| ಕೀರ್ತಿನಾರಾಯಣ ಸಿ. ಬೆಂಗಳೂರು
ಪೊಲೀಸ್ ಕಾನ್​ಸ್ಟೆಬಲ್​ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ಗಾವಣೆ ಬಯಸುವವರಿಗೆ ಈಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷ ಅವಧಿಗೆ ಹೆಚ್ಚಳ ಮಾಡುವ ಸಿದ್ಧತೆ ನಡೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್​ಸ್ಟೆಬಲ್​ಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬ ಸಮೇತ ಪ್ರತಿಭಟನೆಗಿಳಿಯುವ ಎಚ್ಚರಿಕೆ ಕೊಟ್ಟಿದ್ದಾರೆ.
ಮೊದಲಿಗೆ ಎರಡೂವರೆ ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಿದರೆ ಕಾನ್​ಸ್ಟೆಬಲ್​ಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ನಂತರ 3 ವರ್ಷ ಅವಧಿಗೆ ಏರಿಸಲಾಯಿತು. 2019ರಲ್ಲಿ 5 ವರ್ಷ ಸೇವಾವಧಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನಷ್ಟೇ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸುವುದಾಗಿ ಆದೇಶ ಹೊರಡಿಸಲಾಯಿತು. ಅದಾದ ಕೆಲವೇ ದಿನಗಳಿಗೆ ಪುನಃ 7 ವರ್ಷದ ಅವಧಿಗೆ ಏರಿಕೆ ಮಾಡಿ ಸರ್ಕಾರ ಆದೇಶಿಸಿತು.
ಪದೇಪದೆ ಅವಧಿ ಹೆಚ್ಚಳದಿಂದ ವರ್ಗಾವಣೆ ಭಾಗ್ಯ ಸಿಗದೆ ಪೊಲೀಸ್ ಕಾನ್​ಸ್ಟೆಬಲ್​ಗಳು ರೋಸಿದ್ದಾರೆ. ಪ್ರವೀಣ್ ಸೂದ್ ಡಿಜಿಪಿಯಾಗಿದ್ದಾಗ ಪೊಲೀಸರ ವರ್ಗಾವಣೆ ಅನುಕೂಲಕ್ಕಾಗಿಯೇ ಕೆಎಸ್​ಪಿ ಪೋರ್ಟಲ್ ಅಭಿವೃದ್ಧಿಪಡಿಸಿ, ಅನುಷ್ಠಾನಕ್ಕೆ ತರಲಾಗಿತ್ತು. ಪೋರ್ಟಲ್​ನಲ್ಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಎಂಬ ನಿಯಮವನ್ನು ಪೊಲೀಸ್ ಇಲಾಖೆಯೇ ಜಾರಿಗೆ ತರಲಾಗಿತ್ತು. ಆದರೆ, ಪೊರ್ಟಲ್ ನಿಯಮದ ಪ್ರಕಾರವೇ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷದಿಂದ ಕಾನ್​ಸ್ಟೆಬಲ್​ಗಳು ಕಾಯುತ್ತಿದ್ದಾರೆ. ಆದರೀಗ ವರ್ಗಾವಣೆ ಅವಧಿಯನ್ನು 10 ವರ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಡಿಜಿಪಿ ಕಚೇರಿಯಿಂದ ಗೃಹಸಚಿವರ ಕಚೇರಿಗೆ ಕಡತ ರವಾನೆಯಾಗಿದೆ. ಸರ್ಕಾರವೂ ನಿಯಮಕ್ಕೆ ತಿದ್ದುಪಡಿ ತಂದು ಏರಿಕೆ ಮಾಡಲು ನಿರ್ಧರಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗೃಹಸಚಿವರು ಕಾನ್​ಸ್ಟೆಬಲ್​ಗಳ ವರ್ಗಾವಣೆ ಹಾಗೂ ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಸದ್ಯ ಯಾವುದೇ ರೀತಿ ತಿದ್ದುಪಡಿ ಮಾಡದೆ ಈಗಾಗಲೇ ರೂಪಿಸಿರುವ ಕೆಎಸ್​ಪಿ ಪೋರ್ಟಲ್ ಪ್ರಕಾರವೇ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಕಾನ್​ಸ್ಟೆಬಲ್​ಗಳು ಒತ್ತಾಯಿಸಿದ್ದಾರೆ.
