ಬೆಂಗಳೂರು:ಕೆಂಗಲ್ ಹನುಮಂತಯ್ಯ ಅವರ ಆಡಳಿತ ನಮಗೆಲ್ಲ ಮಾದರಿ. ಬದ್ಧತೆ, ನಿಷ್ಠುರತೆಯಿಂದ ಸರ್ಕಾರದ ಕೆಲಸ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.
ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನಾಚಾರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಹಳೇ ಮೈಸೂರು ಭಾಗದವರಾದರೂ ವಿಶಾಲ ಕರ್ನಾಟಕವಾಗಬೇಕೆಂದು ಕರ್ನಾಟಕ ಏಕೀಕರಣದಲ್ಲಿ ಭಾಗವಹಿಸಿದ್ದರು. ಅವರ ತತ್ವ ಆದರ್ಶಗಳು ನಮಗೆ ಮಾದರಿ ಎಂದರು.
ಕೆಂಗಲ್ ಹನುಮಂತಯ್ಯನವರು ದಕ್ಷ ಆಡಳಿತಗಾರ, ಕರ್ನಾಟಕವನ್ನು ಅತ್ಯಂತ ದಕ್ಷತೆಯಿಂದ ಸುಮಾರು ನಾಲ್ಕೂವರೆ ವರ್ಷ ಆಳಿದವರು. ಕೆಂಗಲ್ ಹನುಮಂತಯ್ಯನವರ ಜನ್ಮ ದಿನದಂದು ಅವರ ಸ್ಮರಣೆ ಮಾಡಿ ಗೌರವ ಸಲ್ಲಿಸಿದ್ದೇವೆ. ರಾಮನಗರ ಜಿಲ್ಲೆಯವರಾದ ಅವರು ಸಂವಿಧಾನ ಜಾರಿಯಾದ ನಂತರ ಮುಖ್ಯಮಂತ್ರಿಯಾದವರು. ಅವರ ಕಾಲದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಶಾಸಕಾಂಗ ಪಕ್ಷದ ನಾಯಕರಾಗಿ ಮುಖ್ಯ ಮಂತ್ರಿಯಾದವರು. ವಿಧಾನಸೌಧದ ಕಟ್ಟಿಸಿದ್ದು ಅವರು. ಆದರೆ ದುರ್ದೈವ, ಅದನ್ನು ಅವರು ಉದ್ಘಾಟಿಸಲು ಬಿಡಲಿಲ್ಲ ಎಂದು ಹೇಳಿದರು.
ನಮಗೆಲ್ಲ ಮಾದರಿ ಆಡಳಿತಗಾರ:ಕೆಂಗಲ್ ಹನುಮಂತಯ್ಯ ಅವರ ಆಡಳಿತ ನಮಗೆಲ್ಲ ಮಾದರಿ. ವಿಧಾನಸೌಧದ ಪೂರ್ವದಿಕ್ಕಿನಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ಬರೆಸಿದ್ದು, ಜನಸೇವೆಯೇ ಜನಾರ್ಧನ ಸೇವೆ ಎಂದು ಅದರ ಅರ್ಥ. ಬದ್ಧತೆ, ನಿಷ್ಠುರತೆಯಿಂದ ಸರ್ಕಾರದ ಕೆಲಸ ಮಾಡಿದ್ದರು. ಅವರ ತತ್ವ ಆದರ್ಶಗಳು ನಮಗೆ ಮಾದರಿ ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
