ಬೆಂಗಳೂರು:ಕೇವಿನ್ ಕೇರ್ಸ್ ಕಂಪನಿಯು ಚಿಕ್, ನೈಲ್, ರಾಗ ಎಂಬ ಹೆಸರಿನಡಿ ಹ್ಯಾಂಡ್ ಸ್ಯಾನಿಟೈಜರ್ಸ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕರೊನಾ ಆತಂಕದಿಂದ ಹ್ಯಾಂಡ್ ಸ್ಯಾನಿಟೈಜರ್ಸ್​ಗಳಿಗೆ ಬೇಡಿಕೆ ಹೆಚ್ಚಿದ್ದು, ನಕಲಿ ಸ್ಯಾನಿಟೈಜರ್ಸ್ ದಂಧೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಕ್ವಾಲಿಟಿ ಸ್ಯಾನಿಟೈಜರ್ಸ್ ನೀಡಿ ಗ್ರಾಹಕರ ಆರೋಗ್ಯ ಕಾಪಾಡಲು ಕಂಪನಿ ಮುಂದಾಗಿದೆ. ಕೇವಲ 1 ರೂ.ಗೆ 2 ಎಂ.ಎಲ್.ನ ಸ್ಯಾನಿಟೈಜರ್ಸ್ ಗ್ರಾಹಕರಿಗೆ ದೊರೆಯಲಿದೆ. ಇದನ್ನು ಗ್ರಾಹಕರು ಎರಡು ಬಾರಿ ಬಳಕೆ ಮಾಡಬಹುದಾಗಿದೆ.
ರಾಷ್ಟ್ರವ್ಯಾಪ್ತಿ ಎಲ್ಲ ಕಿರಾಣಿ ಅಂಗಡಿಗಳಲ್ಲೂ ಈ ಸ್ಯಾನಿಟೈಜರ್ಸ್ ಗಳು ವಿವಿಧ ಫ್ಲೇವರ್ಸ್​ಗಳಲ್ಲಿ ದೊರೆಯಲಿದೆ. ಸಣ್ಣ ಪುಟ್ಟ ಎಂಎಲ್​ಗಳ ಬಾಟಲಿಯ ಜತಗೆ 5 ಲೀಟರ್ ಕಂಟೇನರ್​ಗಳಲ್ಲೂ ಇದು ಲಭ್ಯವಿದೆ. ‘ನಾವು ಲಾಭಗಳಿಸುವ ಆಸೆಯಿಂದ ಸ್ಯಾನಿಟೈಜರ್ಸ್​ಗಳನ್ನು ಉತ್ಪಾದಿಸಿಲ್ಲ. ಬದಲಾಗಿ ಕರೊನಾದಿಂದ ಜನರನ್ನು ಮುಕ್ತ ಮಾಡಲು ಕಡಿಮೆ ಬೆಲೆಯಲ್ಲಿ ಎಲ್ಲರಿಗೂ ಸಿಗಲಿ ಎಂಬ ಮನೋಭಾವದಿಂದ ಸ್ಯಾನಿಟೈಜರ್ಸ್​ಗಳನ್ನು ಬಿಡುಗಡೆ ಮಾಡಿದ್ದೇವೆಂದು’ ಕೇವಿನ್ ಕೇರ್ಸ್ ಪ್ರೖೆ.ಲಿ.ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸಿ.ಕೆ. ರಂಗನಾಥನ್ ತಿಳಿಸಿದ್ದಾರೆ. ಉತ್ಪನ್ನದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ 1800 419 0671 ಸಂರ್ಪಸಬಹುದು.
ಲಾಕ್​ಡೌನ್​ನಿಂದ ಬಡವರಿಗೆ ತೀವ್ರ ಸಂಕಷ್ಟಕ್ಕೆ ಪ್ರಧಾನಿ ಮೋದಿ ಸ್ಪಂದನೆ, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
