ಯಾದಗಿರಿ:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ಪರೀಕ್ಷೆಯ ಒಂದೊಂದೆ ಕರ್ಮಕಾಂಡ ಬಯಲಾಗುತ್ತಿದೆ.
ಯಾದಗಿರಿಯ ಮಧ್ಯವರ್ತಿಗೆ ಹುಬ್ಬಳ್ಳಿಯಿಂದ ವಾಟ್ಸ್​ಆ್ಯಪ್​ ಮೂಲಕ ಉತ್ತರ ರವಾನೆಯಾಗಿರುವುದಕ್ಕೆ ಪುರಾವೆಯೊಂದು ಲಭ್ಯವಾಗಿದೆ. ಬಾಸ್​ ಹೆಸರಿನ ವಾಟ್ಸ್​ಆ್ಯಪ್​ ನಂಬರ್​ನಿಂದ ಪರೀಕಾರ್ಥಿಗೆ ಉತ್ತರಗಳು ರವಾನೆ ಆಗಿರುವ ಅನುಮಾನ ವ್ಯಕ್ತವಾಗಿದೆ. ಹುಬ್ಬಳ್ಳಿ ಅಡ್ರೆಸ್ ಇರುವ ಮೊಬೈಲ್ ಫೋನ್​ನಿಂದ ಯಾದಗಿರಿ ಮಧ್ಯವರ್ತಿಗೆ ಉತ್ತರಗಳು ರವಾನೆಯಾಗಿದೆ.
ವಾಟ್ಸ್​ಆ್ಯಪ್​ ಮೂಲಕ ಕಳಿಸಿದ ಉತ್ತರಗಳನ್ನು ಕೆಲವೇ ನಿಮಿಷಗಳಲ್ಲಿ ಡೀಲಿಟ್ ಮಾಡಲಾಗುತ್ತಿತ್ತು. ಈ ಎಲ್ಲ ಸಂಗತಿಗಳನ್ನು ತನಿಖೆಯ ವೇಳೆ ಆರೋಪಿಗಳು ಬಾಯಿಬಿಡುತ್ತಿದ್ದಾರೆ. ಇದನ್ನು ನೋಡಿದರೆ ಇನ್ನು ಹಲವು ಕೇಂದ್ರಗಳಲ್ಲಿ ಪರೀಕ್ಷಾ ನಡೆದಿರಬಹುದೇ? ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಓಎಂಆರ್​ ಶೀಟ್​ ವೈರಲ್​ಈ ಹಿಂದೆ ಅಭ್ಯರ್ಥಿಯೊಬ್ಬನ ಓ.ಎಂ.ಆರ್ ಶೀಟ್ ಹುಬ್ಬಳ್ಳಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪರೀಕ್ಷಾ ಕೇಂದ್ರದ ಒಳಗೆ ಕ್ಯಾಮರಾ ಆಗಲಿ, ಮೊಬೈಲ್ ಆಗಲಿ ತೆಗೆದುಕೊಂಡು ಹೋಗುವಂತಿಲ್ಲ. ಹಾಗಾದರೆ, ವೈರಲ್ ಆಗಿರುವ ಓ.ಎಂ.ಆರ್ ಶೀಟ್​ನ ಫೋಟೋ ತೆಗೆದಿದ್ದು ಹೇಗೆ? ಕಲಬುರಗಿ, ಯಾದಗಿರಿ ಹೊರತುಪಡಿಸಿಯೂ ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿದೆಯಾ? ಎಂಬ ಅನುಮಾನ ಇದರಿಂದ ಮೂಡಿದೆ. ಅಕ್ರಮ ನಡೆದಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತಿದೆ ಈ ಓ.ಎಂ.ಆರ್.ಶೀಟ್ ವೈರಲ್ ಪ್ರಕರಣ. ಓಎಂಆರ್ ಶೀಟ್ ಜೊತೆಗೆ ಅಭ್ಯರ್ಥಿಯ ಹಾಲ್ ಟಿಕೆಟ್ ಇಟ್ಟು ಫೋಟೋ ತೆಗೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಫೋಟೋ ಹೊರಗಡೆ ಇರುವವರಿಗೆ ಕಳುಹಿಸಿದರೆ ಯಾವ ಅಭ್ಯರ್ಥಿಗೆ ಯಾವ ಪ್ಯಾರ್ಟನ್ ಪ್ರಶ್ನೆಗಳಿವೆ ಎಂಬುದನ್ನು ತಿಳಿದು ಉತ್ತರ ಹೇಳುವವರಿಗೆ ಸುಲಭವಾಗುತ್ತದೆ.
ಕಲಬುರಗಿಯಲ್ಲಿ ಅಕ್ರಮಕಳೆದ ಭಾನುವಾರ ಕಲಬುರಗಿ ನಗರದ ಖಾಸಗಿ ಕಾಲೇಜು ಕೇಂದ್ರದಲ್ಲಿ ಸರ್ಕಾರದ ನಿಗಮ-ಮಂಡಳಿಗಳ ವಿವಿಧ ಖಾಲಿ ಹುದ್ದೆಗಳ ಭರ್ತಿಗೆ ಜರುಗಿದ ಪರೀಕ್ಷೆಯಲ್ಲಿ ತ್ರಿಮೂರ್ತಿ ಎಂಬಾತ ಬ್ಲೂಟೂತ್ ಬಳಸಿ ಉತ್ತರ ಬರೆಯುತ್ತಿರುವುದು ಪತ್ತೆಯಾಗಿತ್ತು. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅಭ್ಯರ್ಥಿ ತ್ರಿಮೂರ್ತಿ ಸಹೋದರ ಅಂಬರೀಶ್ ಎಂಬಾತ ಪರೀಕ್ಷಾ ಕೇಂದ್ರದ ಹೊರಗಡೆ ಕಾರಿನಲ್ಲಿ ಕುಳಿತು ಉತ್ತರ ಹೇಳುತ್ತಿದ್ದ ಎಂದು ತಿಳಿಸಿದ್ದಾರೆ. ಅಂಬರೀಶ್‌ಗೆ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಗ್ಯಾಂಗಿನವರು ಸಹಾಯ ಮಾಡುತ್ತಿದ್ದರು ಎಂದು ಬಾಯಿಬಿಟ್ಟಿದ್ದಾನೆ.
ಕೆಇಎ ಪರೀಕ್ಷಾ ಅಕ್ರಮ: ಬ್ಲೂಟೂತ್ ವಂಚನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗ

‘ಮಹದೇವ’ನ ಹೆಸರಲ್ಲೂ ಲೂಟಿ ಹೊಡೆದ ಕಾಂಗ್ರೆಸ್​-ಪ್ರಧಾನಿ ಮೋದಿ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 1 =
Remember me
