ಹಾಸನ :ಹಾಸನದಲ್ಲಿ 9 ವಿವಿಧ ನರ್ಸಿಂಗ್ ಕಾಲೇಜುಗಳ 100 ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ನಗರದ ಖಾಸಗಿ ಕಾಲೇಜಿಗೆ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟ ನಂತರ ನಡೆಸಲಾಗುತ್ತಿರುವ ಕರೊನಾ ಪರೀಕ್ಷೆಗಳಲ್ಲಿ ಈ ಸಂಗತಿ ತಿಳಿದುಬಂದಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್​ ಹೇಳಿದ್ದಾರೆ.
ಹಾಸನದ ಖಾಸಗಿ ನರ್ಸಿಂಗ್ ಕಾಲೇಜೊಂದಕ್ಕೆ ಜುಲೈ 17 ರಿಂದ 21 ರ ನಡುವೆ ಕೇರಳದಿಂದ ಬಂದ 48 ವಿದ್ಯಾರ್ಥಿಗಳಲ್ಲಿ 21 ಜನರಿಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿತ್ತು. ಅವರೆಲ್ಲರೂ ಏಸಿಮ್ಟೊಮ್ಯಾಟಿಕ್​ ಆಗಿದ್ದು, ಖಾಸಗಿ ಕೋವಿಡ್ ಕೇರ್​ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪ್ರವಾಹದಿಂದ 7,800 ಕೋಟಿ ರೂ. ಹಾನಿ
ಈ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಜನರನ್ನು ಪತ್ತೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ 9 ನರ್ಸಿಂಗ್ ಕಾಲೇಜುಗಳಲ್ಲಿ 900 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಯಲ್ಲಿ ಒಟ್ಟು 100 ಜನ ವಿದ್ಯಾರ್ಥಿಗಳಿಗೆ ಈವರೆಗೆ ಪಾಸಿಟೀವ್ ಬಂದಿದೆ ಎಂದು ಡಾ.ವಿಜಯ್​ ಹೇಳಿದ್ದಾರೆ.(ಏಜೆನ್ಸೀಸ್)
ಭಾರತಕ್ಕೆ ಮತ್ತೊಂದು ಪದಕ: ಕಂಚು ಗೆದ್ದ ಕುಸ್ತಿಪಟು ಬಜರಂಗ್ ಪೂನಿಯ

ಗಾಲ್ಫ್​ನಲ್ಲಿ ಪದಕ ಜಸ್ಟ್​ ಮಿಸ್! ಒಲಿಂಪಿಕ್ಸ್​ನಲ್ಲಿ 4ನೇ ಸ್ಥಾನ ಗಳಿಸಿದ ಬೆಂಗಳೂರಿನ ಅದಿತಿ ಅಶೋಕ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 4 =
Remember me
