ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನೋಡಿದಲ್ಲೆಲ್ಲ ಕೆಜಿ ಗಟ್ಟಲೆ ಚಿನ್ನ, ಕೈ ಇಟ್ಟಲ್ಲೆಲ್ಲ ಕಂತೆಕಂತೆ ನೋಟುಗಳು, ಸಿಕ್ಕಿರುವ ದಾಖಲೆಗಳೆಲ್ಲವೂ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿ ಪತ್ರಗಳು! ಶುಕ್ರವಾರ 12 ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆದ ವೇಳೆ ಕಂಡುಬಂದ ದೃಶ್ಯಗಳಿವು. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ವಿವಿಧ ಇಲಾಖೆಯ 12 ಅಧಿಕಾರಿಗಳ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆಗಳು ಸೇರಿ ರಾಜ್ಯಾದ್ಯಂತ 60 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಶೋಧ ಕಾರ್ಯ ನಡೆಸಿದರು. ಕೋಟ್ಯಂತರ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳು ಈ ವೇಳೆ ಪತ್ತೆಯಾಗಿದೆ.
ಬ್ಯಾಂಕ್ ಲಾಕರ್​ಗಳ ಪರಿಶೀಲನೆ ಮುಂದುವರಿದಿದೆ. 12 ಅಧಿಕಾರಿಗಳ ಬಳಿ ಬರೋಬ್ಬರಿ 49.85 ಕೋಟಿ ಮೌಲ್ಯದ ಸಂಪತ್ತು ಪತ್ತೆಯಾಗಿದೆ.
* ಅಖ್ತರ್ ಅಲಿ ಕಾನೂನು ಮಾಪನ ಶಾಸ್ತ್ರ ಬೆಂಗಳೂರು ವಿಭಾಗದ ಉಪ ನಿಯಂತ್ರಕ: 4 ಸ್ಥಳಗಳ ಮೇಲೆ ದಾಳಿ, 4 ಸೈಟ್, 3 ವಾಸದ ಮನೆ, 25.18 ಲಕ್ಷ ರೂ. ನಗದು, 2.08 ಕೋಟಿ ರೂ. ಮೌಲ್ಯದ ಚಿನ್ನಾಭರಣ, 11 ಲಕ್ಷ ರೂ. ಬೆಲೆ ಬಾಳುವ ವಾಹನ, 37.45 ಲಕ್ಷ ರೂ. ಬೆಲೆಯ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಒಟ್ಟು 8.63 ಕೋಟಿ ರೂ. ಮೌಲ್ಯದ ಆಸ್ತಿ.
* ಸಿ.ಟಿ. ಮುದ್ದುಕುಮಾರ್ ಅಪರ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(ಬೆಂಗಳೂರು): 10 ಸ್ಥಳಗಳ ಮೇಲೆ ದಾಳಿ. 7.41 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. 3 ವಾಸದ ಮನೆ, 6 ಎಕರೆ 20 ಗುಂಟೆ ಕೃಷಿ ಭೂಮಿ, 1 ಫಾಮ್ರ್ ಹೌಸ್, 1.13 ಲಕ್ಷ ನಗದು, 88.75 ಲಕ್ಷ ರೂ. ಬೆಲೆಯ ಚಿನ್ನಾಭರಣ, 35.40 ಲಕ್ಷ ರೂ. ಬೆಲೆಯ ವಾಹನ, ವಸಂತನರಸಾಪುರದಲ್ಲಿ 3 ಕೋಟಿ ರೂ. ಮೌಲ್ಯದ ತರುಣ್ ಎಂಟರ್ ಪ್ರೖೆಸಸ್ ಶೆಡ್, 68.86 ಕೋಟಿ ರೂ. ಬೆಲೆಯ ಉಳಿತಾಯ, ಬಂದೂಕು ಇದೆ.
* ಚೇತನ್ ಕುಮಾರ್ ಜಿಲ್ಲಾ ಕಾರ್ವಿುಕ ಅಧಿಕಾರಿ (ಮೈಸೂರು ವಿಭಾಗ): 7 ಸ್ಥಳಗಳಲ್ಲಿ ಶೋಧ. 5.38 ಕೋಟಿ ರೂ. ಮೌಲ್ಯದ ಆಸ್ತಿ. 2 ಸೈಟ್, 1 ಮನೆ, 1 ವಾಣಿಜ್ಯ ಸಂಕೀರ್ಣ, 7 ಎಕರೆ ಕೃಷಿ ಜಮೀನು, 58 ಲಕ್ಷ ರೂ.ನಗದು, 14.71 ಬೆಲೆ ಬಾಳುವ ಚಿನ್ನಾಭರಣ, 30 ಸಾವಿರ ರೂ. ಬೆಲೆ ಬಾಳುವ ವಾಹನಗಳು ಪತ್ತೆ.
