ಬೆಂಗಳೂರು:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳೂ ಶತಾಯಗತಾಯ ಗೆಲ್ಲಲೇ ಬೇಕೆಂದು ಜಿದ್ದಾಜಿದ್ದಿಗೆ ಬಿದ್ದಂತೆ ಕಸರತ್ತು ನಡೆಸುತ್ತಿವೆ. ಮತಯಾಚನೆ, ಪ್ರಚಾರ ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವ ಶುರುವೂ ಶುರುವಾಗಿದೆ. ಪ್ರಚಾರಕ್ಕೆ ಚಿತ್ರನಟನ್ನೂ ಕರೆಸಿಕೊಳ್ಳಲು ತೆರೆ-ಮರೆಯಲ್ಲಿ ಈಗಾಗಲೇ ಕಸರತ್ತು ಶುರುವಾಗಿದೆ. ಪ್ರಭಾವಿ ನಟರನ್ನ ರಾಜಕೀಯಕ್ಕೆ ಕರೆತರುವ ಯತ್ನವೂ ನಡೆಯುತ್ತಲೇ ಇದೆ.
ಇದೀಗ ಕಿಚ್ಚ ಸುದೀಪ್​ರನ್ನ ರಾಜಕೀಯಕ್ಕೆ ಕಾಂಗ್ರೆಸ್​ ಆಹ್ವಾನಿಸುತ್ತಿದೆ. ಆ ಮೂಲಕ ಬಿಜೆಪಿಗೆ ಬಿಗ್​ ಶಾಕ್​ ಕೊಡಲು ಕಾಂಗ್ರೆಸ್​ ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಮೂಲಕ ಸುದೀಪ್​ರನ್ನು ಸೆಳೆಯೋಕೆ ಕಾಂಗ್ರೆಸ್​ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಐಕ್ಯತಾ ಸಮಾವೇಶದ ಬೆನ್ನಲ್ಲೇ ಎಸ್​ಟಿ ಮತಗಳನ್ನು ಹೇಗೆ ಸೆಳೆಯೋದು ಎಂದು ಕಾಂಗ್ರೆಸ್​ ಯೋಜನೆ ರೂಪಿಸಿದೆ. ಕಿಚ್ಚ ಸುದೀಪ್​ ಮೂಲಕ ಎಸ್​ಟಿ ಮತಗಳನ್ನ ಸೆಳೆಯುವ ತಂತ್ರ ಹೆಣೆದಿದೆ. ಅದಕ್ಕಾಗಿ ಮೋಹಕ ತಾರೆ ರಮ್ಯ ಅವರನ್ನ ಮುಂದಿಟ್ಟುಕೊಂಡು ಮಾತುಕತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೀಗ ರಾಜ್ಯ ರಾಜಕೀಯಕ್ಕೆ ಸುದೀಪ್​ ಬರ್ತಾರಾ? ಎಂಬ ಪ್ರಶ್ನೆಯನ್ನು ಜನರಲ್ಲಿ ಮೂಡಿದೆ. ಆದರೆ ಸುದೀಪ್​ ಅವರು ರಾಜಕೀಯಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಆದರೂ ಸುದೀಪ್​ ಅವರ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್​ ಕುಸಿತ: ಬೆಂಗಳೂರಲ್ಲಿ ತಾಯಿ-ಮಗು ದುರ್ಮರಣ

ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

ಕನಕಪುರದಲ್ಲಿ ಶಾಲಾ ಬಸ್​ಗೆ ಬಾಲಕಿ ಬಲಿ! ತರಗತಿ ಮುಗೀತು ಮನೆಗೆ ಹೋಗಿ ಅಮ್ಮನ ಮಡಿಲು ಸೇರಬೇಕು ಅನ್ನುವಷ್ಟರಲ್ಲಿ ಘೋರ ದುರಂತ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
