ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2023-24ನೆಯ ಸಾಲಿನ ಶಾಸನಶಾಸ್ತ್ರ ಡಿಪ್ಲೊಮಾ ತರಗತಿಗೆ ಅರ್ಜಿ ಸಲ್ಲಿಸಲು ಅವಧಿಯನ್ನು ಅ. 31ರವರೆಗೆ ವಿಸ್ತರಣೆ.
ಈ ಹಿಂದೆ ಅರ್ಜಿ ಸಲ್ಲಿಸಲು ಸೆ. 30ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ದಂಡ ಶುಲ್ಕ 50 ರೂ.ಗಳೊಂದಿಗೆ ಅವಧಿ ವಿಸ್ತರಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು 25 ರೂ. ಪಾವತಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಯಲ್ಲಿ (ಬೆಂಗಳೂರು) ಪಡೆಯಬಹುದು. 25 ರೂ. ಹೆಚ್ಚುವರಿ ಪಾವತಿಸಿ ಅಂತರ್ಜಾಲ ತಾಣ ಡಿಡಿಡಿ..ಜ್ಞಿ ಮೂಲಕವೂ ಅರ್ಜಿ ಪಡೆದುಕೊಳ್ಳಬಹುದಾಗಿದೆ.
‘ಶಾಸನಶಾಸ್ತ್ರ ಡಿಪ್ಲೊಮಾ ಅವಧಿಯು ಒಂಬತ್ತು ತಿಂಗಳದ್ದಾಗಿದ್ದು, ವಾರಕ್ಕೆ 4 ದಿನ ಸಂಜೆ 6-7ರವರೆಗೆ ತರಗತಿಗಳು ನಡೆಯಲಿದೆ(ಮಂಗಳವಾರದಿಂದ ಶುಕ್ರವಾರದ ವರೆಗೆ). ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ನಡೆಸಲಾಗುವುದು. ಶಾಸನಶಾಸ್ತ್ರದಲ್ಲಿ ಶಾಸನಗಳ ಲಿಪಿಗಳನ್ನು ಓದುವ, ಶಾಸನಗಳ ಸಂಗ್ರಹ ವಿಧಾನ, ಅಧ್ಯಯನ, ಸಂಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುವುದು.
ವಿವರಗಳಿಗೆ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು – 560018. ದೂ: 080 26612991, 26623584, 22423867 ಸಂಪರ್ಕಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