* ಸಿ.ಎಲ್.ಆನಂದ್ ಆಯುಕ್ತ, ಮಂಗಳೂರು ಮಹಾನಗರ ಪಾಲಿಕೆ: 6 ಸ್ಥಳಗಳಲ್ಲಿ ಶೋಧ, 2.77 ಕೋಟಿ ರೂ.ಮೌಲ್ಯದ ಆಸ್ತಿ. 3 ವಾಸದ ಮನೆ, 4 ಎಕರೆ 27 ಗುಂಟೆ ಕೃಷಿ ಭೂಮಿ, 19.40 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 20.50 ಲಕ್ಷ ರೂ. ಮೌಲ್ಯದ ವಾಹನ, 10 ಲಕ್ಷ ರೂ. ನಗದು, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ 16 ಲಕ್ಷ ರೂ. ಹಣ ಪತ್ತೆ.
*ಬಿ.ವಿ. ರಾಜ ಎಫ್​ಡಿಎ, ಕೆಐಎಡಿಬಿ(ಬೆಂಗಳೂರು): 3 ಸ್ಥಳಗಳ ಮೇಲೆ ದಾಳಿ. 5.51 ಕೋಟಿ ರೂ. ಮೌಲ್ಯದ ಆಸ್ತಿ. ಇದರಲ್ಲಿ 1 ಸೈಟ್, 6 ವಾಸದ ಮನೆ, 7 ಸಾವಿರ ರೂ. ನಗದು, 40 ಲಕ್ಷ ಮೌಲ್ಯದ ಚಿನ್ನಾಭರಣ, 32 ಲಕ್ಷ ರೂ. ಮೌಲ್ಯದ ವಾಹನ, 25 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ, 50 ಲಕ್ಷ ರೂ. ಇತರ ವಸ್ತುಗಳು ಸೇರಿದೆ.
*ಟಿ.ಆರ್. ಮಂಜುನಾಥ್ ಎಫ್​ಡಿಎ, ಕಂದಾಯ ಸಹಾಯಕ ಆಯುಕ್ತರ ಕಚೇರಿ (ಬೆಂ.ಉತ್ತರ): 4 ಸ್ಥಳಗಳಲ್ಲಿ ಶೋಧ. 2.68 ಕೋಟಿ ರೂ. ಮೌಲ್ಯದ ಆಸ್ತಿ. 1 ಸೈಟ್, 1 ವಾಸದ ಮನೆ, 3 ಎಕರೆ 12 ಗುಂಟೆ ಕೃಷಿ ಭೂಮಿ, 4 ಲಕ್ಷ ನಗದು, 67.63 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 8 ಲಕ್ಷಬೆಲೆಯ ವಾಹನ, 20.12 ಲಕ್ಷ ರೂ. ಬೆಲೆಯ ಗೃಹೋಪಯೋಗಿ ವಸ್ತುಗಳು ಪತ್ತೆ.
*ಕೆ. ನರಸಿಂಹಮೂರ್ತಿ ಪೌರಾಯುಕ್ತ, ಕೆಎಂಎಎಸ್, ಹೆಬ್ಬಗೋಡಿ (ಆನೇಕಲ್): 6 ಸ್ಥಳಗಳಲ್ಲಿ 4.45 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. 2 ಸೈಟ್, 2 ವಾಸದ ಮನೆ, 6 ಲಕ್ಷ ರೂ. ನಗದು, 22.58 ಲಕ್ಷ ರೂ.ಬೆಲೆ ಬಾಳುವ ಚಿನ್ನಾಭರಣ, 16 ಲಕ್ಷ ರೂ. ಬೆಲೆಯ ವಾಹನ, 11.23 ಲಕ್ಷ ರೂ. ಬೆಲೆಯ ಗೃಹೋಪಯೋಗಿ ವಸ್ತುಗಳು ಸೇರಿವೆ.
