
ಬೆಂಗಳೂರು:ಕೆಐಎಡಿಬಿಯಲ್ಲಿ ಸಿ.ಎ ನಿವೇಶನಗಳನ್ನು ನಿಯಮಾವಳಿಗಳ ಮೂಲಕ ಪಾರದರ್ಶಕವಾಗಿಯೇ ಹಂಚಿಕೆ ಮಾಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎ (ನಾಗರಿಕ ಸೌಲಭ್ಯ) ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ ಎಂದು ದಾಖಲೆಗಳ ಸಹಿತ ವಿವರಣೆ ನೀಡಿದರು.ಸಿ.ಎ ನಿವೇಶನಗಳನ್ನು ಪ್ರಕಾರ ಹರಾಜು ಹಾಕುವ ಪದ್ದತಿಯಿಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲು ಅವಕಾಶ ಇದೆ. ಸಿ.ಎ ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ಪ್ರಕಟಣೆ ಕೊಡುವುದರ ಜತೆಗೆ ಇಲಾಖಾ ವೆಬ್ ಸೈಟ್‌ನಲ್ಲೂ ಪ್ರಕಟಿಸಲಾಗಿದೆ. ನಾನು ಬಂದ ಮೇಲೆ ಎಲ್ಲಾ ಮಾಹಿತಿಯ್ನನು ವೆಬ್ ಸೈಟ್‌ನಲ್ಲಿ ಹಾಕುವ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಮೊದಲು ಇರಲಿಲ್ಲ ಎಂದರು.ಸಿ.ಎ ನಿವೇಶನಗಳ ಹಂಚಿಕೆಯನ್ನು ಹಿಂದೆಲ್ಲ ಸರ್ಕಾರದಿಂದ ಅನುಮೋದನೆ ಪಡೆದು ನೇರವಾಗಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಮೊದಲು ಸಿ.ಇ.ಒ., ಇವರ ಅಧ್ಯಕ್ಷತೆಯಲ್ಲಿನ ಉಪಸಮಿತಿ ಅರ್ಹತೆಯನ್ನು ಪರಿಶೀಲಿಸಿ, ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸ್ಸು ಮಾಡಿದ ನಂತರ ಈ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ಹಂಚಿಕೆ ಮಾಡಲಾಗಿದೆ ಎಂದರು.ಈ ಸಮಿತಿಯಲ್ಲಿ ಅಭಿವೃದ್ಧಿ ಆಯುಕ್ತರು, ಇಲಾಖಾ ಪ್ರಧಾನ ಕಾರ್ಯದರ್ಶಿ, ಇತರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರು, ಕೈಗಾರಿಕಾ ಆಯುಕ್ತರು, ಸಿ.ಇ.ಒ., ಕೆಐಎಡಿಬಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ ಹಾಗೂ ಇತರೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದರು.377.69 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನಗಳನ್ನು (96.59 ಎಕರೆ) ಮಾತ್ರ ಹಂಚಿಕೆ (ಶೇ.25)ಮಾಡಲಾಗಿದೆ. ಉಳಿದ ನಿವೇಶನಗಳು ಹಂಚಿಕೆಗೆ ಬಾಕಿ ಇವೆ. ಒಂದೊಂದೇ ಅರ್ಜಿ ಬಂದ ಪ್ರಕರಣಗಳಲ್ಲಿ ಹಂಚಿಕೆ ಮಾಡಲು ಅವಕಾಶವಿದ್ದರೂ (ಇದು ಟೆಂಡರ್ ಪ್ರಕ್ರಿಯೆ ಅಲ್ಲ) ಇದನ್ನು ಪರಿಗಣಿಸದೆ ಹೊಸದಾಗಿ ನೋಟಿಫಿಕೇಷನ್ ಮಾಡಲಾಗುತ್ತಿದೆ. ಇದರಿಂದ ಅರ್ಹರಿಗೆ ಇನ್ನಷ್ಟೂ ಅವಕಾಶ ಲಭ್ಯವಾಗಲಿದೆ. 