ಮಂಡ್ಯ:ಅದೃಷ್ಟವೆಂಬುದು ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆದರೆ, ಒಮ್ಮೆ ಅದೃಷ್ಟ ದೇವತೆ ಮನೆ ಪ್ರವೇಶಿಸಿದರೆ ಸಾಕು ಆತನ ಬದುಕೇ ಬಂಗಾರವಾಗಿಬಿಡುತ್ತದೆ ಎಂಬುದಕ್ಕೆ ಸಕ್ಕರೆ ನಾಡಿನಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.
ಕೇರಳದ ಲಾಟರಿ ಮಂಡ್ಯದ ಯುವಕನನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ. ಫೇಸ್​ಬುಕ್​ ಫ್ರೆಂಡ್ ಭೇಟಿ ಮಾಡಲು ಹೋದ ಮಂಡ್ಯ ಯುವಕನಿಗೆ ಅದೃಷ್ಟ ದೇವತೆಯೇ ಒಲಿದಿದ್ದಾಳೆ. ಮಂಡ್ಯ ಮದ್ದೂರು ತಾಲೂಕಿನ ಯುವಕನಿಗೆ ಕೇರಳದ ಲಾಟರಿಯಲ್ಲಿ ಕೋಟಿ ರೂಪಾಯಿ ಬಂಪರ್ ಬಹುಮಾನ ಬಂದಿದೆ.
ಇದನ್ನೂ ಓದಿರಿ:ದೈಹಿಕ ಸಂಭೋಗ ನೆಪದಲ್ಲಿ ಮಂಚಕ್ಕೆ ಕಟ್ಟಿ ಮಹಿಳೆ ಮೇಲೆ ವಿಕೃತಿ: ಬಂಧಿತರು ಬಿಚ್ಚಿಟ್ಟ ಭಯಾನಕ ಸತ್ಯವಿದು!
ಮದ್ದೂರಿನ ಸೋಮನಹಳ್ಳಿಯ ಉದ್ಯಮಿ ಪುತ್ರ ಸೋಹನ್ ಬಲರಾಮ್​ಗೆ ಕೇರಳದ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದೆ. ಕೇರಳದ ಪುಥನಾಥಿಯಲ್ಲಿನ ಅಂಗಡಿಯಲ್ಲಿ ಖರೀದಿಸಿದ್ದ ಭಾಗ್ಯಧರ ಲಾಟರಿಗೆ ಕೋಟಿ ರೂ. ಬಹುಮಾನ ಬಂದಿದೆ.
ಫೇಸ್ಬುಕ್ ಫ್ರೆಂಡ್ ಭೇಟಿ ಮಾಡಲು ಶನಿವಾರ ಕೇರಳದ ಪುಥನಾಥಣಿಗೆ ತೆರಳಿದ್ದ ಸೋಹನ್ ಬಲರಾಮ್, ವಾಪಸ್ಸು ಬರುವಾಗ 100 ರೂ. ಕೊಟ್ಟು ಸ್ನೇಹಿತರ ಒತ್ತಾಯದ ಮೇರೆಗೆ ಲಾಟರಿ ಕೊಂಡಿದ್ದ. ಇದೀಗ ಸೋಹನ್​ ಕೊಂಡಿದ್ದ ಲಾಟರಿ ಸಂಖ್ಯೆಗೆ ಕೋಟಿ ರೂಪಾಯಿ ಬಂಪರ್ ಬಹುಮಾನ ಬಂದಿದ್ದು, ಸೋಹನ್ ಬಲರಾಂ ಕುಟುಂಬ ಫುಲ್​ ಖುಷಿಯಾಗಿದೆ.(ದಿಗ್ವಿಜಯ ನ್ಯೂಸ್​)
ಕುಡಿದ ಅಮಲಲ್ಲಿ ಮರ್ಮಾಂಗವನ್ನೇ ಕಚ್ಚಿ ತುಂಡರಿಸಿದ ಭೂಪ- ಅದನ್ನು ಹಿಡಿದುಕೊಂಡೇ ಆಸ್ಪತ್ರೆಗೆ ದಾಖಲು

ಅಂತ್ಯಕ್ರಿಯೆ ಮುಗಿಸಿ ಬರುವಾಗ ಭೀಕರ ಅಪಘಾತ: 6 ಮಂದಿ ಸ್ಥಳದಲ್ಲೇ ಸಾವು

ಹಿಮದಲ್ಲಿ ಕರಗಿದ ಕಣ್ಣೀರು; 171 ಮಂದಿ ಇನ್ನೂ ನಾಪತ್ತೆ, ಸಂಪರ್ಕ ಕಡಿದುಕೊಂಡ14 ಹಳ್ಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + five =
Remember me