*ಆರ್. ಸಿದ್ದಪ್ಪ ನಿರೀಕ್ಷಕ, ಪಶುಸಂಗೋಪನೆ ಇಲಾಖೆ, ರಾಮೇಶ್ವರ (ದೊಡ್ಡಬಳ್ಳಾಪುರ): 5 ಸ್ಥಳಗಳ ಮೇಲೆ ದಾಳಿ. 2.93 ಕೋಟಿ ರೂ. ಮೌಲ್ಯದ ಆಸ್ತಿ. 9 ಸೈಟ್, 3 ವಾಸದ ಮನೆ, 5 ಎಕರೆ ಕೃಷಿ ಭೂಮಿ, 3.65 ಲಕ್ಷ ರೂ.ನಗದು, 11.68 ಲಕ್ಷ ರೂ. ಬೆಲೆಯ ಚಿನ್ನಾಭರಣ, 12.35 ಲಕ್ಷ ರೂ. ಬೆಲೆಯ ವಾಹನಗಳು, 4.50 ಲಕ್ಷ ರೂ. ಬೆಲೆಯ ಇತರ ವಾಹನಗಳು ಸಿಕ್ಕಿವೆ.
*ಜಿ.ಎನ್.ಪ್ರಕಾಶ್ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ (ಶಿವಮೊಗ್ಗ): 3 ಸ್ಥಳಗಳಲ್ಲಿ ಶೋಧ. 2.07 ಕೋಟಿ ರೂ. ಮೌಲ್ಯದ ಆಸ್ತಿ. 2 ವಾಸದ ಮನೆ, 2 ಎಕರೆ 8 ಗುಂಟೆ ಕೃಷಿ ಭೂಮಿ, 12.86 ಕೋಟಿ ನಗದು, 38.32 ಲಕ್ಷ ಬೆಲೆಯ ಚಿನ್ನಾಭರಣ, 5.20 ಲಕ್ಷ ರೂ. ಬೆಲೆಯ ವಾಹನಗಳು ಮತ್ತು 11.30 ಲಕ್ಷ ರೂ. ಬೆಲೆಯ ಇತರ ವಸ್ತುಗಳು ಪತ್ತೆ.
*ನಾಗೇಂದ್ರ ಅಧ್ಯಕ್ಷ, ಅಂತರಗಂಗೆ ಗ್ರಾಮ ಪಂಚಾಯಿತಿ(ಭದ್ರಾವತಿ): 5 ಸ್ಥಳಗಳಲ್ಲಿ ಶೋಧ. 2.19 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ. ಇದರಲ್ಲಿ 2 ಸೈಟ್, 2 ವಾಸದ ಮನೆ, 5 ಎಕರೆ 14 ಗುಂಟೆ ಕೃಷಿ ಭೂಮಿ, 5.71 ರೂ., 12.80 ಲಕ್ಷ ರೂ. ಬೆಲೆಯ ಚಿನ್ನಾಭರಣ, 1.76 ಲಕ್ಷ ರೂ. ಬೆಲೆಯ ವಾಹನಗಳು ಮತ್ತು 7 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು ಸೇರಿವೆ.
*ಬಲವಂತ್ ರಾಥೋಡ್ ಯೋಜನಾ ನಿರ್ದೇಶಕ, ಜಿಪಂ (ಯಾದಗಿರಿ): 3 ಸ್ಥಳಗಳ ಮೇಲೆ ದಾಳಿ. 1.69 ಕೋಟಿ ರೂ. ಮೌಲ್ಯದ ಆಸ್ತಿ. 5 ಸೈಟ್, 1 ವಾಸದ ಮನೆ, 3.68 ಲಕ್ಷ ರೂ. ನಗದು, 17.59 ಲಕ್ಷ ರೂ. ಬೆಲೆಯ ಚಿನ್ನಾಭರಣ, 18.64 ಲಕ್ಷ ರೂ. ಬೆಲೆಯ ವಾಹನ, 12 ಲಕ್ಷ ರೂ. ಬೆಲೆಯ ಇತರ ವಸ್ತು ಪತ್ತೆ.
*ರಮೇಶ್ ಕುಮಾರ್ ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ (ಬೆಂಗಳೂರು): 4 ಸ್ಥಳಗಳಲ್ಲಿ ಶೋಧ. 4.08 ಕೋಟಿ ಮೌಲ್ಯದ ಆಸ್ತಿ. 2 ವಾಸದ ಮನೆ, 31.50 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 15 ಲಕ್ಷ ಮೌಲ್ಯದ ವಾಹನ, 20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, 1.12 ಲಕ್ಷ ರೂ. ಮೌಲ್ಯ ಮೌಲ್ಯದ ಇತರ ವಸ್ತುಗಳು ಪತ್ತೆ.
