ಕೋಲಾರ:ಕುದುರೆ ಮೇಲೆ ಕುಳಿತ ವ್ಯಕ್ತಿಯೊಬ್ಬರ ಸುತ್ತ ನೂರಾರು ಜನ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರ ಮುಂದೆ ಭರ್ಜರಿ ಬ್ಯಾಂಡ್ ಸೆಟ್ ನಾದವೂ ರಿಂಗಣಿಸುತ್ತಲೇ ಇತ್ತು… ಯಾವುದೋ ಮದುವೆ ಗಂಡನ್ನು ಮೆರವಣಿಗೆ ಕರೆದೊಯ್ಯುತ್ತಿರಬೇಕು ಎಂದು ತುಸು ಅಲ್ಲೇ ನಿಂತು ನೋಡುತ್ತಿದ್ದವರ ಬಳಿಗೆ ಮೆರವಣಿಗೆ ತಂಡ ಸಮೀಪಿಸುತ್ತಿದ್ದಂತೆ ಅಚ್ಚರಿ ಕಾದಿತ್ತು. ಕುದುರೆ ಮೇಲೆ ಸವಾರಿ ಹೊರಟಿದ್ದು ನಗರಸಭೆಯ ನೂತನ ಅಧ್ಯಕ್ಷ!
ಹೌದು, ಇಂತಹದ್ದೊಂದು ವಿಭಿನ್ನ ಮೆರವಣಿಗೆ ಕೋಲಾರ ಜಿಲ್ಲೆಯ ಕೆಜಿಎಫ್​ ನಗರದಲ್ಲಿ ಸೋಮವಾರ ಸಂಭವಿಸಿದೆ.
ಕೆಜಿಎಫ್​ ನಗರಸಭೆ ಅಧ್ಯಕ್ಷರಾಗಿ ಇತ್ತೀಚಿಗಷ್ಟೇ ಕಾಂಗ್ರೆಸ್​ನ ವಲ್ಲಳ್‌ ಮುನಿಸ್ವಾಮಿ ಆಯ್ಕೆಯಾಗಿದ್ದರು. ಈ ಖುಷಿಯಲ್ಲಿ ಅವರ ಅಭಿಮಾನಿಗಳು ವಲ್ಲಳ್‌ ಮುನಿಸ್ವಾಮಿಯನ್ನು ಕುದುರೆಯಲ್ಲಿ ಕೂರಿಸಿ ನಗರದ ಹಲವು ವಾರ್ಡ್ ಗಳಲ್ಲಿ ಪ್ರದಕ್ಷಿಣೆ ಹಾಕಿಸಿದರು. ಕುದುರೆ ಮೇಲೆ ಕುಳಿತ ನೂತನ ನಗರಸಭೆ ಅಧ್ಯಕ್ಷರ ದರ್ಬಾರ್ ಕಂಡು ಸಾರ್ವಜನಿಕರು ಮೂಕವಿಸ್ಮಿತರಾಗಿದ್ದರು.
ಒಂದೇ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಬಿಎಸ್​ವೈ-ಸಿದ್ದರಾಮಯ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 10 =
Remember me
