ದೇವನಹಳ್ಳಿ:ಹಿಂದೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದು ವಿಶೇಷ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್​2 ಅನ್ನು ಉದ್ಘಾಟಿಸಿದ್ದರು. ಟರ್ಮಿನಲ್​2 ಅನೇಕ ದಿನಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿತ್ತು. ಇದೀಗ ಟರ್ಮಿನಲ್​2 ಗೆ ಸಾರ್ವಜನಿಕರಿಗೂ ಪ್ರವೇಶ ಸಿಕ್ಕಿದ್ದು ಇಂದು ಅಲ್ಲಿಂದ ಮೊದಲನೇ ವಿಮಾನ ಹಾರಲಿದೆ.
5000 ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್2 ಇಂದಿನಿಂದ ಕಾರ್ಯರಂಭ ಮಾಡಿದೆ. ಇಲ್ಲಿಂದ ಹಾರಲಿರುವ ಮೊದಲ ವಿಮಾನ ಸ್ಟಾರ್ ಏರ್ ಸಂಸ್ಥೆಯದ್ದಾಗಿದ್ದು ವಿಮಾನ ಬೆಂಗಳೂರಿನಿಂದ ಕಲಬುರಗಿಗೆ ಟೇಕ್ ಆಫ್​ ಮಾಡಿದೆ.
ಬೆಳಗ್ಗೆ‌ 8.40 ಕ್ಕೆ ಟರ್ಮಿನಲ್2 ನಲ್ಲಿ ಸ್ಟಾರ್ ಏರ್ ವಿಮಾನ ಮೊದಲ ವಿಮಾನ ಟೇಕ್ ಆಫ್​ ಮಾಡಿದ್ದು ಟರ್ಮಿನಲ್2 ರಲ್ಲಿ ಮೊದಲ ವಿಮಾನ ಹತ್ತುವ ಪ್ರಯಾಣಿಕರಿಗೆ ಸಂಪ್ರದಾಯಕವಾಗಿ ಶಾಲು ಹೊರಿಸಿ ವಿಮಾನ ನಿಲ್ದಾಣದ ಸಿಬ್ಬಂದಿ ಸ್ವಾಗತ ಕೋರಿದ್ದಾರೆ. ಟರ್ಮಿನಲ್2 ನಲ್ಲಿ ಪ್ರಯಾಣಿಕರು ಉತ್ಸಾಹಭರಿತರಾಗಿದ್ದು ಮೊದಲ ವಿಮಾನದಲ್ಲಿ 44 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಶೀಘ್ರದಲ್ಲೇ ಏರ್ ಇಂಡಿಯಾ, ವಿಸ್ತಾರ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಟರ್ಮಿನಲ್ 2 ನಿಂದ ಸೇವೆ ಆರಂಭಿಸಲಿವೆ. ಸದ್ಯಕ್ಕೆ ದೇಶಿಯ ವಿಮಾನಗಳ ಹಾರಾಟಕ್ಕೆ ಮಾತ್ರ ಟರ್ಮಿನಲ್ 2ನಲ್ಲಿ ಅವಕಾಶ ನೀಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
