ಬೆಂಗಳೂರು: ನಮ್ಮ ಡ್ಯಾಂಗಳಲ್ಲಿಯೇ ನೀರಿಲ್ಲ. ನಮಗಿಂತ ಉತ್ತಮ ಸ್ಥಿತಿಯಲ್ಲಿ ತಮಿಳುನಾಡು ಇದೆ. ಹೀಗಾಗಿ 5 ಸಾವಿರ ಕ್ಯುಸೆಕ್ ನೀರು ಬಿಡುವಂತದ್ದು ಆಗಬಾರದು. ಇದು ವೈಜ್ಞಾನಿಕವಾಗಿಲ್ಲ, ವಸ್ತುನಿಷ್ಠವೂ ಅಲ್ಲ ಎಂದು ಈ ಹಿಂದೆ ಜಲಸಂಪನ್ಮೂಲ ಖಾತೆ ನಿರ್ವಹಿಸಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾವೇರಿ ನಿರ್ವಹಣಾ ಪ್ರಾಧಿಕಾರದಿಂದ ಅತಿ ಶೀಘ್ರದಲ್ಲಿ ವಸ್ತುನಿಷ್ಠವಾಗಿರುವಂತ ವೈಜ್ಞಾನಿಕವಾಗಿ ಸಂಕಷ್ಟ ಸೂತ್ರ ರಚನೆ ಆಗಬೇಕು ಎಂದರು.
ಎರಡೂ ರಾಜ್ಯಗಳ ತಜ್ಞರನ್ನು ಭಾಗಿ ಮಾಡಿಕೊಳ್ಳಬೇಕು, ಹಿಂದೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಂಕಷ್ಟ ಸೂತ್ರವನ್ನು ಅತಿ ಬೇಗನೇ ಮಾಡಬೇಕು. ಈಗಿನ ಆದೇಶವನ್ನು ರದ್ದು ಮಾಡಬೇಕು ಅಂತ ಆಗ್ರಹಿಸುತ್ತೇವೆ ಎಂದು ಹೇಳಿದರು.
ನಾವು ಆದೇಶ ಪಾಲನೆ ಮಾಡದೇ ಹೋದರೆ ನಮ್ಮ ವಾದವನ್ನು ಕಾವೇರಿ ಅಥಾರಿಟಿ ಆಲಿಸುವುದೇ ಇಲ್ಲ. ನಮ್ಮಲ್ಲೇ ನೀರಿಲ್ಲ, ನೀರು ಕೊಡುವುದು ಕಷ್ಟ. ಸಂಕಷ್ಟ ಸೂತ್ರ ಇಲ್ಲ ಎಂಬ ಕಾರಣಕ್ಕೆ ಪದೇ ಪದೆ ಗೊಂದಲ ಆಗುತ್ತಿದೆ. ಸಂಕಷ್ಟ ಸೂತ್ರವೇ ಒಂದು ಗೊಂದಲ ಆಗಬಾರದು ಎಂದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 + 11 =
Remember me