ಪಕ್ಕದ ಮನೆಗೆ ಚಿನ್ನವಿದ್ದ ಬ್ಯಾಗ್ ಎಸೆದ! :ಕಾನೂನು ಮಾಪನಶಾಸ್ತ್ರ ಬೆಂಗಳೂರು ವಿಭಾಗದ ಉಪ ನಿಯಂತ್ರಕ ಅಖ್ತರ್ ಅಲಿ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಕೆ.ಜಿ ಗಟ್ಟಲೆ ಚಿನ್ನ ಪತ್ತೆಯಾಗಿದೆ. ಲೋಕಾ ಅಧಿಕಾರಿಗಳು ಮನೆಯ ಕಾಲಿಂಗ್ ಬೆಲ್ ಒತ್ತುತ್ತಿದ್ದಂತೆ ಎಚ್ಚೆತ್ತುಕೊಂಡ ಅಖ್ತರ್ ಅಲಿ, ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದನ್ನು ಬ್ಯಾಗ್​ಗೆ ತುಂಬಿ ಪಕ್ಕದ ಮನೆಯ ಕಿಟಕಿಗೆ ಎಸೆದಿದ್ದರು. ಇದನ್ನು ನೋಡಿದ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನು ಕರೆದು ತೋರಿಸಿದ್ದಾರೆ. ಪರಿಶೀಲಿಸಿದಾಗ ಬ್ಯಾಗ್​ನಲ್ಲಿ 25 ಲಕ್ಷ ನಗದು, 2.20 ಕೆಜಿ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, 50ಕ್ಕೂ ಅಧಿಕ ದುಬಾರಿ ವಾಚ್, ಡೈಮಂಡ್ ಪತ್ತೆಯಾಗಿದೆ.
1. ಅಖ್ತರ್ ಅಲಿ: ಕಾನೂನು ಮಾಪನ ಶಾಸ್ತ್ರ ಬೆಂಗಳೂರು ವಿಭಾಗದ ಉಪ ನಿಯಂತ್ರಕ
2. ಸಿ.ಟಿ. ಮುದ್ದುಕುಮಾರ್: ಅಪರ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ(ಬೆಂಗಳೂರು)
3. ಚೇತನ್ ಕುಮಾರ್: ಕಾರ್ವಿುಕ ಅಧಿಕಾರಿ ಮೈಸೂರು
4. ಸಿ.ಎಲ್. ಆನಂದ್: ಆಯುಕ್ತ, ಮಂಗಳೂರು ಮಹಾನಗರ ಪಾಲಿಕೆ
5. ಬಿ.ವಿ. ರಾಜ: ಎಫ್​ಡಿಎ, ಕೆಐಎಡಿಬಿ
6. ಟಿ.ಆರ್. ಮಂಜುನಾಥ್: ಎಫ್​ಡಿಎ, ಕಂದಾಯ ಆಯುಕ್ತರ ಕಚೇರಿ (ಬೆಂ.ಉತ್ತರ)
7. ಕೆ. ನರಸಿಂಹಮೂರ್ತಿ: ಪೌರಾಯುಕ್ತ, ಕೆಎಂಎಎಸ್, ಹೆಬ್ಬಗೋಡಿ (ಆನೇಕಲ್)
8. ಆರ್. ಸಿದ್ದಪ್ಪ: ನಿರೀಕ್ಷಕ, ಪಶುಸಂಗೋಪನೆ ಇಲಾಖೆ, ರಾಮೇಶ್ವರ (ದೊಡ್ಡಬಳ್ಳಾಪುರ)
9. ಜಿ.ಎನ್.ಪ್ರಕಾಶ್: ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ (ಶಿವಮೊಗ್ಗ)
10. ನಾಗೇಂದ್ರ: ಅಧ್ಯಕ್ಷ, ಅಂತರಗಂಗೆ ಗ್ರಾಮ ಪಂಚಾಯಿತಿ(ಭದ್ರಾವತಿ)
11. ಬಲವಂತ್ ರಾಥೋಡ್: ಯೋಜನಾ ನಿರ್ದೇಶಕ, ಜಿಲ್ಲಾ ಪಂಚಾಯತ್ (ಯಾದಗಿರಿ)
12. ರಮೇಶ್ ಕುಮಾರ್: ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ (ಬೆಂಗಳೂರು)
Women’s Asia Cup T20: ಪಾಕಿಸ್ತಾನ ವಿರುದ್ಧ ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
