| ನಿಶಾಂತ್ ಬಿಲ್ಲಂಪದವು ಪುತ್ತೂರು
ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ತರಬೇತಿ ನೀಡಬೇಕಾದ ‘ಕೌಶಲ ರಥ’ ಪುತ್ತೂರು ಖಾಸಗಿ ಬಸ್ ನಿಲ್ದಾಣದಲ್ಲಿ ತಿಂಗಳುಗಳಿಂದ ಅನಾಥವಾಗಿ ನಿಂತಿದ್ದು, ಯಾರೊಬ್ಬರೂ ಇದರತ್ತ ಸುಳಿಯುತ್ತಿಲ್ಲ. ಆದರೆ, ಬೆಂಗಳೂರಿನ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ದಾಖಲೆ ಪ್ರಕಾರ ಈಗಲೂ 15 ಮಂದಿಗೆ ಇದರಲ್ಲಿ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ…!
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಮೂಲಕ ಗ್ರಾಮೀಣ ಭಾಗದ ಮತ್ತು ಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುವ ನಿರುದ್ಯೋಗಿ ಯುವ ಜನತೆಗೆ ಜೀವನೋಪಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ’ಸ್ಕಿಲ್ ಆನ್ ವೀಲ್’ ಜಾರಿಗೆ ತಂದಿದೆ. 2022ರ ಏಪ್ರಿಲ್ 22ರಂದು ಕಲಬುರಗಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೌಶಲ ರಥಕ್ಕೆ ಚಾಲನೆ ನೀಡಿದ್ದರು. ವ್ಯವಸ್ಥಿತವಾಗಿ ನೀಡಬೇಕಾಗಿದ್ದ ತರಬೇತಿಯನ್ನು ಅಧಿಕಾರಿಗಳು ದಾಖಲೆಪತ್ರಕ್ಕೆ ಸೀಮಿತಗೊಳಿಸಿರುವುದರಿಂದ ಒಂದು ಒಳ್ಳೆಯ ಪರಿಕಲ್ಪನೆ ಹಳ್ಳ ಹಿಡಿದಿದೆ.
ರಾಯಚೂರಿನಲ್ಲಿ 75 ಮಂದಿಗೆ ಎಲೆಕ್ಟ್ರಿಕಲ್ ಟೆಕ್ನೀಷಿಯನ್ ತರಬೇತಿ ಹಾಗೂ ಯಾದಗಿರಿಯಲ್ಲಿ 75 ಮಂದಿಗೆ ಬ್ಯೂಟಿ ಥೆರಪಿಸ್ಟ್ ತರಬೇತಿ ನೀಡಲಾಗಿದೆ. ಬಳಿಕ ಬ್ಯೂಟಿ ಥೆರಪಿಸ್ಟ್ ವಾಹನ ಉಡುಪಿಗೆ ಆಗಮಿಸಿದ್ದು, 30 ಮಂದಿಗೆ ತರಬೇತಿ ಪೂರ್ಣಗೊಳಿಸಿ, ಇನ್ನೂ 15 ಮಂದಿಗೆ ತರಬೇತಿ ನೀಡುತ್ತಿದೆ. ಎಲೆಕ್ಟ್ರಿಕಲ್ ಟೆಕ್ನೀಷಿಯನ್ ವಾಹನ ದಕ್ಷಿಣ ಕನ್ನಡಕ್ಕೆ ಆಗಮಿಸಿದ್ದು, 15 ಮಂದಿಗೆ ತರಬೇತಿ ಪೂರ್ಣಗೊಳಿಸಿ, ಮತ್ತೆ 15 ಮಂದಿಗೆ ತರಬೇತಿ ನೀಡುತ್ತಿರುವುದಾಗಿ ದಾಖಲೆಯಲ್ಲಿ ಹೇಳಿಕೊಂಡಿದೆ.
