ಬೆಂಗಳೂರು: ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಗುರುವಾರ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ತೆರಳಿ, ವಿಚಾರಣೆ ಎದುರಿಸಿದರು. 11 ಗಂಟೆಗೆ ಲೆಕ್ಕಪರಿಶೋಧಕರ ಜತೆ ಇಡಿ ಕಚೇರಿಗೆ ಹಾಜರಾದ ಜಾರ್ಜ್​ರನ್ನು ಇಡಿ ಉಪನಿರ್ದೇಶಕ ರಾಹುಲ್ ಸಿನ್ಹಾ ಮತ್ತು ಇತರ ಅಧಿಕಾರಿಗಳು ಸತತ 4 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದರು. ಇಡಿ ಅಧಿಕಾರಿಗಳು ಜಾರ್ಜ್ ಕುಟುಂಬ ಸದಸ್ಯರ ಆದಾಯ, ಹೂಡಿಕೆಗಳು, ಐಟಿ ರಿಟರ್ನ್ಸ್ ಸಲ್ಲಿಸಿರುವ ದಾಖಲೆ ಪರಿಶೀಲಿಸಿದರು. 2005- 06 ಸಾಲಿನ ಆದಾಯ ತೆರಿಗೆ ವಿವರ ಸಲ್ಲಿಕೆ ಜತೆಗೆ ಆಡಿಟ್ ಬ್ಯಾಲೆನ್ಸ್ ಶೀಟ್ ಪರಿಶೀಲನೆ ನಡೆಸಿದರು. ಬಳಿಕ ವಿವಿಧ ಕಂಪನಿಗಳಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಷೇರುಗಳು, ದೇಶದಲ್ಲಿ ಹೂಡಿಕೆ ಮಾಡಿರುವ ಆಸ್ತಿ-ಪಾಸ್ತಿಗಳು, ವಿದೇಶದಲ್ಲಿ ಹೊಡಿಕೆ ಮಾಡಲಾದ ಬಂಡವಾಳ ಹಾಗೂ ಅದರ ವಿವರ, ಯಾರ ಹೆಸರಿನಲ್ಲಿ ಹೂಡಿಕೆ ಮಾಡಲಾಗಿದೆಂಬ ಕುರಿತು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಹೊಂದಿರುವ ಆಸ್ತಿಗಳು ಹಾಗೂ ವಿದೇಶದಲ್ಲಿ ಮಾಡಿರುವ ಹೂಡಿಕೆ ಬಗ್ಗೆ ಜಾರ್ಜ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ದೋಷಿಯಲ್ಲ:ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್, ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಿದ್ದೇನೆ. ವಿಚಾರಣೆಗೆ ಕರೆದ ಕೂಡಲೇ ನಾನು ದೋಷಿ ಅಲ್ಲ. ತನಿಖೆಯಾಗಬೇಕು ಎಂದರು. ಯಾರು ಬೇಕಾದರೂ, ಯಾರ ಮೇಲೆ ಬೇಕಾದರೂ ದೂರು ನೀಡಬಹುದು. ಸಾರ್ವ ಜನಿಕ ಜೀವನದಲ್ಲಿ ಇರುವವರಿಗೆ ಮಸಿ ಬಳಿಯೋಕೆ ಕೆಲವರು ಕಾಯುತ್ತಿರುತ್ತಾರೆ. ಇನ್ನೂ ಕೆಲ ದಾಖಲೆಗಳನ್ನು ಕೇಳಿದ್ದು, ಮುಂದಿನ ದಿನಗಳಲ್ಲಿ ನೀಡುತೇನೆ. ಇಡಿ ಏನೇ ದಾಖಲೆ ಕೇಳಿದರೂ ಕೊಡಲು ತಯಾರಾಗಿದ್ದೇನೆ. ಕುಟುಂಬದವರಿಗೆ ಸಮನ್ಸ್ ನೀಡಲಿಲ್ಲ ಎಂದರು.
ಆರೋಪವೇನು?: ಜಾರ್ಜ್ ಅವರು ಪತ್ನಿ, ಮಕ್ಕಳು, ಅಳಿಯನ ಹೆಸರಿನಲ್ಲಿ ಅಮೇರಿಕದ ನ್ಯೂಯಾರ್ಕ್ ಮತ್ತು ಆಸ್ಟ್ರೇಲಿಯಾದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎನ್ನಲಾದ ಆಸ್ತಿಯ ದಾಖಲೆಗಳ ಸಮೇತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಇಡಿ ಅಧಿಕಾರಿ ಗಳಿಗೆ ದೂರು ನೀಡಿದ್ದರು. 2014-15ರಲ್ಲಿ ಲೋಕಾಯುಕ್ತರಿಗೆ ಜಾರ್ಜ್ ಸಲ್ಲಿಸಿರುವ ಆಸ್ತಿ ವಿವರಗಳಲ್ಲಿ ಎರಡು ಆಸ್ತಿ ಮಾತ್ರ ಉಲ್ಲೇಖಿಸಲಾಗಿದೆ. ಹೂಡಿಕೆ ಬಿಟ್ಟು ಬೇರೆ ಯಾವುದೇ ವಿವರ ನೀಡಲಿಲ್ಲ. 2008ರಿಂದಲೇ ವಿದೇಶದಲ್ಲಿ ಆಸ್ತಿಯ ಮೇಲೆ ಹೂಡಿಕೆ ಮಾಡಿದ್ದರೂ, ಇದರ ವಿವರಗಳನ್ನು ಚುನಾವಣಾ ಅಫಿಡವಿಟ್​ಗಳಲ್ಲಿ ತಿಳಿಸಿರಲಿಲ್ಲ. ಜಾರ್ಜ್ ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಗಳಿಸಿರುವ ಹಣವನ್ನು ವಿದೇಶಗಳಿಗೆ ವರ್ಗಾಯಿಸಿ ಅಕ್ರಮ ಆಸ್ತಿ ಖರೀದಿಸಿರುವ ಸಾಧ್ಯತೆಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − six =
Remember me
