಲು ಅರ್ಧ ಮಳೆ, ಮಲ್ಲಿಕಾ ಪ್ರಶಸ್ತಿ ದತ್ತಿಗೆ ಬೆಂಗಳೂರಿನ ನೂತನ ದೋಶೆಟ್ಟಿ ಅವರ ಮಾತೆಂದರೆ ಏನು ಗೂಗಲ್?, ಅಂತರರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿಗೆ ಬೆಂಗಳೂರಿನ ಸಂಧ್ಯಾ ವಿ. ಅವರ ಪ್ರಾಚೀನ ಕರ್ನಾಟಕದ ಮಹಿಳಾ ಲೋಕ, ಶಾರದಾ ರಾಮಲಿಂಗಪ್ಪ ದತ್ತಿಗೆ ಮುದ್ದೆ ಬಿಹಾಳದ ಚೈತ್ರಾ ಶಿವಯೋಗಿಮಠ ಅವರ ಪೆಟ್ರಿಕೋರ್, ಲಿಂ. ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿಗೆ ವಿಜಯಪುರದ ಸುರೇಖಾ ಜಿ. ರಾಠೋಡ ಅವರ ಕ್ರೀಡಾ ಲೋಕದ ಮಹಿಳಾ ರತ್ನಗಳು, ನೀಲಗಂಗಾ ದತ್ತಿಗೆ ಹಾಸನದ ವಿಜಯಲಕ್ಷ್ಮೀ ನುಗ್ಗೇಹಳ್ಳಿ ಅವರ ಒಲವ ಸಿರಿ ಹೊತ್ತಿಗೆ, ಕೆ ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿಗೆ ಚಿಕ್ಕನಾಯಕನಹಳ್ಳಿಯ ಕೃಷ್ಣಾಬಾಯಿ ಹಾಗಲವಾಡಿ ಅವರ ಧರ್ಮಸಂಸ್ಥಾನ ಹಾಗಲವಾಡಿ ಪಾಳೆಗಾರರು ಕೃತಿ ಭಾಜನವಾಗಿದೆ.
ಶಾರದಾ ಆರ್. ರಾವ್ ದತ್ತಿಗೆ ಮಂಗಳೂರಿನ ದೀಪ್ತಿ ಎಸ್. ರಾವ್ ಅವರ ಸಾವಿನಂಚಿನ ಸಂವಾದ, ಎಚ್. ಕರಿಯಣ್ಣ ದತ್ತಿಗೆ ಮೈಸೂರಿನ ಪ್ರೇಮಕ್ಕ ಮಾದಪ್ಪ ಅವರ ಬಯಲ ಬಾನಾಡಿಗಳು, ಡಾ. ಎಚ್. ನರಸಿಂಹಯ್ಯ ದತ್ತಿಗೆ ಚಿಕ್ಕಮಗಳೂರಿನ ಕೆ. ಚಂದ್ರಮೌಳಿ ಅವರ ತ್ರಿಪಥಗಾಮಿನಿ ಗಂಗಾ, ಕೆ.ವಿ. ರತ್ನಮ್ಮ ದತ್ತಿಗೆ ಬೆಳಗಾವಿಯ ಇಂದಿರಾ ಮೋಟೆಬೆನ್ನೂರು ಅವರ ಭಾವ ಬೆಳಗು, ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿಗೆ ಉತ್ತರ ಕನ್ನಡದ ಸುಚಿತ್ರ ಹೆಗಡೆ ಅವರ ಜಗವ ಸುತ್ತುವ ಮಾಯೆ, ಕೋಲಾರದ ಗುರುಮೂರ್ತಿ ಜಯಮಂಗಲ ಅವರ ಉರಿವ ನೆಲದ ನೆರಳು, ಪಿ. ಶಾಂತಿಲಾಲ್ ದತ್ತಿಗೆ ಹುಬ್ಬಳ್ಳಿಯ ಜೀವಂಧರಕುಮಾರ್ ಕೆ. ಹೋತಪೇಟೆ ಅವರ ಸುನೀಲ ಪ್ರಾಕೃತ ಸಾಹಿತ್ಯ ಭಾಜನವಾಗಿದೆ.
ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿಗೆ ರಾಯಚೂರಿನ ಮಲ್ಲಪ್ಪ ಶಿವರಾಯಗೌಡ ಹರವಾಳ ಅವರ ಜಾನಪದವೇ ಜ್ಞಾನಪದ, ಕುಂಬಾಸ ಪ್ರಶಸ್ತಿ ದತ್ತಿಗೆ ಕೋಲಾರದ ಬಿ.ಪಿ. ನಾಗರಾಜ್ ಅವರ ದಮಯಂತಿಯ ಡಯಟಿಂಗ್, ಪ್ರೊ.ಡಿ.ಸಿ. ಅನಂತಸ್ವಾಮಿ ದತ್ತಿಗೆ ಬಾಗಲಕೋಟೆಯ ಎಂ.ಡಿ. ಚಿತ್ತರಗಿ ಅವರ ಗಾಯಗೊಂಡಿವೆ ಬಣ್ಣ, ಸಿಸು ಸಂಗಮೇಶ ದತ್ತಿಗೆ ದಾವಣಗೆರೆಯ ಸಂತೇಬೆನ್ನೂರು ಫೈಜ್ನಟ್ರಾಜ್ ಅವರ ಮಗಳಿಗೆ ಹೇಳದ ಕಥೆಗಳು, ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿಗೆ ರಾಯಚೂರಿನ ಮಹಾದೇವ ಎಸ್. ಪಾಟೀಲ ಅವರ ಸುಡುವ ತಂಗಾಳಿ, ಕೆ. ವಾಸುದೇವಾಚಾರ್ ದತ್ತಿಗೆ ಮುಂಬೈನ ಅನಿತಾ ಪಿ. ತಾಕೊಡೆ ನಿವಾಳಿಸಿ ಬಿಟ್ಟ ಕೋಳಿ ಕೃತಿ ಆಯ್ಕೆಯಾಗಿದೆ.
ಅಸುಂಡಿ ಹುದ್ದಾರ್ ಕೃಷ್ಣರಾವ್ ಸ್ಮಾರಕ ದತ್ತಿಗೆ ಲೀಲಾವತಿ ಕೆ. ಕುಲಕರ್ಣಿ ಅವರ ಚಂಪಕಮಾಲೆ, ಜಿ.ಪಿ. ರಾಜರತ್ನಂ ಸಂಸ್ಕರಣ ದತ್ತಿಗೆ ಉಡುಪಿಯ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಬೆಳಕು ನೀಡುವ ಕೃತಿ, ಡಾ.ಜಿ. ಚಂದ್ರಮೌಳೇಶ್ವರ ದತ್ತಿಗೆ ಬೆಂಗಳೂರಿನ ವಿ.ವಿ. ಗೋಪಾಲ್ ಅವರ ನಿತ್ಯ ಶಾಕುಂತಲೆ, ಬೋರಮ್ಮ ಗೋವಿಂದಪ್ಪ ದತ್ತಿಗೆ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರ ಮಸಣದ ದಾರಿ ಕೃತಿ ಆಯ್ಕೆಯಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 + 13 =
Remember me
