
ಬೆಂಗಳೂರು:ಕಾವೇರಿ ಮತ್ತು ಕೃಷ್ಣ ಕಣಿವೆಯಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಜಲಾಶಯಗಳಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಬರಿದಾಗಿದ್ದ ಜಲಾಶಯಗಳು ಈ ಬಾರಿ ಭರ್ತಿಯಾಗುವ ಹಂತದಲ್ಲಿವೆ.ಕಾವೇರಿ ಕಣಿವೆಯಲ್ಲಿ ಕೆಆರ್‌ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ದಿಢೀರ್ ಪ್ರವಾಹದ ಭೀತಿ ಎದುರಾಗಿದ್ದು, ಜಲಾಶಯಗಳ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಯ ಬಿಡಲಾಗಿದೆ.ಕಾವೇರಿ ಕಣಿವೆಯಲ್ಲಿ 1,25,340 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 18 ಸಾವಿರ ಕ್ಯೂಸೆಕ್ ನೀರು ಒಳಹರಿವು ಇತ್ತು. ಅತಿ ಹೆಚ್ಚು 51,375 ಕ್ಯೂಸೆಕ್ ನೀರು ಒಳಹರಿವು ಕೆಆರ್‌ಎಸ್ ಜಲಾಶಯಕ್ಕೆ, ಹೇಮಾವತಿಗೆ 40,267 ಕ್ಯೂಸೆಕ್, ಕಬಿನಿಗೆ 45 ಸಾವಿರ ಕ್ಯೂಸೆಕ್ ಮತ್ತು ಹಾರಂಗಿಗೆ 16 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ.ಕೃಷ್ಣ ಕಣಿವೆಯಲ್ಲಿ 2,58,689 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 76 ಸಾವಿರ ಕ್ಯೂಸೆಕ್ ನೀರು ಮಾತ್ರ ಒಳಹರಿವು ಇತ್ತು. ತುಂಗಭದ್ರ ಜಲಾಶಯಕ್ಕೆ 1,07,198 ಕ್ಯೂಸೆಕ್ ನೀರು ಬರುತ್ತಿದ್ದರೆ, ಆಲಮಟ್ಟಿಗೆ 65 ಸಾವಿರ ಕ್ಯೂಸೆಕ್, ನಾರಾಯಣಪುರ ಜಲಾಶಯಕ್ಕೆ 64 ಸಾವಿರ, ಭದ್ರದಲ್ಲಿ 46 ಸಾವಿರ, ಘಟಪ್ರಭ 25 ಸಾವಿರ ಕ್ಯೂಸೆಕ್, ಮಲಪ್ರಭ 15 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ.
ತ.ನಾಡಿಗೆ 43 ಸಾವಿರ ಕ್ಯೂಸೆಕ್ಜಲಾಶಯಗಳು ಭರ್ತಿಯ ಹಂತದಲ್ಲಿರುವ ಕಾರಣ ತಮಿಳುನಾಡಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಬಿಳಗೊಂಡ್ಲು ಮಾಪನದಲ್ಲಿ 43,685 ಕ್ಯೂಸೆಕ್ ನೀರು ಹರಿದಿರುವುದು ದಾಖಲಾಗಿದೆ. ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ ಕೇವಲ 1434 ಕ್ಯೂಸೆಕ್ ನೀರು ಹರಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 7 =
Remember me
