ಬೆಂಗಳೂರು:ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿದರೆ ಕರೊನಾ ದಾಳಿಗೆ ಈಡಾಗುವ ಸಂಭಾವ್ಯತೆ ಹೆಚ್ಚಾಗಿರುವುದು ಪೊಲೀಸರಿಗೆ. ಈಗಾಗಲೇ ಮುಂಬೈ ಮಹಾನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರು ಕೋವಿಡ್​​ಗೆ ತುತ್ತಾಗಿದ್ದಾರೆ. ಈ ನಿಟ್ಟಿನಲ್ಲಿ ಕರೊನಾ ವೈರಸ್ ಸೋಂಕನ್ನು ತಪ್ಪಿಸಲು ಪೊಲೀಸ್​​​ ಸಿಬ್ಬಂದಿಗೆ ಸಹಾಯ ಮಾಡುವ ಉದ್ದೇಶದಿಂದ ಬೆಂಗಳೂರು ಮಹಾನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಗೆ ಖಾಕಿ ಕೋವಿಡ್ ಓವರ್ ಕೋಟ್ ವಿನ್ಯಾಸಗೊಳಿಸಲಾಗಿದೆ.ಖಾಕಿ ಕೋವಿಡ್ ಓವರ್​​ ಕೋಟ್ ನ ವಿಶೇಷತೆಗಳೇನು?* ಇದು ಮೊಣಕಾಲು ಉದ್ದದ ಕೋಟ್ ಆಗಿದ್ದು, ಮುಖದ ಮೇಲೆ ಎಲಾಸ್ಟಿಕ್ ಬ್ಯಾಂಡ್ ಹೊಂದಿದೆ.* ಇದನ್ನು ಪುನಃ ತೊಳೆದು ಉಪಯೋಗಿಸಬಹುದು ಮತ್ತು ಬೇಸಿಗೆಯ ಬಿರು ಬಿಸಿಲಿನಲ್ಲೂ ಇದು ಧರಿಸಲು ಸೂಕ್ತವಾಗಿರುತ್ತದೆ.* ಅದರೊಂದಿಗೆ ಕೈಗವಸುಗಳು ಮತ್ತು ಮಾಸ್ಕ್​​​​ಗಳನ್ನು, ವೈರಸ್​​ ಅನ್ನು ಧರಿಸಬಹುದು.
ಇದನ್ನೂ ಓದಿ:ಗರ್ಭಿಣಿ ಆನೆ ಸಾವು : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೇಂದ್ರ ಭರವಸೆ
ಠಾಣಾಧಿಕಾರಿಗಳಿಗಾಗಿ (ಎಸ್​ಎಚ್​​ಒ) ಕೆಲಸ ಮಾಡುವ ಕಂಪಾರ್ಟ್​​​ಮೆಂಟ್: ವಿವಿಧ ಠಾಣೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ನಡುವೆ ಅಂತರವನ್ನು ಕಾಪಾಡಿಕೊಳ್ಳಲು ಸಹಾಯವಾಗುವಂಥ ಒಂದು ಕಂಪಾರ್ಟ್​​ಮೆಂಟ್ ಅನ್ನು ಕೂಡ ವಿನ್ಯಾಸಗೊಳಿಸಲಾಗಿದೆ.* ದಿನನಿತ್ಯದ ಕಾರ್ಯನಿರ್ವಹಿಸುವಲ್ಲಿ ಇದು ಪೊಲೀಸರಿಗೆ ಸಹಾಯಕವಾಗಲಿದೆ.* ಈ ಕಂಪಾರ್ಟ್​​​ಮೆಂಟ್​​ಗೆ ಆಡಿಯೊ ಮೈಕ್ ಮತ್ತು ಧ್ವನಿವರ್ಧಕವನ್ನು ಜೋಡಿಸುವ ಮೂಲಕ ಸಾರ್ವಜನಿಕರೊಂದಿಗೆ ಸುಲಭವಾಗಿ ಸಂವಹನ ಸಾಧಿಸಲು ಸಾಧ್ಯವಾಗುತ್ತದೆ..* ಕಾಗದ ಪತ್ರಗಳ ಕೊಡು-ಕೊಳ್ಳುವಿಕೆಗೆ ಸಹಾಯವಾಗುವಂತೆ ಇದರಲ್ಲಿ ಟ್ರೇ ಅನ್ನು ಸಹ ಅಳವಡಿಸಲಾಗಿದೆ.
ಕೇಂದ್ರ ರಕ್ಷಣಾ ಇಲಾಖೆ ಕಾರ್ಯದರ್ಶಿಗೆ ಕರೊನಾ ವೈರಸ್ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − ten =
Remember me
