ಬೆಂಗಳೂರು:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಬಹುನಿರೀಕ್ಷಿತ ಯೋಜನೆ ಕಾವೇರಿ 2.0 ಸಾಫ್ಟ್​ವೇರ್​​ನ ಪ್ರಾಯೋಗಿಕ ಬಳಕೆ ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಶಸ್ವಿಯಾಗಿದೆ. ಇದೇ ರೀತಿ ಐದು ಕಡೆಗಳಲ್ಲಿ ಹಂತ ಹಂತವಾಗಿ ವಿಸ್ತರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮುಂದಾಗಿದೆ.
ಉಪ ನೋಂದಣಿ ಕಚೇರಿಗಳ ಸೇವೆಗೆ ವೇಗ ಹೆಚ್ಚಿಸಲು, ಸರ್ವರ್ ಸಮಸ್ಯೆಗೆ ಮುಕ್ತಿ ನೀಡಲು ಮತ್ತು ಆನ್‌ಲೈನ್ ಸೇವೆ ಮತ್ತಷ್ಟು ಹೆಚ್ಚಿಸುವ ಸಲುವಾಗಿ ಕಾವೇರಿ 1.0 ಸಾಫ್ಟ್​ವೇರ್‌ಗೆ ಅಪ್‌ಡೇಟ್ ಮಾಡಲಾಗಿದೆ. ಸೆಂಟರ್ ಫಾರ್​ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆ ಸಹಾಯದಿಂದ ಕಾವೇರಿ 2.0ಕ್ಕೆ ತಂತ್ರಾಂಶ ಅಪ್‌ಡೇಟ್ ಮಾಡಿ ಫೆ.2ರಂದು ಚಿಂಚೋಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಾರಿಗೆ ತರಲಾಗಿತ್ತು.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾಪರಿವೀಕ್ಷಕರು ಮತ್ತು ಆಯುಕ್ತೆ ಡಾ. ಬಿ.ಆರ್. ಮಮತಾ ನೇತೃತ್ವದ ತಾಂತ್ರಿಕ ತಂಡ ಖುದ್ದು ಚಿಂಚೋಳಿಗೆ ಭೇಟಿ ನೀಡಿತ್ತು. ಕಾವೇರಿ 2.0 ಸಾಫ್ಟ್​​ವೇರ್‌ನಲ್ಲಿ ಸಾರ್ವಜನಿಕರೇ ಆನ್‌ಲೈನ್‌ನಲ್ಲಿ ದಾಖಲೆ ಪತ್ರಗಳನ್ನು ಕಾವೇರಿ ವೆಬ್‌ಸೈಟ್‌ನಲ್ಲಿ ಸ್ಕ್ಯಾನ್​ ಮಾಡಿಸಿ ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆ.
ಈ ವೇಳೆ ಎದುರಾದ ತಾಂತ್ರಿಕ ಸಮಸ್ಯೆಗಳ ಬಗ್ಗೆ ತಜ್ಞರ ತಂಡ ನಿಗಾ ವಹಿಸಿ ಮತ್ತಷ್ಟು ಜನಸ್ನೇಹಿ ಸೇವೆ ಒದಗಿಸಲು ಎಲ್ಲ ತಯಾರಿ ನಡೆಸಿದೆ. ಇದಾದ ಮೇಲೆ ಬೆಳಗಾವಿ, ಮಂಗಳೂರು, ರಾಮನಗರ, ಮೈಸೂರು ಮತ್ತು ಮಂಡ್ಯದಲ್ಲಿ ಜಾರಿಗೆ ತಂದು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಅರಿವು:ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಕ್ರಯ, ಕರಾರು, ದಾನ, ಒಪ್ಪಂದ, ವಿಲ್ ಸೇರಿದಂತೆ ವಿವಿಧ ಸೇವೆ ಬಳಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕಮಿಷನರ್ ಡಾ.ಬಿ.ಆರ್. ಮಮತಾ ತಿಳಿಸಿದ್ದಾರೆ.
ಕಾವೇರಿ 2.0 ತಂತ್ರಾಂಶದ ಕುರಿತು ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ವಿವಿಧ ಸೇವೆಗಳ ಕುರಿತು ಪ್ರತ್ಯೇಕ ಕರಪತ್ರ ಸಿದ್ಧಪಡಿಸಿ ಚಿಂಚೋಳಿ, ಬೆಳಗಾವಿ, ಮಂಗಳೂರು, ರಾಮನಗರ, ಮೈಸೂರು, ಮಂಡ್ಯದಲ್ಲಿ ಜನರಿಗೆ ಹಂಚಲಾಗುತ್ತಿದೆ. ಸಹಾಯವಾಣಿ ತೆರೆದು ಕರೆ ಮಾಡಿದವರಿಗೆ ಮಾರ್ಗದರ್ಶನ ಸಹ ನೀಡಲಾಗುತ್ತಿದೆ. ಒಟ್ಟಾರೆ ಏಪ್ರಿಲ್-ಮಾರ್ಚ್ ವೇಳೆಗೆ ರಾಜ್ಯದ ಎಲ್ಲೆಡೆ ಕಾವೇರಿ 2.0 ಅಳವಡಿಸಲಾಗುತ್ತದೆ ಎಂದು ಮಮತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರೇಮಿಗಳ ದಿನದಂದು ‘ಅಪ್ಪಿಕೋ ದನ’; ಫೆ. 14 ‘ಕೌ ಹಗ್ ಡೇ’ ಎಂದು ಆಚರಿಸಲು ಸರ್ಕಾರದ ಮನವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 15 =
Remember me
