ಶಿವಮೊಗ್ಗ: ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಮವಾರ ಒಟ್ಟು ನಾಲ್ಕು ಕೆಎಫ್​ಡಿ (ಮಂಗನ ಕಾಯಿಲೆ) ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಸೋಂಕು ಮೈಸೂರು ಜಿಲ್ಲೆಗೂ ಹರಡುವ ಆತಂಕ ಎದುರಾಗಿದೆ. ಮೈಸೂರು ತಾಲೂಕಿನ ಹಡಜನ ಗ್ರಾಮದಲ್ಲಿ ಮಂಗಗಳು ಸಾವನ್ನಪ್ಪಿರುವುದು ಆರೋಗ್ಯ ಇಲಾಖೆಗೆ ಆತಂಕ ಮೂಡಿಸಿದೆ. 2013ರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೆಎಫ್​ಡಿ ವೈರಾಣು ಕಾಣಿಸಿಕೊಂಡಿತ್ತು. ಹಡಜನದಲ್ಲಿ ಸಾವನ್ನಪ್ಪಿದ ಮಂಗಗಳ ದೇಹದ ಮಾದರಿಯನ್ನು ಶಿವಮೊಗ್ಗದ ವಿಆರ್​ಡಿಎಲ್​ಗೆ ಪರೀಕ್ಷೆಗೆ ಕಳಿಸಲಾಗಿದೆ. ಒಂದೆರಡು ದಿನಗಳಲ್ಲಿ ವರದಿ ಕೈಸೇರಲಿದೆ.
ಈ ವರ್ಷ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಎಫ್​ಡಿ ವೈರಸ್ ಪತ್ತೆಯಾಗಿದೆ. ಈವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಐವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಅಸುನೀಗಿದ್ದು, ಸೋಂಕಿತರ ಸಂಖ್ಯೆ 217ಕ್ಕೆ ತಲುಪಿದೆ.
ನಡೆದಿದೆ ಸಂಶೋಧನೆ
ಕೆಎಫ್​ಡಿ ಬಗ್ಗೆ ಈವರೆಗೆ ಸಂಶೋಧನೆಗಳೇ ನಡೆದಿರಲಿಲ್ಲ. ಕೇವಲ ರೋಗನಿರೋಧಕ ಲಸಿಕೆಯಷ್ಟೇ ಪರಿಹಾರವಾಗಿತ್ತು. ಇದೀಗ ಸಂಶೋಧನೆಗೆ ಐಐಎಸ್ಸಿ ಜತೆಗೆ ಬ್ರಿಟನ್ ಸರ್ಕಾರದ ಅಂಗಸಂಸ್ಥೆ ಮುಂದೆ ಬಂದಿವೆ.
ಮತ್ತೆ 4 ಪ್ರಕರಣ ಬೆಳಕಿಗೆ
ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ತಲಾ ಒಬ್ಬರು, ಜೊಯಿಡಾ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವುದು ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ಇದರೊಂದಿಗೆ ಕೆಎಫ್​ಡಿ ಸೋಂಕಿತರ ಸಂಖ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ 160, ಉತ್ತರ ಕನ್ನಡದಲ್ಲಿ 11ಕ್ಕೆ ಏರಿಕೆಯಾಗಿದೆ.
ಮಂಗಗಳೇ ಮೊದಲ ಬಲಿ
ಮಂಗಗಳು ಈ ವೈರಾಣುವಿನಿಂದ ಮೊದಲು ಸಾವನ್ನಪ್ಪುತ್ತವೆ. ಬಳಿಕ ವೈರಾಣುಗಳು ಮೃತ ಮಂಗನ ದೇಹದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿ ಸಸ್ತನಿಗಳ ಮೂಲಕ ಮನುಷ್ಯನ ದೇಹಕ್ಕೆ ಬರುತ್ತವೆ. ಚಿಕ್ಕ ಮಕ್ಕಳು, ವಯೋವೃದ್ಧರು ಈ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚು.
ಕೊವಿಡ್​-19 ರೋಗಿಗಳಿಗೆ ಚಿಕಿತ್ಸೆ ನೀಡಿ, ಅದರಲ್ಲೇ ಪ್ರಾಣ ಬಿಟ್ಟ ನನ್ನ ಪತಿಗೆ ಈಗ ಅವಮಾನ ಮಾಡಲಾಗುತ್ತಿದೆ; ವೈದ್ಯರ ಪತ್ನಿಯ ಅಳಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
