ಕೆಂಪೇಗೌಡರು ಬೆಂಗಳೂರನ್ನು ವಾಸ್ತು ವಿಜ್ಞಾನ ಶಾಸ್ತ್ರದ ನಿಯಮಾನುಸಾರ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಕಳೆದ ಎರಡು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು, ತಮ್ಮ ಸಂಶೋಧನೆಯಲ್ಲಿ ಕೆಂಪೇಗೌಡರು ವಾಸ್ತು ಸೂತ್ರಗಳನ್ನು ಬಳಸಿರುವುದು ಕಂಡು ಬಂದಿದೆ ಎಂದು ಜ್ಯೋತಿಷಿ ವಾಸ್ತು ತಜ್ಞ ಗಜೇಂದ್ರ ಬಾಬು ಹೇಳಿದರು.
ಮಹದೇವಪುರ ಕ್ಷೇತ್ರದ ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಅವರ 515ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕೆಂಪೇಗೌಡರು ಕೋಟೆಯನ್ನು ಕೇಂದ್ರ ಬಿಂದುವನ್ನಾಗಿರಿಸಿ, 4 ಮುಖ್ಯ ದ್ವಾರಗಳನ್ನು ನಿರ್ಮಿಸಿದ್ದಾರೆ. ಇದರಿಂದ ಪಂಚಗೋಪುರಗಳಿಗೆ ರೇಖೆಯನ್ನು ಎಳೆದರೆ ಪೂರ್ವ ಮತ್ತು ಉತ್ತರ-ಈಶಾನ್ಯ ಹಾಗೂ ಉತ್ತರ ಬೆಳದಿರುವುದು ನಮ್ಮ ಬೆಂಗಳೂರು ನಗರಕ್ಕೆ ಅತಿ ಹೆಚ್ಚು ಸಕಾರಾತ್ಮಕ ಶಕ್ತಿ ತುಂಬಲು ಸಾಧ್ಯವಾಗಿದೆ ಎಂದು ತಿಳಿಸಿದರು.
ನಗರಗಳನ್ನು ನಿರ್ಮಾಣ ಮಾಡುವಾಗ ಭೂಪ್ರದೇಶ ಹಾಗೂ ಸ್ಥಳಾಕೃತಿಯ ಅಧ್ಯಯನ ನಡೆಸಬೇಕು. ಋಷಿಗಳ ತಪೋಶಕ್ತಿಗಳ ತರಂಗಗಳು, ಋಷಿಗಳ ಮೂಲಾ, ವೃಕ್ಷಗಳ ಮೂಲ, ನದಿಗಳು ಹಾಗೂ ದೇವಾಲಯಗಳನ್ನು ಪರಿಶೀಲಿಸಿ ಕಟ್ಟುವುದು ನಮ್ಮ ವಾಸ್ತು ಶಿಲ್ಪ ಸಂಪ್ರದಾಯ ಎಂಬುದಕ್ಕೆ ಗವಿಗಂಗಾಧರೇಶ್ವರ ದೇವಾಲಯ, ಜಲಕಂಠೇಶ್ವರ, ಹಲಸೂರಿನ ಸೋಮೇಶ್ವರ ದೇವಾಲಯಲಯಗಳು ಸಾಕ್ಷಿಯಾಗಿವೆ ಎಂದು ಹೇಳಿದರು.
ನದಿಗಳ ಮೂಲವಾದ ಬೆಂಗಳೂರಿನ ಸುತ್ತಮುತ್ತ ಆರು ನದಿಗಳು ಅರ್ಕಾವತಿ, ಪಿನಾಕಿನಿ, ಚಿನ್ನಾರ್, ಕುಮುದಾವತಿ, ಸುವರ್ಣಮುಖಿ, ವೃಷಭಾವತಿ ಹಾಗೂ ಒಂದು ಸಾವಿರ ಕೆರೆಗಳನ್ನು ಗುರುತಿಸಿ ಬೆಂಗಳೂರು ನಗರಕ್ಕೆ ಧನಾತ್ಮಕ ಶಕ್ತಿಗಳು ಹಾಗೂ ನೈಸರ್ಗಿಕ ಶಕ್ತಿಗಳನ್ನು ಕಂಡುಕೊಂಡು ಅದ್ಭುತವಾದ ನಗರವನ್ನು ನಿರ್ಮಾಣ ಮಾಡಿರುವುದನ್ನು ನಾವು ಕಾಣಬಹುದಾಗಿದೆ ಎಂದರು.
