ರಸಗೊಬ್ಬರಕ್ಕೆಸಹಾಯಧನ ನೀಡುವುದು ಸಾಧ್ಯವಾಗುವುದಾದರೆ, ಕೃಷಿಯಲ್ಲಿ ತಂತ್ರಜ್ಞಾನ ಬಳಕೆಗೆ ಉತ್ತೇಜಿಸುವ ದೃಷ್ಟಿಯಿಂದ ತಂತ್ರಜ್ಞಾನ ಸೇವೆಯನ್ನು ಜಿಎಸ್ಟಿ ಶೇ.18ರ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ‘ಕೃಷಿ ತಂತ್ರ’ ಸಂಸ್ಥೆಯ ಸಿಇಒ, ಮಣ್ಣು ತಜ್ಞ ಸಂದೀಪ್ ಕೊಂಡಜಿ ಸಲಹೆ ನೀಡಿದರು. ‘ರೈತ ಉತ್ಪಾದಕ ಸಂಘಟನೆಗಳ ಮಾದರಿ’ ಚರ್ಚಾಗೋಷ್ಠಿಯಲ್ಲಿ ಮಾತನಾಡಿ, ತಂತ್ರಜ್ಞಾನದಿಂದ ರಸಗೊಬ್ಬರ, ಕ್ರಿಮಿನಾಶಕ ಹಾಗೂ ಅತಿಯಾದ ನೀರು ಬಳಕೆ ನಿಯಂತ್ರಣ ಸಾಧ್ಯವಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು, ಉತ್ತೇಜಿಸಲು ತಂತ್ರಜ್ಞಾನಕ್ಕೆ ವಿಧಿಸುತ್ತಿರುವ ಶೇ.18 ಜಿಎಸ್​ಟಿಯನ್ನು ಕೈಬಿಡಬೇಕು ಎಂದರು. ಹಣಕಾಸು, ತಂತ್ರಜ್ಞಾನ ಮತ್ತು ಉದ್ಯಮದ ಬೆಸುಗೆಯಿಂದ ಕೊಯ್ಲು ಪೂರ್ವ, ಕೊಯ್ಲೋತ್ತರ ಉಪಕ್ರಮಗಳು, ದಾಸ್ತಾನು ವ್ಯವಸ್ಥೆ, ಮೌಲ್ಯವರ್ಧನೆ ಅನುಷ್ಠಾನಕ್ಕೆ ತರಬಹುದಾಗಿದೆ. ಅಲ್ಲದೆ, ಉತ್ಪಾದಕತೆ, ಉತ್ಪಾದನೆ ಹೆಚ್ಚಳ, ಗುಣಮಟ್ಟ, ಪೌಷ್ಟಿಕತೆ, ಮಾರುಕಟ್ಟೆ ಮುಂತಾದ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದು ಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದ ತಜ್ಞರು ಹೇಳಿದರು.
