ಹುನಗುಂದ:ಬಣಜಿಗ ಸಮುದಾಯದವರಿಗೆ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ಶನಿವಾರ ಬಾಗಲಕೋಟೆಯ ಹುನಗುಂದ ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಬಣಜಿಗ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಈ ವಿಷಯ ತಿಳಿದ ಕೂಡಲೇ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಕಾಶಪ್ಪನವರ್, ಕೆಲಕಾಲ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು. “ಹುಕ್ಕೇರಿಯಲ್ಲಿ ಬಣಜಿಗ ಸಮಾಜದ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದೆ. ಆದರೆ ಅದು ಸಮಾಜದ ವಿರುದ್ದ ಅಲ್ಲ. ಪಂಚಮಸಾಲಿಗಳು ಮತ್ತು ಬಣಜಿಗರು ಬೀಗರಿದ್ದಂತೆ. ನಮ್ಮ ತಂದೆಯವರ ಕಾಲದಿಂದ ಈ ಸಂಬಂಧ ಇಟ್ಟುಕೊಂಡು ಬಂದಿದ್ದೇನೆ. ನಾನು ಶಾಸಕನಾಗಿದ್ದಾಗ ಬಣಜಿಗ ಸಮಾಜದವರಿಗೂ ರಾಜಕೀಯ ಸ್ಥಾನಮಾನ ಕೊಟ್ಟಿದ್ದೇನೆ. ನಾನು ಬಣಜಿಗ ಸಮಾಜದವರಿಗೆ ನೋವು ಆಗುವಂತೆ ನಡೆದುಕೊಂಡಿದ್ದರೆ ಅದಕ್ಕೆ ಕ್ಷಮೆ ಕೇಳುತ್ತೇನೆ. ಕೂಡಲಸಂಗಮನಾಥನ ಮೇಲಾಣೆ, ಇನ್ನು ಮುಂದೆ ಯಾವತ್ತೂ ಹಾಗೆ ನಡೆದುಕೊಳ್ಳುವುದಿಲ್ಲ” ಎಂದರು. ಕೊನೆಗೆ ಯತ್ನಾಳ್​ರ ಬಗ್ಗೆ ಹೇಳಲು ಹೊರಟ ಕಾಶಪ್ಪನವರನ್ನು ತಡೆದ ಪ್ರತಿಭಟನಾಕಾರರು, ಅವರ ಬಗ್ಗೆ ಬೇಡ ನಿಮ್ಮ ಬಗ್ಗೆಯಷ್ಟೇ ಮಾತನಾಡಿ ಎಂದರು.
ವಿವಾದಕ್ಕೆ ಸುಖಾಂತ್ಯ ಹಾಡಿದ ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಪ್ರತಿಭಟನೆ ಕೈಬಿಟ್ಟ ಬಣಜಿಗರು ಯತ್ನಾಳರ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಿದರು. ಈ ಪ್ರತಿಭಟನೆ ರಾಜ್ಯ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಂದಪ್ಪ ಜವಳಿ, ಮತ್ತು ಕಾರ್ಯದರ್ಶಿ ರವಿ ಕುಮಟಗಿ ನೇತೃತ್ವದಲ್ಲಿ ನಡೆಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 10 =
Remember me
