ಬೆಂಗಳೂರು:ಕೆಜಿಎಫ್ ತಾತ ಖ್ಯಾತಿಯ ಕೃಷ್ಣಾಜಿ ರಾವ್ ಅವರ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟನಕದಲ್ಲಿ ಚಿಕಿತ್ಸೆ ಮುಂದುವರಿದೆ.
ಕೃಷ್ಣಾಜೀ ರಾವ್ ಅವರಿಗೆ 70 ವರ್ಷ ವಯಸ್ಸಾಗಿದೆ. ಕೆಜಿಎಫ್ ಸಿನಿಮಾದಲ್ಲಿ ತಾತನ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ಕೃಷ್ಣಾಜಿ ರಾವ್​, ಕೆಜಿಎಫ್​ ತಾತ ಎಂದೇ ಖ್ಯಾತಿ ಪಡೆದರು. ನಂತರ ಸಾಕಷ್ಟು ಸಿನಿಮಾಗಳು ಇವರನ್ನು ಅರಸಿಕೊಂಡು ಬಂದವು. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಹೀರೋ ಆಗಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಕೌಬಾಯ್ ಗೆಟಪ್​ನಲ್ಲಿ ಕಾಣಿಸಿಕೊಂಡ ಕೃಷ್ಣಾಜಿ ರಾವ್, 70ನೇ ವಯಸ್ಸಲ್ಲಿ ಹೀರೋ ಆಗುವ ಕನಸನ್ನೂ ಈಡೇರಿಸಿಕೊಂಡಿದ್ದರು.
ನಿನ್ನೆ(ಬುಧವಾರ) ತಡರಾತ್ರಿ ಮನೆಯಲ್ಲಿ ಸುಸ್ತಾಗಿ ಕೃಷ್ಣಾಜಿ ರಾವ್​ ಬಿದ್ದರಂತೆ. ತಕ್ಷಣಕ್ಕೆ ಅವರ ಕುಟುಂಬಸ್ಥರು ಮಧ್ಯರಾತ್ರಿ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಲಂಗ್ಸ್​ಗೆ ಸೋಂಕು ತಗುಲಿದೆಯಂತೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಎರಡ್ಮೂರು ಗಂಟೆ ಏನು ಹೇಳೋಕೆ‌ ಆಗಲ್ಲ ಅಂದಿದ್ದಾರೆ ಎಂದು ಕೃಷ್ಣಾಜಿ ರಾವ್​ರ ಆಪ್ತ ನಂದಕುಮಾರ್ ತಿಳಿಸಿದ್ದಾರೆ.
ಮಕ್ಕಳ ಸ್ಕೂಲ್ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್‌, ವೈಟ್‌ನರ್‌ ಪತ್ತೆ! ಬೆಂಗಳೂರಲ್ಲಿ ಆಘಾತಕಾರಿ ಪ್ರಕರಣ ಬಯಲು

ಕೆಲಸ ಕೊಟ್ಟ ಮಾಲೀಕನ ಜತೆ ಲವ್ವಿಡವ್ವಿ! ಮಂಚ ಹಂಚಿಕೊಂಡ ಬಳಿಕ ಈಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ… ಬೆಂಗ್ಳೂರಿನ ಬಟ್ಟೆ ವ್ಯಾಪಾರಿಯ ಕಣ್ಣೀರ ಕಥೆ ಇದು

ಬಾಳು ಕೊಡ್ತೀನಿ… ಎಂದು ಪುಸಲಾಯಿಸಿ ಆಕೆಯ ಮನೆಯಲ್ಲೇ ಇದ್ದವ ಹೀಗಾ ಮಾಡೋದು? ಎಲ್ಲವನ್ನೂ ಕಳೆದುಕೊಂಡಾಕೆಯ ಗೋಳಿನ ಕಥೆ ಇದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seven =
Remember me
