ಬೆಂಗಳೂರು:ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲ್ಪಡುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲು ಕರ್ನಾಟಕ ಪವರ್ ಕಾರ್ಪೆರೇಷನ್ ಲಿಮಿಟೆಡ್ ನಿರ್ದೇಶಕರಾಗಿರುವ ಜಿ. ಎಂ. ಗಂಗಾಧರ ಸ್ವಾಮಿ ಅವರನ್ನು ಚುನಾವಣಾಧಿಕಾರಿ ಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
2021ರ ಮಾರ್ಚ್ 3ರಂದು ಪ್ರಸಕ್ತ ಕಾರ್ಯಕಾರಿ ಸಮಿತಿ ಅವಧಿ ಮುಕ್ತಾಯಗೊಳ್ಳಲಿದೆ. ನಿಬಂಧನೆಗಳಂತೆ(ಬೈಲಾ) ಮೂರು ತಿಂಗಳು ಮೊದಲು ಚುನಾವಣಾ ಪ್ರಕ್ರಿಯೆ ಆರಂಭವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಅವಧಿ ಪೂರ್ಣಗೊಳ್ಳುವ ಮೂರು ತಿಂಗಳು ಮೊದಲು ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. ಈಗಾಗಲೆ ಕಸಾಪ ಚುನಾವಣಾ ಕಣದಲ್ಲಿ ಪ್ರಮುಖವಾಗಿ ನಾಲ್ವರು ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದು, ಚುನಾವಣಾಧಿಕಾರಿ ನೇಮಕದ ನಂತರ ಪ್ರಕ್ರಿಯೆ ಮತ್ತಷ್ಟು ಚುರುಕಾಗಿದೆ.
ಚುನಾವಣಾಧಿಕಾರಿ ಕಾರ್ಯ: ಚುನಾವಣಾಧಿಕಾರಿ ಮೊದಲಿಗೆ ಕಸಾಪ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ವಿಧಾನಸಭಾವಾರು ಹಾಗೂ ರಾಜ್ಯಾದ್ಯಂತ ತಾಲೂಕು ಹಾಗೂ ಕೆಲವೆಡೆ ಹೋಬಳಿ ಮಟ್ಟದಲ್ಲಿ ಮತಗಟ್ಟೆ ಸ್ಥಾಪನೆಯತ್ತ ಗಮನ ಹರಿಸಬೇಕಾಗುತ್ತದೆ. ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳಿಸಿದ ನಂತರ ಚುನಾವಣಾಧಿಕಾರಿ ಮಾತೃ ಇಲಾಖೆಗೆ ಮರಳುತ್ತಾರೆ. ಈ ಬಾರಿ 3 ಲಕ್ಷಕ್ಕೂ ಹೆಚ್ಚು ಮತದಾರರು ಅರ್ಹರಾಗುವ ಅಂದಾಜಿದ್ದು, 1 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆಯಿದೆ.
ನಾಲ್ವರ ಸಂಚಲನ:ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಲ್ವರ ನಡುವೆ ಪೈಪೋಟಿ ಇದೆ. ದೂರದರ್ಶನದ ನಿವೃತ್ತ ಮಹಾನಿರ್ದೇಶಕ ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನೇರ ಸಂಬಂಧ ಇಲ್ಲವಾದರೂ ಕಸಾಪ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗಳನ್ನು ಪ್ರಚಾರದಲ್ಲಿ ಬಿಂಬಿಸುತ್ತಿದ್ದಾರೆ. ದೂರದರ್ಶನದ ಜನಪ್ರಿಯ ಕಾರ್ಯಕ್ರಮ ಮಧುರಮಧುರವೀ ಮಂಜುಳ ಗಾನದ ಮೂಲಕ ಪರಿಚಯಿಸಿಕೊಳ್ಳುತ್ತಿದ್ದಾರೆ. ನವದೆಹಲಿಯ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರ ಪ್ರಸಾರ ಮಾಡಿದ ಕನ್ನಡಿಗ ಅಧಿಕಾರಿ ಎಂಬುದೂ ಅವರ ಪರಿಚಯದಲ್ಲಿ ಸೇರಿಕೊಂಡಿದೆ.
