ಬೆಂಗಳೂರು:ಇದೀಗ ಸದ್ಯದ ಮಟ್ಟಿಗೆ ಜೆಡಿಎಸ್‍ ಯುಪಿಎ ಬಣದಲ್ಲಿರುತ್ತೋ ಅಥವಾ ಎನ್‍ಡಿಎ ಬಣಕ್ಕೆ ಸೇರಲಿದೆಯೋ ಎನ್ನುವುದು ಅಧಿಕೃತವಾಗಿ ತಿಳಿಯದೇ ಇದ್ದು ಮಾಜಿ ಸಿಎಂ ಕುಮಾರಸ್ವಾಮಿ ಕಾದು ನೋಡಬೇಕು ಎನ್ನುತ್ತಿದ್ದಾರೆ. ಈ ನಡುವೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್‍ರನ್ನು ಜೆಡಿಎಸ್‍ಗೆ ವಿಪಕ್ಷಗಳ ಸಭೆಯಲ್ಲಿ ಯಾಕೆ ಆಹ್ವಾನ ಇರಲಿಲ್ಲ ಎಂದು ಪ್ರಶ್ನಿಸಿದಾಗ ವಿಭಿನ್ನವಾಗಿ ಉತ್ತರಿಸಿದ್ದಾರೆ.
ಇದನ್ನೂಓದಿ:ವಿಪಕ್ಷಗಳ ಸಮರಾಭ್ಯಾಸ; ರಾಜಧಾನಿಯಲ್ಲಿ ಇಂದು, ನಾಳೆ ಎರಡನೇ ಸಭೆ
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಸಿ. ವೇಣುಗೋಪಾಲ್, “ಇಲ್ಲಿ ಕಾಂಗ್ರೆಸ್ ಒಂದೇ ನಿರ್ಧಾರ ಕೈಗೊಳ್ಳೋದಿಲ್ಲ. ಎಲ್ಲಾ 26 ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳಲಿವೆ. ಸೋನಿಯಾ ಗಾಂಧಿಯೂ ಈ ಸಭೆಯಲ್ಲಿ ಭಾಗಿ ಆಗಲಿದ್ದು ಈ ಸಭೆಯ ಶಕ್ತಿ ಹೆಚ್ಚಾಗಲಿದೆ.
ಯುಪಿಎ ಹೊರತಾಗಿಯೂ ಇತರ ರಾಜಕೀಯ ಪಕ್ಷಗಳು ಭಾಗಿಯಾಗ್ತವೆ. ಯುಪಿಎ ನೇತೃತ್ವವೋ ಅಥವೇ ಬೇರೆ ಅಲಯನ್ಸೋ ಎನ್ನುವುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ” ಎಂದಿದ್ದಾರೆ.
ಇದನ್ನೂಓದಿ:ಪ್ರ​ಧಾನಿ ಮೋದಿಗೆ ಕೆಂಪುಹಾಸಿನ ಸ್ವಾಗತ: ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಜತೆ ದ್ವಿಪಕ್ಷೀಯ ಸಭೆ; ರಫೇಲ್​, ಸಬ್​ಮರೀನ್​ ಒಪ್ಪಂದಕ್ಕೆ ಇಂದು ಅಂಕಿತ
ಈ ಸಂದರ್ಭ ಜೆಡಿಎಸ್‍ಗೆ ಆಹ್ವಾನ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,” ಯಾರು ಬಿಜೆಪಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದ್ದಾರೆ ಅವರು ಬರ್ತಾರೆ. ಆಹ್ವಾನ ಕೊಡುವ ಅಗತ್ಯವೇ ಇಲ್ಲ. ಅವರೇ ಭಾಗಿಯಾಗ್ತಾರೆ. ಅದಲ್ಲದೇ ಕಳೆದ ಬಾರಿ ಜೆಡಿಎಸ್‍ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eleven =
Remember me
