|ಪ್ರಕಾಶ್ ಮಂಜೇಶ್ವರಮಂಗಳೂರು
ಶನಿವಾರ ನಡೆದ ದ್ವಿತೀಯ ಪಿಯು ಪೂರ್ವ ಸಿದ್ಧತಾ (ಪ್ರಿಪರೇಟರಿ) ಪರೀಕ್ಷೆಯಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಇತಿಹಾಸ ಪ್ರಶ್ನೆಪತ್ರಿಕೆಯ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ!
ಕಾಶ್ಮೀರದ ತುಂಡು ನೆಲವನ್ನು ಬಿಟ್ಟುಕೊಡುವ ವಿಷಯವನ್ನು ಕೂಡ ಭಾರತೀಯರು ಸಹಿಸಲಾರರು. ಈ ವಿಷಯ ದೇಶಾದ್ಯಂತ ಜೀವಂತ ಇರುವಾಗಲೇ ಪಿಯು ಮಂಡಳಿ ಎಡವಟ್ಟು ಮಾಡಿದೆ. ನಿಮಗೆ ಒದಗಿಸಿರುವ ಭಾರತದ ಭೂಪಟದಲ್ಲಿ ಈ ಕೆಳಗಿನ ಯಾವುದಾದರೂ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಮತ್ತು ಗುರುತಿಸಿದ ಪ್ರತಿಯೊಂದು ಸ್ಥಳದ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆ ಬರೆಯಿರಿ ಎಂಬುದು ಪ್ರಶ್ನೆಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಕೇಳಲಾದ ಪ್ರಶ್ನೆ. ಜತೆಗೆ ಒದಗಿಸಿದ ಭಾರತದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೈಬಿಡಲಾಗಿದೆ. ಸಾಮಾನ್ಯವಾಗಿ ವರ್ಷಂಪ್ರತಿ ಪಿಯು ಇತಿಹಾಸ ವಿಭಾಗದ ಉಪನ್ಯಾಸಕರ ಸಂಘದ ಮೇಲುಸ್ತುವಾರಿಯಲ್ಲೇ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ. ಆದರೆ ಈ ವರ್ಷ ಪಿಯು ಮಂಡಳಿ ಸೂಚನೆಯಂತೆ ಪ್ರಶ್ನೆಪತ್ರಿಕೆ ಜವಾಬ್ದಾರಿಯನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘಕ್ಕೆ ವಹಿಸಲಾಗಿತ್ತು.
ವಿದ್ಯಾರ್ಥಿಗಳಿಂದಲೇ ವಿರೋಧ:ಆಗಿರುವ ಪ್ರಮಾದದ ಬಗ್ಗೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಹಂತದಲ್ಲಿ ಚರ್ಚೆ ಶುರುವಾಗಿದೆ. ಪ್ರತಿಭಟನೆ ಸಿದ್ಧತೆ ನಡೆಯುತ್ತಿದೆ. ಆದರೆ ಅಧಿಕಾರಿ ವರ್ಗ ಈ ಬಗ್ಗೆ ಆಕ್ಷೇಪ ಅಥವಾ ದೂರು ಬಂದಿಲ್ಲ ಎಂದು ಪ್ರತಿಕ್ರಿಯಿಸಿದೆೆ.
ಇತಿಹಾಸ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರದ ಅರ್ಧ ಭಾಗವನ್ನು ಕೈಬಿಟ್ಟಿರುವ ಆಕ್ಷೇಪ ಅಥವಾ ದೂರು ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.
|ಜಯಣ್ಣಉಪನಿರ್ದೇಶಕರು, ಪ.ಪೂ ಶಿಕ್ಷಣ ಇಲಾಖೆ, ದ.ಕ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