ಆದರೆ, ವಾಸ್ತವದಲ್ಲಿ ರಥ ರಸ್ತೆ ಬದಿ ಅನಾಥವಾಗಿದೆ. ಪ್ರಾಯೋಗಿಕವಾಗಿ ಹಾಗೂ ಸೈದ್ಧಾಂತಿಕವಾಗಿ ತರಬೇತಿ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಹೊಂದಿದ್ದರೂ ಪ್ರಯೋಜನ ಇಲ್ಲವಾಗಿದೆ. ತರಬೇತಿಗಾಗಿ ನಿಯೋಜಿಸಿದ ಉನ್ನತ ಬೋಧಕರು ನಾಪತ್ತೆಯಾಗಿದ್ದು, ಕೆಲ ದಿನಗಳಿಂದ ಭದ್ರತೆಯೂ ಇಲ್ಲದೆ ನಿಂತಿರುವ ರಥದಲ್ಲಿರುವ ತರಬೇತಿ ವಸ್ತುಗಳು ಸಹಿತ ವಾಹನದ ಭಾಗಗಳು ಕಳ್ಳರ ಪಾಲಾದರೂ ಆಶ್ಚರ್ಯವಿಲ್ಲ.
ಉಚಿತ ತರಬೇತಿ ವ್ಯವಸ್ಥೆಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯಡಿ ಮನೆ ಬಾಗಿಲಿಗೆ ಕೌಶಲ ನೀಡುವ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ಉಚಿತ ತರಬೇತಿ ವ್ಯವಸ್ಥೆಯನ್ನು ರಥದ ಮೂಲಕ ಕಲ್ಪಿಸಲಾಗಿತ್ತು. ಆದರೆ, ಉದ್ದೇಶ ಪೂರ್ಣ ಪ್ರಮಾಣದಲ್ಲಿ ಈಡೇರದಿರುವುದು ವಿಪರ್ಯಾಸ.
ಪಾನಿಪುರಿ ಅಂಗಡಿಯಿಡಲು ನೀಡುತ್ತಾರಾ!ಬಸ್ ನಿಲ್ದಾಣದಲ್ಲಿ ಕೆಲ ದಿನಗಳಿಂದ ನಿರುಪಯುಕ್ತವಾಗಿ ವಾಹನ ನಿಂತಿರುವ ಕಾರಣ ಅದನ್ನು ಗೂಂಡಗಡಿ ಮಾಡಿಯಾದರೂ ಬಳಸಬಹುದಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ. ಉತ್ತರ ಭಾರತ ಮೂಲದ ಪಾನಿಪುರಿ ವ್ಯಾಪಾರಿಗಳು ಸ್ಥಳೀಯರಲ್ಲಿ ಪಾನಿಪುರಿ ಅಂಗಡಿಯಿಡಲು ಈ ರಥವನ್ನು ನೀಡುತ್ತಾರೆಯೇ ಎಂದೂ ವಿಚಾರಿಸಿ ಹೋಗಿದ್ದಾರೆ!
ಸ್ಕಿಲ್ ಆನ್ ವೀಲ್ ಹಿಂದಿನ ಹಣಕಾಸು ಯೋಜನೆಯ ಕಾರ್ಯಕ್ರಮವಾಗಿದ್ದು, ಎರಡು ವಾಹನಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಸದ್ಯ ಉಡುಪಿಯ 15 ಮಂದಿ ಹಾಗೂ ದಕ್ಷಿಣ ಕನ್ನಡದಲ್ಲಿ 15 ಜನರಿಗೆ ತರಬೇತಿ ನಡೆಯುತ್ತಿದೆ. ಈ ವಿಚಾರವನ್ನು ನಿಭಾಯಿಸುತ್ತಿದ್ದವರು ಸದ್ಯ ಇಲ್ಲ. ನಿರ್ದಿಷ್ಟವಾಗಿ ಯಾವ ಸ್ಥಳ ಎಂಬ ಮಾಹಿತಿ ಪಡೆದುಕೊಂಡು ನೀಡಬೇಕಾಗಿದೆ. ಸರ್ಕಾರದ ಮೊದಲ ಯೋಜನೆಯಾದ ಕಾರಣ ಜನರಿಂದ ಸಿಗುವ ಪ್ರತಿಕ್ರಿಯೆಯ ಮೇಲೆ ಮುಂದಿನ ತರಬೇತಿ ನಡೆಯಲಿದೆ.
