ಬೆಂಗಳೂರು:ಹುಟ್ಟಿದ ಜೀವಾತ್ಮ ಪರಮಾತ್ಮನನ್ನು ಸೇರವ ಪರಮ ಪದವಿಯನ್ನು ಪಡೆಯುವುದಕ್ಕೆ ಮೊದಲು ಉತ್ತಮ ಗುರವಿಗೆ ಶರಣಾಗಬೇಕು. ಈ ಸೂಚ್ಯ ಅರ್ಥವನ್ನು ಸಾರುವ ಸೂತ್ರವೇ ಪಡ್ವಿಡಿ ಸೂತ್ರ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಆಶ್ರಯದಲ್ಲಿ ಧನುರ್ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಎರಡನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜಗದ್ಗುರು ಪಂಚಾಚಾಚಾರ್ಯರು ಉಪದೇಶಿಸದ ಪಂಚಸೂತ್ರಗಳಲ್ಲಿ ಪ್ರಥಮ ಸೂತ್ರ ಪಡ್ವಿಡಿ. ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಉಪದೇಶಿಸಿದ ಪಡ್ವಿಡಿ ಸೂತ್ರದ ಅರ್ಥ; ಪದ+ವಿಧಿ = ಪದ್ವಿಧಿ ಅಥವಾ ಪಡ್ವಿಡಿ. ಪದ ಎಂದರೆ ಪರಮ ಪದ, ಮುಕ್ತಿ ಎಂಬರ್ಥವಿದ್ದು, ಅಂತಹ ಪರಮಪದವಿಯನ್ನು ಪಡೆಯಲು ಶಿವ ನೀಡಿರುವ ಆದೇಶವೇ ವಿಧಿ(ನಿಯಮ). ಆ ನಿಯಮವನ್ನು ವಿವರಿಸುವ ಅದ್ಭುತ ಆಧ್ಯಾತ್ಮ ಸಾರವನ್ನು ಒಳಗೊಂಡಿರುವ ಪಡ್ವಿಡಿ ಸೂತ್ರವು; ಭಗವಂತನೊಂದಿಗೆ ಲಿಂಗಾಂಗ ಸಾಮರಸ್ಯವನ್ನು ಸಾಧಿಸುವುದಕ್ಕೆ ಪೂರಕವಾಗಿದ್ದು, ಇದನ್ನು ಅರ್ಥೈಸಿಕೊಂಡು ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಉತ್ತಮ ಗುರುವಿಗೆ ಶರಣಾಗಬೇಕು ಎಂದರು.
ಜಗದ್ಗುರು ರೇಣುಕಾಚಾರ್ಯರು ಪಡ್ವಿಡಿ ಸೂತ್ರದ ಮುಖೇನ ಬೋಧಿಸಿದ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವನ್ನು ಶಿವಯೋಗಿ ಶಿವಾಚಾರ್ಯರು ರೇಣುಕಾಗಸ್ತ್ಯ ಸಂವಾದ ರೂಪದಲ್ಲಿ ರಚಿಸಿದ್ದು, ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿ ಎಂದು ಪ್ರಸಿದ್ಧವಾಗಿದೆ ಎಂದು ಜಗದ್ಗುರುಗಳು ವಿವರಿಸಿದರು.
ಸಮಾರಂಭದಲ್ಲಿ “ವೀರಶೈವ ಅಷ್ಟಾವರಣ ವಿಜ್ಞಾನಂ” ಎಂಬ ಕಾಶೀ ಜಗದ್ಗುರುಗಳ ಹಿಂದಿ ಗ್ರಂಥದ ಇಂಗ್ಲೀಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿಭೂತಿಪುರ, ಶಿವಗಂಗೆ ಮಠದ ಶ್ರೀಗಳು ಹಾಗೂ ಹಿರಿಯ ವಿದ್ವಾಂಸ ಡಾ. ಎಂ.ಶಿವಕುಮಾರ ಸ್ವಾಮಿ, ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಬಿ.ಎಸ್.ಪರಮಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