41 ಕಡೆ ಒಂದೊಂದೇ ಅರ್ಜಿ ಬಂದಿತ್ತು. ಅದನ್ನು ಮತ್ತೆ ಹೊಸದಾಗಿ ಕರೆದಿದ್ದೇವೆ. ಇದಕ್ಕಿಂತ ಇನ್ನೇನು ಪಾರದರ್ಶಕತೆ ಬೇಕು? ಎಂದು ಕೇಳಿದರು.ಇದೇ ಮೊದಲ ಬಾರಿಗೆ ಸಿ.ಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 24.10 ರಷ್ಟು ಮೀಸಲಿಡುವ ಐತಿಹಾಸಿಕ ತೀರ್ಮಾನ ನನ್ನ ಅವಧಿಯಲ್ಲಿ ಆಗಿದೆ ಎಂದು ಹೇಳಿದರು.2018ರ ಸರ್ಕಾರದ ತೀರ್ಮಾನದಂತೆ 1ಟ ಪಟ್ಟು ಹಂಚಿಕೆ ದರ ಇದ್ದಿದ್ದನ್ನು ದಿನಾಂಕ: 07.06.2021ರಂದು ಸರ್ಕಾರದಲ್ಲಿ ಟ್ಟಛಿಜ್ಝಿಜ್ಞಿಜ ಚ್ಝ್ಝಟಠಿಞಛ್ಞಿಠಿ ್ಟಠಿಛಿ ಗೆ ಹಂಚಿಕೆ ಮಾಡಲು ತೀರ್ಮಾನಿಸಿ ಅದರಂತೆ ಕೆಐಎಡಿಬಿ ಗೆ ಸೂಚನೆ ನೀಡಲಾಗಿದೆ. ಹಾಗಾಗಿ ನನ್ನ ಅವಧಿಯಲ್ಲಿ ಸಿಎ ನಿವೇಶನಗಳ ಹಂಚಿಕೆ ದರವನ್ನು ಕಡಿಮೆ ಮಾಡಿಲ್ಲ. ಬದಲಿಗೆ ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಲು ಕ್ರಮವಹಿಸಿದೆ ಎಂದರು.ಸಿಎ ನಿವೇಶನಗಳು ನಾಗರೀಕ ಸೌಲಭ್ಯದ ಉದ್ದೇಶಕ್ಕಾಗಿ ಮತ್ತು ಕೈಗಾರಿಕೆಗಳ ಪೂರಕ ಉದ್ಧೇಶಗಳಿಗೆ ಬಳಕೆಯಾಗುವುದರಿಂದ ಹೆಚ್ಚಿನ ದರ ವಿಧಿಸಲಾಗುತ್ತಿಲ್ಲ. ಅಲ್ಲದೇ ಕೆಐಎಡಿಬಿ ಯು ್ಞಟ ಟ್ಟಟ್ಛಜಿಠಿ ್ಞಟ ್ಝಟ ಸಂಸ್ಥೆಯಾಗಿರುತ್ತದೆ ಎಂದರು.ಬೆಂಗಳೂರು ಅಷ್ಟೆ ಅಲ್ಲ, ರಾಜ್ಯದ 21 ಜಿಲ್ಲೆಗಳಲ್ಲೂ ಇರುವ ಸಿಎ ನಿವೇಶನಗಳ ಹಂಚಿಕೆಗೆ ಅರ್ಜಿ ಅಹ್ವಾನಿಸಿ ಹಂಚಿಕೆ ಮಾಡಲಾಗಿದೆ. ಕೆಐಎಡಿಬಿ ನಿಯಮಾವಳಿಗಳ ನಿಯಮ 7 ರಲ್ಲಿ ಕೆಐಎಡಿಬಿ ನಿವೇಶನಗಳ ಹಂಚಿಕೆಗಾಗಿ ಪ್ರಚಾರಕ್ಕೆ ಪತ್ರಿಕಾ ಪ್ರಕಟಣೆ ನೀಡಬೇಕೆಂಬ ನಿಯಮವಿದ್ದು ಅದರಂತೆ ಮಾಡಲಾಗಿದೆ. ಹಾಗಾಗಿ ನಿಯಮ ಉಲ್ಲಂಘನೆಯಾಗಿಲ್ಲ ಎಂದರು.
ಈ ಹಿಂದೆಯೂ ದೂರು ನೀಡಿದ್ದರು…ರಾಜ್ಯಪಾಲರಿಗೆ ಈ ಹಿಂದೆಯೂ ದೂರು ನೀಡಿದ್ದ ವ್ಯಕ್ತಿಯೇ ಮತ್ತೆ ಅದೇ ದೂರನ್ನು ದಿನಾಂಕ ಬದಲು ಮಾಡಿ ನೀಡಿದ್ದಾರೆ. ಈ ಬಗ್ಗೆ ರಾಜ್ಯಪಾಲರು ನೋಟೀಸ್ ನೀಡಿದರೆ ಅದಕ್ಕೆ ವಿವರಣೆ ನೀಡಲು ಸಿದ್ದನಿದ್ದೇನೆ ಎಂದರು.ನಮ್ಮ ಪಕ್ಷದಲ್ಲಿ ಯಾರೂ ವಿರೋಧಿಗಳಿಲ್ಲ. ಈ ದೂರಿನ ಹಿಂದೆ ವಿರೋಧ ಪಕ್ಷದ ಕೈವಾಡ ಇದೆ ಎಂದು ನನಗನ್ನಿಸುವುದಿಲ್ಲ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
