
ಬೆಂಗಳೂರು:ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಮತ್ತೊಬ್ಬ ಸದಸ್ಯರಾದ ಎಂ.ಡಿ.ರವಿ ಅವರು ಮಾರ್ಚ್ 12ಕ್ಕೆ ನಿವೃತ್ತಿಯಾಗಲಿದ್ದು, ಆ ಸ್ಥಾನಕ್ಕೆ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.ಸದಸ್ಯ ಎಚ್.ಎಂ.ಮಂಜುನಾಥ್ ಅವರು ಡಿಸೆಂಬರ್‌ಗೆ ನಿವೃತ್ತಿಯಾಗಿದ್ದರು. ಕೆಇಆರ್‌ಸಿಯಲ್ಲಿ ಈ ಬಾರಿ 2 ಸದಸ್ಯತ್ವ ಹುದ್ದೆಗಳು ಖಾಲಿಯಾದಂತಾಗುತ್ತದೆ.ತೆರವಾಗಿರುವ ಆಯೋಗದ ಸದಸ್ಯ (ಕಾನೂನು) ಹುದ್ದೆ ಮತ್ತು ಆಯೋಗದ ಸದಸ್ಯ (ತಾಂತ್ರಿಕ)ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ನೇಮಕ ಪ್ರಕ್ರಿಯೆ ನಡೆಯುತ್ತಿದೆ.ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯಲ್ಲಿ ಅರ್ಹರನ್ನು ಆಯ್ಕೆ ಮಾಡಿಮುಖ್ಯಮಂತ್ರಿಗಳಿಗೆ ಕಳುಹಿಸಲಿದ್ದು, ಅವರು ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಇಆರ್‌ಸಿ ಅದಾಲತ್ಎಸ್ಕಾಂಗಳು ಕೇಳಿರುವ ವಿದ್ಯುತ್ ಬಿಲ್ ಏರಿಕೆ ಬಗ್ಗೆ ಕೆಇಆರ್‌ಸಿ ಸಾರ್ವಜನಿಕ ಅದಾಲತ್ ನಡೆಸಲಿದೆ. ಈ ಬಾರಿ ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್ ನೇತೃತ್ವದ ಮೂವರ ಸಮಿತಿಯಲ್ಲಿ ಒಬ್ಬರು ನಿವೃತ್ತಿಯಾಗಿದ್ದು, ಇಬ್ಬರು ಮಾತ್ರವೇ ಉಳಿದಿದ್ದಾರೆ. ಮಾ.12ಕ್ಕೆ ಮತ್ತೊಬ್ಬ ಸದಸ್ಯ ನಿವೃತ್ತಿ ಆಗುವುದರೊಳಗಾಗಿ ಈಗಿರುವ ಇಬ್ಬರ ಸಮಿತಿಯೇ ಎಲ್ಲಾ ಎಸ್ಕಾಂಗಳಲ್ಲಿ ಸಾರ್ವಜನಿಕ ಅದಾಲತ್ ನಡೆಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 1 =
Remember me