ಕೆಂಪೇಗೌಡರು ಶುಭ ಕಾರ್ಯಗಳನ್ನು ಮಕರ ಸಂಕ್ರಾತಿಯಂದೇ ಪ್ರಾರಂಭಿಸುತ್ತಿದ್ದರು. 14ನೇ ಜನವರಿ 1534ರ ಶುಭದಿನದಂದು ಕೋಟೆಯ ಉತ್ತರ ಈಶಾನ್ಯ ಭಾಗವಾದ ಇಂದಿನ ರಾಜ ಮಾರುಕಟ್ಟೆ ಬಳಿ ಶಿಲಾನ್ಯಾಸ ಮಾಡಿದ ಫಲವೇ ಆ ಭಾಗದಲ್ಲಿ ಸುಮಾರು 66 ಪೇಟೆಗಳ ನಿರ್ಮಾಣ ಹಾಗೂ ಇಂದಿಗೂ ಎಷ್ಟೋ ಮಾಲ್‌ಗಳಿದ್ದರೂ, ಬೆಳಗಿನ ಜಾವ 4-00 ಗಂಟೆಯಿಂದ ಸಿಟಿ ಮಾರ್ಕೆಟ್ ಸುತ್ತಮುತ್ತಲು ವ್ಯಾಪಾರ ವಹಿವಾಟುಗಳು ನಡೆದು ಬೆಂಗಳೂರಿನ ಅಷ್ಠ ದಿಕ್ಕುಗಳಿಗೂ ಹೂ-ಹಣ್ಣು-ತರಕಾರಿ ಸಗಟುಗಳನ್ನು ರವಾನಿಸಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಸಹಾಯವಾಗುತ್ತಿದೆ ಎಂದು ವಿವರಿಸಿದರು.ಮಾಜಿ ಸಚಿವ ಅರವಿಂದ್ ಲಿಂಬಾವಳಿ ಮಾತನಾಡಿ ಬೆಂಗಳೂರು ನಗರ ಪ್ರದೇಶದಂತೆ ನಗರ ಹೊರವಲಯದ ಗ್ರಾಮಾಂತರ ಪ್ರದೇಶಗಳು ಕೂಡ ಅಭಿವೃದ್ಧಿ ಹೊಂದಬೇಕು,ಅಲ್ಲಿ ಸಿಗುವ ಮೂಲ ಸೌಕರ್ಯಗಳು ಗ್ರಾಮಾಂತರ ಭಾಗದಲ್ಲಿ ಸಿಗಬೇಕು ಎಂದು ಹೇಳಿದರು.
ಬೆಂಗಳೂರು ನಾಡಪ್ರಭು ಕೆಂಪೇಗೌಡರು ಕಟ್ಟಿದ ಗೋಪುರದಿಂದ ಹೊರಗಿನವರೆಗೆ ವಿಸ್ತಾರವಾಗಿ ಬೆಳೆಯುತ್ತಿದೆ,ನಗರದ ಹೊರವಲಯದ ಹೊಸ ಬೆಂಗಳೂರು ಅನ್ನು ನಗರದ ಮಾದರಿಯಲ್ಲೇ ಕಟ್ಟಬೇಕು,ನಗರದಲ್ಲಿ ಸಿಗುವ ಪ್ರತಿಯೊಂದು ಸವಲತ್ತುಗಳು ಗ್ರಾಮಾಂತರ ಪ್ರದೇಶಗಳಲ್ಲಿ ದೊರೆಯಬೇಕು, ಈ ನಿಟ್ಟಿನಲ್ಲಿ ನಾವು ಕೆಂಪೇಗೌಡರ ಆದರ್ಶದಲ್ಲಿಯೇ,ಅವರ ಮಾದರಿಯಲ್ಲಿಯೇ ಮಹದೇವಪುರವನ್ನು ಕಟ್ಟುತ್ತಿದ್ದೇವೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತರಲ್ಲ,ಎಲ್ಲ ಸಮುದಾಯದ ಜನರಿಗೆ ಸರಿಸಮನಾಗಿ ನ್ಯಾಯ ಒದಗಿಸಿದ್ದಾರೆ, ತಮ್ಮ ದೂರದೃಷ್ಟಿಯಿಂದ ನಗರವನ್ನು ಕಟ್ಟಿದ್ದಾರೆ, ಜನಪ್ರತಿನಿಧಿಗಳು,ಅಧಿಕಾರಿಗಳು ಜನರಿಗೆ ಮೂಲ ಸೌಕರ್ಯಗಳ ಕಲ್ಪಿಸುವ ಕೆಲಸ ಮಾಡಿದಾಗ ಮಾತ್ರ ಕೆಂಪೇಗೌಡರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ, ಮಹಾಪುರುಷರ ಸಾರಿದ ವಿಚಾರ, ತತ್ವ ಸಿದ್ದಾಂತಗಳನ್ನು ನಾವು ಅರ್ಥ ಮಾಡಿಕೊಂಡು,ಅವರ ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಎಸ್‌ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ವಾಸ್ತು ತಜ್ಞ ಗಜೇಂದ್ರ ಬಾಬು ಹಾಗೂ ವಿಶೇಷಾಧಿಕಾರಿ ಬಿ.ವಿ.ಪ್ರಸಾದ್ ಸನ್ಮಾನಿಸಿ ಗೌರವಿಸಲಾಯಿತು.ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎನ್.ನಟರಾಜ್, ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ಹೂಡಿ ಪಿಳ್ಳಪ್ಪ, ಕೆ.ಎಂ.ಎಂ ಮಂಜುನಾಥ್, ಎಲ್.ರಾಜೇಶ್, ಜ್ಯೋತಿಪುರ ವೇಣು, ಕಣ್ಣೂರು ಅಶೋಕ್ ಕಣ್ಣೂರು, ಬಿದರಹಳ್ಳಿ ಬಿದರಹಳ್ಳಿ ರಾಜೇಶ್ ಕೆಂಪೇಗೌಡ ಮತ್ತಿತರರಿದ್ದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:fourteen + fourteen =
Remember me
