ಬೆಂಗಳೂರು:ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಮಂಡ್ಯ ಬಂದ್​ಗೆ ಕರೆ ನೀಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಬಂದ್​ಗೂ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.
ಇಂದು ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್​ನಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳಿಂದ ಮಹತ್ವದ ಸಭೆ ನಡೆಯಲಿದ್ದು, ಬಂದ್​ ಕುರಿತು ತೀರ್ಮಾನ ಮಾಡುವ ಸಾಧ್ಯತೆ ಇದೆ. ಸಭೆಯಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಹೋರಾಟಗಾರರು ಭಾಗಿಯಾಗಲಿದ್ದಾರೆ.
ಬಂದ್​ಗೆ ಬೆಂಬಲ ನೀಡುವಂತೆ ಅನೇಕ ಸಂಘಟನೆಗಳಿಗೆಮ ರೈತರು ಮನವಿ ಮಾಡಲಿದ್ದಾರೆ. ಕನ್ನಡ ಪರ ಹೋರಾಟಗಾರರು, ಆಟೋ ಚಾಲಕರು, ಹೋಟೆಲ್ ಸಂಘ, ಅಪಾರ್ಟ್​ಮೆಂಟ್​ ಅಸೋಸಿಯೇಷನ್, ವಕೀಲರ ಸಂಘ, ಬೆಂಗಳೂರು ನಾಗರಿಕರ ಸಂಘ, ಐಟಿ ಕಂಪನಿಗಳ ಸಂಘಗಗಳು, ಕರವೇ ಸೇರಿದಂತೆ 300 ಕ್ಕೂ ಹೆಚ್ಚು ಸಂಘಟನೆಗಳಿಗೆ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:15 ಲಕ್ಷ ಬಿಯರ್​ ಬಾಟಲಿಗಳಿಂದ ಬೌದ್ಧ ಮಂದಿರ ನಿರ್ಮಾಣ: ಈ ವಿಸ್ಮಯ ತಾಣದ ಹಿಂದಿದೆ ಸನ್ಯಾಸಿಗಳ ಶ್ರಮ
ಕಾವೇರಿ ಹೋರಾಟವನ್ನು ತೀವ್ರಗೊಳಿಸಲು ಸರ್ವ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಹೋಟೆಲ್ ಉದ್ಯಮದಿಂದ ರೈತರು ಬೆಂಬಲ ಕೋರಿದ್ದಾರೆ. ಪ್ರತಿ ಬಾರಿ ಬಂದ್ ಟೈಂನಲ್ಲೂ ಹೋಟೆಲ್​ಗಳು ತೆರೆದಿರುತ್ತವೆ. ಆದರೆ, ಈ ಬಾರಿ ಹೋಟೆಲ್​ಗಳನ್ನು ಮುಚ್ಚಿದರೆ ಬಂದ್​ಗೆ ಮತ್ತಷ್ಟು ಬಲ ಸಿಕ್ಕಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮುಚ್ಚುವ ಬಗ್ಗೆಯೂ ರೈತರು ಮನವಿ ಮಾಡಿದ್ದಾರೆ. ಕಾವೇರಿ ಹೋರಾಟಕ್ಕೆ ಬೆಂಬಲ ನೀಡುತ್ತಾ ಹೋಟೆಲ್ ಉದ್ಯಮ? ಎಂಬ ಪ್ರಶ್ನೆಗೆ ಇಂದಿನ ಸಭೆಯಲ್ಲಿ ತೀರ್ಮಾನವಾಗಲಿದೆ.
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್​ ಆದೇಶ ನೀಡಿರುವುದು ಮತ್ತು ಕಾವೇರಿ ನೀರಿನ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲೆಯಲ್ಲಿ ಇಂದು ಬಂದ್ ಹಮ್ಮಿಕೊಳ್ಳಲಾಗಿದೆ. ರೈತ ಹಾಗೂ ಕನ್ನಡ ಪರ ಸಂಘಟನೆಗಳು ಮಂಡ್ಯ ನಗರ, ಮದ್ದೂರು ಪಟ್ಟಣದಲ್ಲಿ ಬಂದ್​ಗೆ ಕರೆ ಕೊಟ್ಟಿದೆ.
ಬೆಳಗ್ಗೆಯಿಂದ ಸಂಜೆ 6ಗಂಟೆಯವರೆಗೆ ಎರಡೂ ನಗರಗಳು ಸಂಪೂರ್ಣ ಸ್ಥಬ್ದವಾಗಿದೆ. ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರ ಸಂಘ‌ಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿವೆ. ಬೆಳಗ್ಗೆ 8ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಈಗಾಗಲೇ ಬಂದ್​ ಲಕ್ಷಣಗಳು ಮಂಡ್ಯದಲ್ಲಿ ಗೋಚರಿಸುತ್ತಿವೆ. ಪ್ರತಿಭಟನಾಕಾರರು ಬಸ್​ಗಳನ್ನು ಅಡ್ಡಹಾಕುತ್ತಿದ್ದು, ಇಂದು ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕಾವೇರಿ ಕಿಚ್ಚಿಗೆ ಸಕ್ಕರೆ ನಾಡು ಸ್ತಬ್ಧ: ಮಂಡ್ಯ ಬಂದ್​ಗೆ JDS-BJP ನಾಯಕರ ಸಾಥ್​, ಇಂದು ಸಂಚಾರದಲ್ಲಿ ವ್ಯತ್ಯಯ

15 ಲಕ್ಷ ಬಿಯರ್​ ಬಾಟಲಿಗಳಿಂದ ಬೌದ್ಧ ಮಂದಿರ ನಿರ್ಮಾಣ: ಈ ವಿಸ್ಮಯ ತಾಣದ ಹಿಂದಿದೆ ಸನ್ಯಾಸಿಗಳ ಶ್ರಮ

ಏಷ್ಯಾಡ್​ನಲ್ಲಿ ಕಣಕ್ಕಿಳಿಯಲಿದ್ದಾರೆ 38 ಕನ್ನಡಿಗರು; ಯಾವ ಕ್ರೀಡೆಯಲ್ಲಿ ಯಾರ್ಯಾರು? ಇಲ್ಲಿದೆ ವಿವರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + thirteen =
Remember me