ಪರಸ್ಪರ ವರ್ಗವಾದ್ರೂ ಮಾಡಿ:ಪರಸ್ಪರ ವರ್ಗಾವಣೆಗೆ ಕೆಎಸ್​ಪಿ ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶ ಕಲ್ಪಿಸಿರುವುದಿಲ್ಲ. ಪರಸ್ಪರ ವರ್ಗಾವಣೆ ಬಯಸಿರುವ 30 ಸಿಬ್ಬಂದಿಗಳಿದ್ದು, ಅವರನ್ನಾದರೂ ವರ್ಗಾವಣೆಗೊಳಿಸಲಿ ಎಂಬ ಬೇಡಿಕೆ ಬಂದಿದೆ. ಪರಸ್ಪರ ವರ್ಗಾವಣೆಯಿಂದ ಎರಡು ಜಿಲ್ಲೆಗಳಲ್ಲೂ ರಿಕ್ತ ಸ್ಥಾನದ ಸಮಸ್ಯೆ ಆಗಲ್ಲ. ಸ್ವಂತ ಖರ್ಚಿನಲ್ಲಿ ವರ್ಗಾವಣೆಯಾಗುವುದರಿಂದ ಇಲಾಖೆಗೂ ಆರ್ಥಿಕ ನಷ್ಟವಿಲ್ಲ. ಸಿಬ್ಬಂದಿಗೆ ವಯಸ್ಸಾದ ತಂದೆ-ತಾಯಿ ಹಾಗೂ ಕುಟುಂಬ ವರ್ಗದವರಿದ್ದಾರೆ. ಪರಸ್ಪರ ವರ್ಗಾವಣೆ ಬಯಸಿರುವ ಎರಡೂ ಸಿಬ್ಬಂದಿ ಇಲಾಖೆಯ ನಿಯಮದಂತೆ 7 ವರ್ಷ ಸೇವೆ ಪೂರೈಸಿದವರನ್ನು ಪರಿಗಣಿಸುವುದರಿಂದ ಕಾಯಿದೆ ಉಲ್ಲಂಘನೆ ಸಮಸ್ಯೆ ಇರುವುದಿಲ್ಲ ಎಂದು ಮನವಿ ಮಾಡಿದ್ದಾರೆ.
.ಪೊಲೀಸರ ವರ್ಗಾವಣೆ ಅನುಕೂಲಕ್ಕಾಗಿಯೇ ಕೆಎಸ್​ಪಿ ಪೋರ್ಟಲ್ ಜಾರಿಯಾಗಿದೆ.
.7 ವರ್ಷ ಸೇವೆ ಪೂರೈಸಿದ ಸಾಮಾನ್ಯ ವರ್ಗ, 3 ವರ್ಷ ಪೂರೈಸಿದ ಮಾಜಿ ಸೈನಿಕ ಪೊಲೀಸ್ ಸಿಬ್ಬಂದಿಗೆ ಅವಕಾಶ
.2023 ಮಾ.3ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ. ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ
.ಸೇವಾವಧಿ ಪೂರ್ಣಗೊಂಡು ವರ್ಗಾವಣೆಯಾಗುತ್ತೇವೆ ಎನ್ನುತ್ತಿದ್ದಂತೆ ಅವಧಿ ಹೆಚ್ಚಳ
.ಪ್ರತಿಬಾರಿ ಇದೇ ರೀತಿ ಆಗುತ್ತಿದ್ದು, ಕುಟುಂಬದ ಜತೆ ವಾಸವಿರಲು ಅವಕಾಶವೇ ಕೊಡುತ್ತಿಲ್ಲ.
.ಪೋರ್ಟಲ್ ನಿಯಮ ಅಥವಾ ಸೇವಾಜೇಷ್ಠತೆ ಹೇಗಾದರೂ ಸರಿ ಮೊದಲು ವರ್ಗಾವಣೆ ಮಾಡಿ
.ಹಂತಹಂತವಾಗಿ ವರ್ಗಾವಣೆಗೊಳಿ ಸುವುದರಿಂದ ಸೇವೆಗೆ ಅಡ್ಡಿಯಾಗಲ್ಲ
.ಪತಿ-ಪತ್ನಿ, ಕಾನ್​ಸ್ಟೆಬಲ್​ಗಳ ಅಂತರ ಜಿಲ್ಲಾ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ
.ಸೇವಾಹಿರಿತನ ಆಧರಿಸಿ, ಮೊದಲಿಗೆ 10 ವರ್ಷ ಪೂರೈಸಿದವರನ್ನು ವರ್ಗಾವಣೆ ಮಾಡಲಾಗುತ್ತೆ
.ಸೇವಾಜೇಷ್ಠತೆ ಅನ್ವಯ ಪಟ್ಟಿ ಸಿದ್ಧಪಡಿಸಿ, ಅದರಲ್ಲಿ ಅರ್ಹ ಅಭ್ಯರ್ಥಿಗಳ ವರ್ಗಾವಣೆ
ತಮಿಳುನಾಡನ್ನು ನಿರ್ಲಕ್ಷಿಸಲಾಗಿದೆ ಎಂಬ ಸಿಎಂ ಎಂಕೆ ಸ್ಟಾಲಿನ್ ಆರೋಪ ಸತ್ಯಕ್ಕೆ ದೂರವಾದುದು: ಕೇಂದ್ರ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
