ಬೆಂಗಳೂರು: ತನ್ನ ರಾಜ್ಯದ ಕರೊನಾ ಸೋಂಕಿತರಿಗೆ ಕರ್ನಾಟಕದ ಆಸ್ಪತ್ರೆಗಳಲ್ಲೇ  ಚಿಕಿತ್ಸೆ ಕೊಡಿಸಬೇಕೆಂದು ಹಠಕ್ಕೆ ಬಿದ್ದಿರುವ ಕೇರಳ ಸರ್ಕಾರ, ರಾಜ್ಯ ಸರ್ಕಾರದ ಮೇಲೆ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ ಮೇಲಿಂದ ಮೇಲೆ ಒತ್ತಡ ತರುತ್ತಿದೆ.
ಕೇರಳಕ್ಕೆ ಹಠವೇಕೆ?: ಆ ರಾಜ್ಯಕ್ಕೆ ಸೇರಿದ ಕಾಸರಗೋಡು ಸದ್ಯ ಕರೊನಾದ ಹಾಟ್​ಸ್ಪಾಟ್ ಎನಿಸಿದೆ. ಆ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಆಗಿರುವವರ ಸಂಖ್ಯೆ 120 ಮುಟ್ಟಿದೆ. ಸುಮಾರು 40 ಸಾವಿರ ಜನರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಅಲ್ಲಿ ಪರಿಸ್ಥಿತಿ ಇನ್ನಷ್ಟು ಕೈ ಮೀರಿದರೆ ಆರೋಗ್ಯ ವ್ಯವಸ್ಥೆ ಒದಗಿಸುವುದು ಕಷ್ಟ. ಹೀಗಾಗಿ ಕರ್ನಾಟಕದ ಕರಾವಳಿಯಲ್ಲಿರುವ ಆರೋಗ್ಯ ಸೇವೆ ಬಳಸಿಕೊಳ್ಳುವುದು ಕೇರಳ ಲೆಕ್ಕಾಚಾರ.
ಅಲ್ಲಿನ ರೋಗಿಗಳನ್ನು ಕರ್ನಾಟಕಕ್ಕೆ ಕಳಿಸಿಕೊಟ್ಟರೆ ಕೊಂಚ ನಿರಾಳವಾಗಬಹುದು ಎಂಬ ಲೆಕ್ಕಾಚಾರದಲ್ಲೇ ಅಲ್ಲಿನ ಪ್ರಮುಖ ಸಂಘಟನೆಗಳು, ಮಾಧ್ಯಮಗಳು, ರಾಜಕಾರಣಿಗಳು ಯಡಿಯೂರಪ್ಪ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಎಚ್.ಡಿ.ದೇವೇಗೌಡ ಕೂಡ ಕೇರಳ ಪರ ನಿಲ್ಲಲು ಇದೇ ಕಾರಣ ಎನ್ನಲಾಗಿದೆ.
ಎಲ್ಲ ರಾಜ್ಯಗಳೂ ತಮ್ಮ ತಮ್ಮ ರಾಜ್ಯದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಕೇರಳ ಮಾತ್ರ ಹಠಕ್ಕೆ ಬಿದ್ದು ಕರ್ನಾಟಕಕ್ಕೆ ತನ್ನ ರಾಜ್ಯದ ಸೋಂಕಿತರನ್ನು ಕಳಿಸಿಕೊಡಲು ಮುಂದಾಗಿರುವುದು ಕರ್ನಾಟಕ ಸರ್ಕಾರಕ್ಕೆ ಸೋಜಿಗವೆನಿಸಿದೆ. ರಾಜ್ಯ ಸರ್ಕಾರ ಕೂಡ ಯಾವುದೇ ಕಾರಣಕ್ಕೂ ಬಗ್ಗದಿರಲು ನಿರ್ಧರಿಸಿದ್ದು, ಕೇರಳದಿಂದ ಬರುವ ಕರೊನಾ ಸೋಂಕಿತ ರೋಗಿಗಳನ್ನು ದಾಖಲು ಮಾಡಿಕೊಳ್ಳಬಾರದೆಂದು ಕರಾವಳಿಯ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ಕೊಟ್ಟಿದೆ. ಒಂದು ವೇಳೆ ಗಡಿ ಮುಕ್ತವಾದರೆ, ಕರಾವಳಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂಬ ಅಂದಾಜು ರಾಜ್ಯದ್ದು. ಈಗಾಗಲೇ ಮಂಗಳೂರಿನ ಆಸ್ಪತ್ರೆಗಳಲ್ಲಿ ಕೇವಲ 8 ಜನ ಮಾತ್ರ ಕೋವಿಡ್-19 ಪಾಸಿಟಿವ್ ಆಗಿದ್ದು, ಇವರಲ್ಲಿ ಐವರು ಕಾಸರಗೋಡಿನವರೇ ಆಗಿದ್ದಾರೆ.
ಸೋಂಕಿತರು ಅಲ್ಲೇ ಹೆಚ್ಚೇಕೆ?
ಕಾಸರಗೋಡು, ಕಣ್ಣಾನೂರು ಮತ್ತು ಕಾಂಞಗಾಡ್ ಜಿಲ್ಲೆಗಳಿಗೆ ವಿದೇಶದಿಂದ ಬಂದವರನ್ನು ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಿದ್ದರೂ, ಅವರೆಲ್ಲ ಬೇಕಾಬಿಟ್ಟಿ ಓಡಾಡಿಕೊಂಡಿದ್ದರು. ಇದರಿಂದ ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬಂದಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ, ಕರಾವಳಿಯ ಖಾಸಗಿ ಆಸ್ಪತ್ರೆಗಳ ವೈದ್ಯರೂ ಗಡಿ ಮುಕ್ತಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇರಳ ವಾಹನಕ್ಕೆ ನೋ ಎಂಟ್ರಿ
ಕೇಂದ್ರ ಸರ್ಕಾರ ರೋಗಿಗಳ ಅಂತಾರಾಜ್ಯ ಓಡಾಟಕ್ಕೆ ಅನುಕೂಲವಾಗುವಂತೆ ಮುಚ್ಚಿರುವ ಹೆದ್ದಾರಿಗಳನ್ನು ತೆರೆಯುವ ಬಗ್ಗೆ ಪರಿಶೀಲಿಸಬೇಕು ಎಂದು ಕೇರಳ ಹೈಕೋರ್ಟ್ ಸೂಚನೆ ನೀಡಿರುವ ನಡುವೆಯೇ ದ.ಕ. ಜಿಲ್ಲಾಡಳಿತ ಹಾಗೂ ಮಂಗಳೂರು ನಗರಾಡಳಿತ ಮತ್ತಷ್ಟು ಬಿಗು ಕ್ರಮಕ್ಕೆ ಮುಂದಾಗಿವೆ. ಕೇರಳ ರಾಜ್ಯದಿಂದ ಬರುವ ಯಾವುದೇ ರೋಗಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ತಬ್ಲಿಘಿ ಜಮಾತ್​ ಕಾರ್ಯಕರ್ತರ ವಿರುದ್ಧ ಅಸಭ್ಯ ವರ್ತನೆ ಆರೋಪ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five + nineteen =
Remember me
