ಮಂಡ್ಯ:ಕೆ.ಆರ್​.ಪೇಟೆ ತಾಲೂಕಿನ ಮರುವನಹಳ್ಳಿಯಲ್ಲಿ ಸೋಂಕು ಹರಡಲು ಕಾರಣ ಮಾವಿನಹಣ್ಣು ಎಂದು ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.
ಗ್ರಾಮದಲ್ಲಿ ಈವರೆಗೆ 14 ಜನರಿಗೆ ಕರೊನಾ ಪಾಸಿಟಿವ್​ ಬಂದಿದ್ದು, ಐಸೋಲೇಷನ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ಸೋಂಕು ಹರಡಲು ಮುಂಬೈನಿಂದ ಬಂದ ಪಿ.869 ಕಾರಣ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ಹೇಳಲಾಗುತ್ತಿದೆ. ಆದರೆ, ಸಚಿವರ ಹೇಳಿಕೆ ಈಗ ಗೊಂದಲಕ್ಕೆ ಕಾರಣವಾಗಿದೆ.
ಇದನ್ನೂ ಓದಿರಿಇಲ್ನೋಡಿ ಪೊಲೀಸರು ಕೊಟ್ಟ ‘ಕುಚ್ ಕುಚ್ ಹೋತಾ ಹೈ’ ಟ್ವಿಸ್ಟ್​ ಏನಂತ..!
ಸಚಿವರ ಪ್ರಕಾರ ಕರೊನಾ ಹರಡಲು ಮಾವಿನ ಹಣ್ಣು ಕಾರಣವಂತೆ. ಗ್ರಾಮದಲ್ಲಿ ಸ್ವಸಹಾಯ ಸಂಘದ ಸದಸ್ಯರು ಚೀಟಿ ನಡೆಸುವ ಸಂದರ್ಭದಲ್ಲಿ ಮಾವಿನ ಹಣ್ಣು ಹಂಚಿಕೆ ಮಾಡಿಕೊಂಡಿದ್ದಾರೆ. ಮಾವು ಪಡೆದ ಕುಟುಂಬ ಸದಸ್ಯರಿಗೆ ಸೋಂಕು ಹರಡಿದೆ. ಈಗ ಆ ಕುಟುಂಬದವರನ್ನು ಕ್ವಾರಂಟೈನ್​ ಮಾಡಲು ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಾವಿನಹಣ್ಣಿನಿಂದಲೇ ಸೋಂಕು ಹರಡಿರುವುದು ನಿಜವಾದಲ್ಲಿ ಮಾವಿನಹಣ್ಣು ಮಾರಾಟ ಮಾಡಿದ ವ್ಯಕ್ತಿಗೆ ಸೋಂಕಿತ್ತೆ? ಆತ ಬೇರೆ ಎಲ್ಲೆಲ್ಲಿ ಮಾರಾಟ ಮಾಡಿದ್ದ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.
ಇದನ್ನೂ ಓದಿರಿVIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!
ಯಾರೀ ಪಿ.869 ?:ಮುಂಬೈನಿಂದ ಮಾರ್ಚ್​ 24ರಂದು ಕೆ.ಆರ್​.ಪೇಟೆಗೆ ಬಂದ ಮರುವನಹಳ್ಳಿಯ ವ್ಯಕ್ತಿ ಮೈಸೂರಿನ ವಿಜಯನಗರಕ್ಕೆ ತೆರಳಿ ಹೋಂ ಕ್ವಾರಂಟೈನ್​ನಲ್ಲಿದ್ದರು. ಮೇ 1ರಂದು ಅನಾರೋಗ್ಯದ ನಿಮಿತ್ತ ಕೆ.ಆರ್​.ಆಸ್ಪತ್ರೆಗೆ ಹೋಗಿದ್ದ ಅವರು ಮೇ 5ರಂದು ಮತ್ತೆ ಆಸ್ಪತ್ರೆಗೆ ತೆರಳಿದ್ದರು. ಆಗ ಅವರನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿತ್ತು.
ಅಲ್ಲಿಂದ ಮೇ 11ರಂದು ಕೆ.ಆರ್​.ಪೇಟೆಗೆ ಬಂದಾಗ ಅಲ್ಲಿಯೂ ಪರೀಕ್ಷೆ ಮಾಡಿದಾಗ ಅವರಿಗೆ ಪಾಸಿಟಿವ್​ ಬಂದಿತ್ತು. ನಂತರ ಅವರ ಪ್ರಥಮ ಸಂಪರ್ಕದಲ್ಲಿದ್ದ ಪತ್ನಿ ಸೇರಿ 13 ಜನರಿಗೆ ಸೋಂಕು ಹರಡಿದೆ. ಸದ್ಯ ಪಿ.869 ಗುಣಮುಖರಾಗಿದ್ದು, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿರಿಸೋಂಕಿತಳ ಜತೆ ವೈದ್ಯರ ಹೆಸರು ತಳುಕು ಹಾಕಿದ ವಕೀಲರ ವಿರುದ್ಧ ಎಫ್​ಐಆರ್​!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen − seven =
Remember me