| ಕವಿತಾ ಗೌಡ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ
ಒಂದು ತಿಂಗಳ ತರಬೇತಿ18ರಿಂದ 35 ವಯಸ್ಸಿನ ಕನಿಷ್ಠ 8ನೇ ತರಗತಿ ಓದಿದವರಿಗೆ ಹೈಟೆಕ್ ವಾಹನದಲ್ಲಿ 208 ತಾಸಿನ ಬ್ಯೂಟಿ ಥೆರಪಿಸ್ಟ್, ಎಲೆಕ್ಟ್ರಿಕಲ್ ಟೆಕ್ನೀಷಿಯನ್ ತರಬೇತಿ ನೀಡ ಬೇಕಿತ್ತು. ವಾಹನದಲ್ಲಿ ಒಬ್ಬ ಮೊಬಿಲೈಸರ್, ಒಬ್ಬ ಕೌನ್ಸೆಲರ್, 2 ಟ್ರೇನರ್ ಇರುತ್ತಾರೆಂದು ಇಲಾಖೆ ಹೇಳಿದೆ.
ಮೊದಲ ಹಂತದಲ್ಲಿ ಸಂಚಾರ‘ಸ್ಕಿಲ್ ಆನ್ ವೀಲ್’ ಮೊಬೈಲ್ ಟ್ರೖೆನಿಂಗ್ ಸೆಂಟರ್ ಮೂಲಕ ರಾಜ್ಯದ ಪ್ರತಿ ಗ್ರಾಮದಲ್ಲಿ ತರಬೇತಿ ನೀಡುವ ಯೋಜನೆ ಹೊಂದಲಾಗಿತ್ತು. ಮೊದಲ ಹಂತದಲ್ಲಿ ಎಲೆಕ್ಟ್ರಿಕಲ್ ಟೆಕ್ನೀಷಿಯನ್ ತರಬೇತಿ ನೀಡುವ ವಾಹನ ಬೀದರ್ ಹಾಗೂ ರಾಯಚೂರು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಂಚರಿಸಲಿದೆ. ಬ್ಯೂಟಿ ಥೆರಪಿಸ್ಟ್ ತರಬೇತಿ ವಾಹನ ಯಾದಗಿರಿ ಹಾಗೂ ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಂಚರಿಸುವ ಬಗ್ಗೆ ಇಲಾಖೆ ಹೇಳಿಕೊಂಡಿತ್ತು.
ಉದ್ಘಾಟನೆಯಲ್ಲಿ 4 ತಲುಪಿದ್ದು ಎರಡು!ಕೌಶಲ ತರಬೇತಿಗೆ ಚಾಲನೆ ನೀಡುವ ಸಂದರ್ಭ ಸರ್ಕಾರ ಬಿಡುಗಡೆ ಮಾಡಿದ ವಿಡಿಯೋ ಮಾಹಿತಿಯಲ್ಲಿ ನಾಲ್ಕು ರಥಗಳನ್ನು ರಾಜ್ಯದ ವಿವಿಧ ಕಡೆ ಸಂಚರಿಸುವಂತೆ ಮಾಡಿರುವುದಾಗಿ ಹೇಳಿಕೊಳ್ಳಲಾಗಿತ್ತು. ಆದರೆ, ರಾಜ್ಯದ ಗ್ರಾಮೀಣ ಭಾಗ ತಲುಪಿರುವುದು ಕೇವಲ ಎರಡು ರಥ ಎಂಬುದು ಇಲಾಖೆಯ ಅಧಿಕಾರಿಗಳ ಮಾಹಿತಿ.
ಹುಲಿ ಉಗುರು ಪ್ರಕರಣ: ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಏನು ಹೇಳುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ; ಈ ಚರ್ಮ ಎಲ್ಲಿಂದ ಬಂತು? ಎಂದು ಸ್ಪಷ್ಟನೆ ನೀಡಿದ ವಿನಯ್ ಗುರೂಜಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − twelve =
Remember me