ಕೆಎಸ್​ಆರ್​ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಪ್ರಸ್ತುತ ಕಾರ್ಯಕಾರಿ ಸಮಿತಿ ಗೌರವ ಕಾರ್ಯದರ್ಶಿಯಾಗಿದ್ದ ವ.ಚ. ಚನ್ನೇಗೌಡ, ಮೂರು ದಶಕಗಳಿಂದ ಕಸಾಪ ಸಂಪರ್ಕ ಹೊಂದಿದ್ದು, ಕಸಾಪ ಸಾಮಾನ್ಯ ಸದಸ್ಯರ ಜತೆಗೆ ಕೆಎಸ್​ಆರ್​ಟಿಸಿ ಕ್ರಿಯಾ ಸಮಿತಿಯ ಸದಸ್ಯರೆಲ್ಲರೂ ಬೆಂಬಲ ನೀಡುತ್ತಾರೆ ಎಂಬ ಆಲೋಚನೆ ಹೊಂದಿದ್ದಾರೆ.
ಕನ್ನಡ ಜನಶಕ್ತಿ ಕೇಂದ್ರದ ಸ್ಥಾಪಕ ಹಾಗೂ ಈ ಹಿಂದೆ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಸಿ.ಕೆ. ರಾಮೇಗೌಡ ತಮ್ಮ ನಲವತ್ತು ವರ್ಷದ ಕಸಾಪ ಜತೆಗಿನ ಸಂಬಂಧ ಹಾಗೂ ಕನ್ನಡ ಜನಶಕ್ತಿ ಕೇಂದ್ರದ ಮೂಲಕ ತಮ್ಮ ಚಟುವಟಿಕೆಗಳು ಹಾಗೂ ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದರ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದಾರೆ.
ಸಹಕಾರ ಕ್ಷೇತ್ರದ ಅನುಭವದ ಜತೆಗೆ ಪ್ರಸ್ತುತ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದ ಡಾ. ಶೇಖರಗೌಡ ಮಾಲಿಪಾಟೀಲ ಅವರು ನಾಲ್ಕು ದಶಕದಿಂದ ಕಸಾಪದೊಂದಿಗಿನ ಸಂಬಂಧ, 2011ರಲ್ಲಿ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದಾಗ ಗಂಗಾವತಿಯಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಅನುಭವವನ್ನು ಬಿಂಬಿಸುತ್ತಿದ್ದಾರೆ.
ಏಪ್ರಿಲ್ ನಂತರ ಚುನಾವಣೆ?
ಕಸಾಪ ಬೈಲಾ ಪ್ರಕಾರ, ಚುನಾವಣಾಧಿಕಾರಿಯು ಚುನಾವಣೆ ನಡೆಯುವ 75 ದಿನಗಳ ಮೊದಲು ಸದಸ್ಯರ ಪಟ್ಟಿಯನ್ನು ಜಿಲ್ಲಾವಾರು ಪ್ರಕಟಿಸಬೇಕು. ಕನಿಷ್ಠ ಏಪ್ರಿಲ್ ನಂತರವಷ್ಟೆ ಚುನಾವಣೆ ನಡೆಸಬೇಕಾಗುತ್ತದೆ. ಈಗಿನ ಕಾರ್ಯಕಾರಿ ಸಮಿತಿ ಮಾರ್ಚ್ 3ಕ್ಕೆ ಮುಗಿದಿರುತ್ತದಾದರೂ 6 ತಿಂಗಳವರೆಗೆ ಅಥವಾ ಚುನಾವಣೆ ನಡೆಯುವವರೆಗೆ ಮುಂದುವರಿಯಲು ಅವಕಾಶವಿರುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 2 =
Remember me
