ಹಾಸನ:ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕೆಇಬಿ ನೌಕರನ ಹತ್ಯೆ ಪ್ರಕರಣವನ್ನ 48 ಗಂಟೆಯಲ್ಲಿ ಭೇದಿಸಿರುವ ಪೊಲೀಸರು, ಮೃತನ ಪತ್ನಿಯ ಸಹೋದರನನ್ನೇ ಬಂಧಿಸಿದ್ದಾರೆ.
ಕೆಇಬಿ ನೌಕರ ಸಂತೋಷ್ ಮೃತ. ಈತನನ್ನು ಹಾಸನದ ಹೂವಿನಹಳ್ಳಿ ಕಾವಲ್ ಬಳಿ ಜ.16ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಂತೋಷ್​ಗೆ ಹೊರಗಡೆ ಶತ್ರುಗಳು ಯಾರೂ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಈ ಕೊಲೆ ಮಾಡಿದ್ದು ಯಾರು? ಏಕೆ? ಎಂದು ಪ್ರಕರಣ ಬೆನ್ನತ್ತಿದ್ದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದನ್ನೂ ಓದಿರಿಯಡಿಯೂರಪ್ಪನ ಬಂಡವಾಳ ನನ್ನ ಕೈಯಲ್ಲಿದೆ, ನನ್ನ ತಂಟೆಗೆ ಬಂದರೆ ಹುಷಾರ್​! ಸಿಎಂಗೆ ಎಚ್​ಡಿಕೆ ವಾರ್ನಿಂಗ್​
ಆಲೂರು ತಾಲೂಕಿನ ಕೆ.ಹೋಸಕೋಟೆಯ ಸುದಿನ್ ಕುಮಾರ್ ಅಲಿಯಾಸ್ ಆದರ್ಶ ಪ್ರಮುಖ ಆರೋಪಿ. ಈತ ಸಂತೋಷ್​ನ ಬಾಮೈದುನ. ಸುದಿನ್​ ಜತೆಗೆ ಮಡಿಕೇರಿಯ ಅನುಕೂಲ್, ಬಿ.ಎಸ್. ಸುರೇಶ, ಎಚ್.ಬಿ. ಸತೀಶ್ ಬಂಧಿತ ಆರೋಪಿಗಳು. ಸುದಿನ್​ನ ಅಕ್ಕ ಜಯಶ್ರೀಯನ್ನು 13 ವರ್ಷದ ಹಿಂದೆ ಸಂತೋಷ್​ ಪ್ರೀತಿಸಿ‌ ಮದುವೆಯಾಗಿದ್ದ. ಈ ದಂಪತಿಗೆ 2 ಮಕ್ಕಳಿವೆ. ಸಂತೋಷ್​ ಪ್ರತಿದಿನ ಕುಡಿದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಸಾಕಷ್ಟು ಬಾರಿ ರಾಜಿ ಸಂಧಾನ ಮಾಡಲಾಗಿತ್ತಾದರೂ ಸರಿಹೋಗಿರಲಿಲ್ಲ. ಅಲ್ಲದೆ ಆತನ ಒಂದು​ ವರ್ಷದಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ತನ್ನ ಅಕ್ಕನ ಜೀವನ ಹಾಳು ಮಾಡುತ್ತಿದ್ದಾನೆ ಭಾವ ಸಂತೋಷ್​ ಮೇಲೆ ಜಯಶ್ರೀ ತಮ್ಮ ಸುದಿನ್​ ಕೋಪಗೊಂಡಿದ್ದ.ಇದನ್ನೂ ಓದಿರಿಸೆಕ್ಸ್​ಗಾಗಿ ಮಾರಾಮಾರಿ! ಮಚ್ಚುಬೀಸಿದ ಪರಸ್ತ್ರೀ, ಆತನ ಕುಟುಂಬಸ್ಥರು ಆಕೆಯ ಕಾಲನ್ನೆ ಕತ್ತರಿಸಿದರು…
ಅಕ್ಕನಿಗೆ ಹಿಂಸೆ ನೀಡುತ್ತಿದ್ದ ಭಾವನನ್ನು ಮುಗಿಸಲು ಸಂಚುರೂಪಿಸಿದ್ದ ಸುದಿನ್ ತಂಡ​, ಜ.15ರಂದು ಭಾವ ಸಂತೋಷ್​ನನ್ನು ಪಾರ್ಟಿ ಮಾಡೋ ನೆಪದಲ್ಲಿ ಹೂವಿನಹಳ್ಳಿ ಕಾವಲ್ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿತ್ತು. ಆ ವೇಳೆ ಅನುಕೂಲ್ ಪಿಸ್ತೂಲ್​ನಿಂದ ಸಂತೋಷ್​ನತ್ತ 8 ಸುತ್ತು ಗುಂಡು ಹಾರಿಸಿದ್ದು, ಇದರಲ್ಲಿ ಇದರಲ್ಲಿ 5 ಗುಂಡು ಸಂತೋಷ್ ದೇಹ ಹೊಕ್ಕಿ‌ದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಆರೋಗಳಿಂದ ಕೃತ್ಯಕ್ಕೆ ಬಳಸಿದ್ದ 1 ರಿವಾಲ್ವರ್, 29 ಸಜೀವ ಗುಂಡುಗಳು, 1 ಡಸ್ಟರ್ ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಮಾರಸ್ವಾಮಿ ನನ್ನ ಸ್ನೇಹಿತ..! ಸಚಿವರಾದ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಯೋಗೇಶ್ವರ್​

ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 4 =
Remember me
