ಬೆಂಗಳೂರು:ಕರಾವಳಿಯವರಿಗೆ ಮಹತ್ವದ ದಿನವಾದ ಆಟಿ ಅಮಾವಾಸ್ಯೆ (ಜು. 17) ಪ್ರಯುಕ್ತ ಬೆಂಗಳೂರಿನ ತುಳುಕೂಟವು ಔಷಧೀಯ ಗುಣಗಳ ಕೆತ್ತೆ ಕಷಾಯವನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಆಟಿ ಅಮಾವಾಸ್ಯೆ ದಿನವಾದ ಸೋಮವಾರ ಬೆಂಗಳೂರಿನ ಶೇಷಾದ್ರಿ ಪುರದ ಮಂತ್ರಿ ಮೆಟ್ರೋ ಸ್ಟೇಷನ್​ ಎದುರು ಇರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ 6.30ರಿಂದ 9.30ರ ತನಕ ಕೆತ್ತೆ ಕಷಾಯ (ಹಾಲೆ ಮರದ ತೊಗಟೆ ಕಷಾಯ) ತುಳುಕೂಟ ಉಚಿತವಾಗಿ ವಿತರಣೆ ಮಾಡಲಿದೆ.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣ ಸಂಬಂಧ ಬಿ-ರಿಪೋರ್ಟ್ ಅಂಗೀಕೃತ: ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ನಿರಾಳ
ರೋಗನಿರೋಧಕ ಗುಣ ಇರುವ ಪಾಲೆ (ಹಾಲೆ) ಮರದ ತೊಗಟೆಯ ಈ ರಸವನ್ನು ಒಂದು ನಿರ್ದಿಷ್ಟ ದಿನದಂದು ಮದ್ದಿನ ರೀತಿಯಲ್ಲಿ ಕುಡಿಯುವ ಪದ್ಧತಿ ಕರಾವಳಿಯಲ್ಲಿದೆ. ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಹಾಲೆ ಮರದ (ಕೆತ್ತೆ) ಕಷಾಯ ಕುಡಿದರೆ ಆ ವರ್ಷದುದ್ದಕ್ಕೂ ಯಾವುದೇ ರೋಗ ಬರುವುದಿಲ್ಲ ಎಂದು ತುಳುಕೂಟದ ಅಧ್ಯಕ್ಷ ಸುಂದರ್​ರಾಜ್ ರೈ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ಸ್ಕ್ಯಾನ್​ ಮಾಡಲಿದೆ ಸರ್ಕಾರ: ಉದ್ದೇಶ ಏನೆಂದು ತಿಳಿಸಿದ ಡಿಸಿಎಂ
ಅಮಾವಾಸ್ಯೆಯ ಹಿಂದಿನ ದಿನ ಪಾಲೆ (ಹಾಲೆ) ಮರದ ತೊಗಟೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಮರುದಿನ ಬೆಳಗ್ಗೆ ಅರೆದು ಅದರ ರಸವನ್ನು ಮಕ್ಕಳಿಗೆ ಕುಡಿಸಿದರೆ ವರ್ಷಪೂರ್ತಿ ಮದ್ದು ಕೊಡುವ ಅಗತ್ಯವಿಲ್ಲ ಹಾಗೂ ಹುಳಬಾಧೆಗೂ ಇದು ದಿವ್ಯೌಷಧ. ಮಧುಮೇಹ, ರಕ್ತದೊತ್ತಡ ಮತ್ತು ಹೊಟ್ಟೆಯ ಸಂಬಂಧದ ಕಾಯಿಲೆಗಳಿಗೂ ಇದು ಮದ್ದು ಎಂದು ಅವರು ಹೇಳಿದ್ದಾರೆ.
ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
