ಬೆಂಗಳೂರು:ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಪುಂಡರು ಬೆಂಕಿ ಇಟ್ಟು ದಾಂಧಲೆ ನಡೆಸಿದ್ದರು. ಘಟನೆಯಲ್ಲಿ ಶಾಸಕರ ಮನೆ ಸುಟ್ಟುಕರಕಲಾಗಿತ್ತು. ತೀವ್ರನೊಂದಿರುವ ಶಾಸಕರು ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದರು. ಈ ಘಟನೆಯ ಪ್ರಮುಖ ಆರೋಪಿಯಾಗಿರುವ ಮಾಜಿ ಮೇಯರ್​ ಸಂಪತ್​ರಾಜ್​ರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಶಾಸಕರು ಬಹಿರಂಗವಾಗಿಯೇ ಕೈ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಲೇ ಇದ್ದಾರೆ. ಇದೇ ಪ್ರಕರಣ ಮತ್ತೊಬ್ಬ ಆರೋಪಿ ಜಾಕೀರ್​ ಎಂಬಾತನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ.
ಇದರ ಬೆನ್ನಲ್ಲೇ ಗುರುವಾರ ಸುದ್ದಿಗೋಷ್ಠಿ ನಡೆಸಿದ ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ಲಿ ಅಂತ ಮನವಿ ಮಾಡಿದ್ದೆ. ಮಾಧ್ಯಮ ಮತ್ತು ಪೊಲೀಸರಿಂದ ನನಗೆ ನ್ಯಾಯ ಸಿಕ್ಕಿದೆ. ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಕೂಡ ನನ್ನ ಪರ ಮಾತನಾಡುತ್ತಾರೆ. ಅಧ್ಯಕ್ಷರನ್ನ ಭೇಟಿ ಮಾಡಿ ಸಂಪತ್ ಅವರನ್ನ ಪಕ್ಷದಿಂದ ಉಚ್ಛಾಟಿಸುವಂತೆ ಮನವಿ ಮಾಡಿದೆ. ಅಧ್ಯಕ್ಷರು ಶಿಸ್ತು ಸಮಿತಿಗೆ ಶಿಫಾರಸು ಮಾಡ್ತೀನಿ ಅಂತ ಹೇಳಿದ್ರು. ನನಗೆ ನ್ಯಾಯ ಕೊಡ್ಸಿ ಎಂದು ಮನವಿ ಮಾಡಿದ್ದೇನೆ. ಪಕ್ಷದ ನಾಯಕರು ಸಪೋರ್ಟ್ ಮಾಡಲಿಲ್ಲ ಅಂದ್ರೆ ಏಕಾಂಗಿಯಾಗೇ ಹೋರಾಟ ಮಾಡ್ತೀನಿ ಎಂದರು. ಅಲ್ಲದೆ ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರುತ್ತಾರೆ ಎಂಬ ವಿಚಾರಕ್ಕೂ ಇದೇ ವೇಳೆ ತೆರೆ ಎಳೆದರು.
ನಾನು ಬಿಜೆಪಿಗೆ ಹೋಗಲ್ಲ. ನಮ್ಮ ತಂದೆ ಕಾಂಗ್ರೆಸ್​, ನಾನೂ ಕಾಂಗ್ರೆಸ್​ನಲ್ಲಿಯೇ ಇರುವೆ. ಅರವಿಂದ ಲಿಂಬಾವಳಿ ನಮ್ಮ ಸಂಬಂಧಿ. ಅದನ್ನು ಬಿಟ್ಟರೆ ನಾನು ಬಿಜೆಪಿಗೆ ಹೋಗ್ತೀನಿ ಅನ್ನೋದು ಸರಿಯಲ್ಲ ಎಂದು ಅಖಂಡ ಶ್ರೀನಿವಾಸ್​ ಮೂರ್ತಿ ಸ್ಪಷ್ಟಪಡಿಸಿದರು.
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕಿಡಿಗೇಡಿಗಳು ನನ್ನ ಮನೆಯನ್ನು ಸುಟ್ರು. ನನಗೆ ಆ ದುಃಖ ಇದೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಘಟನೆಯಲ್ಲಿ ಪ್ರತ್ಯೇಕ ವಕೀಲರನ್ನ ನೇಮಿಸಲ್ಲ. ಸರ್ಕಾರದ ವಕೀಲರು ನೋಡಿಕೊಳ್ಳುತ್ತಾರೆ. ಆರೋಪಿಗಳಿಗೆ ಜಾಮೀನು ಕೊಡುವುದು ಬಿಡುವುದು ಕೋರ್ಟ್​ಗೆ ಬಿಟ್ಟಿದ್ದು. ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದರು.
ಮಗಳ ಚೀರಾಟ ಕೇಳಿ ಪಾಲಕರು ಓಡಿ ಬರುವಷ್ಟರಲ್ಲಿ ಹೆಣವಾಗಿದ್ದಳು! ಅಲ್ಲೇ ಕುಳಿತಿದ್ದ ಬಾಲಕ ಬಾಯ್ಬಿಟ್ಟ ಸ್ಫೋಟಕ ರಹಸ್ಯ

ಸರ್ಕಾರದ 2 ಲಕ್ಷ ರೂ. ಪರಿಹಾರ ಪಡೆಯಲು ಯಾರೂ ಇಲ್ಲ..! ಇದ್ದರೆ ದಯವಿಟ್ಟು ಸಂಪರ್ಕಿಸಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − five =
Remember me
