ಉಡುಪಿ:ಕಾಸರಗೋಡಿನ ಪೊಕ್ಸೊ ಆರೋಪಿಯೊಬ್ಬ ಉಡುಪಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ.
ಕೂಡ್ಲು ಕಾಳ್ಯಾಂಗಾಡ್​ನ ಮಹೇಶ್( 28) ಫೋಕ್ಸೋ ಆರೋಪಿ. ಶೌಚಗೃಹದಲ್ಲಿ ಬಾಲಕಿಯ ವಿಡಿಯೋ ಮಾಡಿದ್ದ ಆರೋಪಿ, ಜುಲೈ 22ರಂದು ಕಾಸರಗೋಡು ಬಂದರಿನ ಬಳಿ ವಿಚಾರಣೆ ವೇಳೆ ಸಮುದ್ರಕ್ಕೆ ಹಾರಿದ್ದ. ಸಾಕಷ್ಟು ಹುಡುಕಾಡಿದ್ದರು ಕೂಡ ಆರೋಪಿಯ ಪತ್ತೆಯಿರಲಿಲ್ಲ.
ಇದನ್ನೂ ಓದಿ:ಹೊಟ್ಟೆ ನೋವೆಂದು ಹೆರಿಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಆಪರೇಷನ್​ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!
ಇದಾದ ಬಳಿಕ ಆತನ ಬಗ್ಗೆ ಉಡುಪಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇಂದು ಆರೋಪಿಯ ಶವ ಕೊಳೆತ ಸ್ಥಿತಿಯಲ್ಲಿ ಹಾಗೂ ಅರ್ಧ ಅಸ್ಥಿಪಂಜರ ಕಾಣುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಲ ತೀರದಲ್ಲಿ ಬಿದ್ದಿದ ಶವವನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದ್ದು, ಶವದಲ್ಲಿದ್ದ ಬಟ್ಟೆ ಮತ್ತು ಕೈಕೋಳ ಗಮನಿಸಿ ಶವ ಚಹರೆಯನ್ನು ಪತ್ತೆಹಚ್ಚಲಾಗಿದೆ.(ದಿಗ್ವಿಜಯ ನ್ಯೂಸ್​)
ಮಿಸ್​ ಇಂಡಿಯಾ ಫೈನಲಿಸ್ಟ್​ ಈಗ ಯುಪಿಎಸ್ಸಿ ಸಾಧಕಿ: ಮಾಡೆಲಿಂಗ್​ ಚೆಲುವೆಯ ಯಶಸ್ಸಿನ ಕತೆ ಇದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − two =
Remember me