ರೈತರ ರಕ್ಷಣೆಗೆ ಬೆಳೆ ವಂಶವಾಹಿ ಪರಿಹಾರ
ಬೆಳೆಗಳ ವಂಶವಾಹಿಯಲ್ಲಿ ಪರಿವರ್ತನೆ ಮಾಡುವುದರಿಂದ ರೈತರಿಗೆ ಹಲವಾರು ಲಾಭಗಳಿವೆ. ಈಗಾಗಲೆ ಅಮೆರಿಕ ಸೇರಿ ಕೆಲವು ರಾಷ್ಟ್ರಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗಿದ್ದು, ಭಾರತದಲ್ಲೂ ಅನುಮತಿ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಜೈವಿಕ ತಂತ್ರಜ್ಞಾನದ ತಜ್ಞ ಹಾಗೂ ಸಂಶೋಧಕ ಡಾ.ಚನ್ನಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಔಷಧಗಳಾಗಿ ಆಹಾರ ಮತ್ತು ಪೌಷ್ಟಿಕಾಂಶ ಕುರಿತ ಸಂವಾದದಲ್ಲಿ ಮಾತನಾಡಿ, ಟೊಮ್ಯಾಟೊದಲ್ಲಿ ಕ್ರಿಸ್ಪರ್ ವಂಶವಾಹಿ ಪರಿವರ್ತನೆ ಮಾಡುವುದರಿಂದ ಅದು ಮಾಗುವ ಅಥವಾ ಹಣ್ಣಾಗಲು ತಗಲುವ ಅವಧಿ ಹೆಚ್ಚಾಗುತ್ತಾ ಹೋಗುತ್ತದೆ. ಅದರ ಕಾಪಿಡುವ ಅವಧಿ ಕೂಡ ಹೆಚ್ಚುತ್ತದೆ. ಇದರಿಂದಾಗಿ ಬೆಳೆಗಾರರು ತಮ್ಮ ಬೆಳೆಗಳನ್ನು ಹೆಚ್ಚು ಕಾಲ ಕಾಯ್ದಿಡಬಹುದು ಎಂದು ವಿವರಿಸಿದರು. ಇತರ ತರಕಾರಿಗಳು, ಹಣ್ಣುಗಳು, ಗೋಧಿ, ಭತ್ತದಲ್ಲಿಯೂ ಇದು ಸಾಧ್ಯವಿದೆ ಎಂಬುದನ್ನು ತಳಿ ವಿಜ್ಞಾನ ಸಾಬೀತು ಮಾಡಿ ತೋರಿಸಿದೆ ಎಂದರು.
ಇಸ್ರೋ ಅನ್ವೇಷಣೆಗೆ ಸ್ವೀಡನ್ ಸಾಥ್
ಬಾಹ್ಯಾಕಾಶ ಸಂಸ್ಥೆ ಇಸ್ರೋ ನಡೆಸುವ ಶುಕ್ರ ಗ್ರಹ ಅನ್ವೇಷಣೆಗೆ ಸ್ವೀಡನ್ ಕೈಜೋಡಿಸಲಿದೆ ಎಂದು ‘ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ ಬಾಹ್ಯಾಕಾಶ ತಂತ್ರಜ್ಞಾನ ಸಹಯೋಗ’ ಸಂವಾದದಲ್ಲಿ ಮಾತನಾಡಿದ ಸ್ವೀಡನ್ ರಾಯಭಾರಿ ಕ್ಲಾಸ್ ಮೊಲೀನ್ ಪ್ರಕಟಿಸಿದರು. ಇಸ್ರೋ ಯೋಜಿಸುತ್ತಿರುವ ಗಗನಯಾನ ಇಡೀ ದೇಶಕ್ಕೆ ಹೊಸ ಪ್ರೇರಣೆ ನೀಡಬಲ್ಲದು ಎಂದು ಸ್ವೀಡನ್ನಿನ ಗಗನಯಾನಿ ಪೊ›. ಕ್ರಿಸ್ಟರ್ ಫ್ಯೂಗಲ್​ಸಾಂಗ್ ಹೇಳಿದರು. ಅನಗತ್ಯ ಕಸ ಉತ್ಪಾದನೆಯಾಗದಂತೆ ತಡೆಯುವ ಗಗನಯಾನಿಗಳ ಜೀವನಶೈಲಿ ಅತ್ಯುತ್ತಮ ಉದಾಹರಣೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಅಂಬ್ಲಿಕಲ್ ಡಿಸೈನ್ ಸಿಇಒ ಸಿಸಿಲಿಯಾ ಹರ್ಟ್ಸ್ ಹೇಳಿದರು. ಗಗನಯಾತ್ರಿಗಳು ಇರುವ ಪರಿಸ್ಥಿತಿಯಲ್ಲಿ ಯಾವ ವಸ್ತುವೂ ವ್ಯರ್ಥವಾಗುವಂತೆಯೇ ಇಲ್ಲ. ಇವರ ‘ಸರ್ಕ್ಯುಲರ್ ಇಕಾನಮಿ’ ಪ್ರಯತ್ನ ಭೂಮಿಯ ಮೇಲೆ ವಾಸಿಸುವ ನಾವು ಕಲಿಯಬೇಕಾದ್ದು ಬಹಳಷ್ಟಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
