ಬೆಂಗಳೂರು:ಬಿಗ್​ಬಾಸ್​ ರಿಯಾಲಿಟಿ ಶೋ ಅತೀ ಹೆಚ್ಚು ಜನಮನ್ನಣೆ ಪಡೆದುಕೊಂಡಿರುವ ಕಾರ್ಯಕ್ರಮವಾಗಿದೆ. ಹಿಂದಿ, ಕನ್ನಡ, ತೆಲಗು, ತಮಿಳು, ಇಂಗ್ಲಿಷ್​, ಮಲಯಾಂ ಸೇರಿದಂತೆ ಅನೇಕ ಭಾಷೆಯಲ್ಲಿ ಬಿಗ್​ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಪ್ರತಿಯೊಂದು ಭಾಷೆಯಲ್ಲೂ ತನ್ನದೇ ಆಗಿರುವ ಜನಪ್ರಿಯ ಸ್ಟಾರ್​ ನಿರೂಪಕರು ಕಾರ್ಯಕ್ರಮವನ್ನು ಮುನ್ನೆಡೆಸುತ್ತಾರೆ.​​ ಸ್ಪರ್ಧಿಗಳು ಕಾರ್ಯಕ್ರಮದ ಕಂಟೆಂಟ್​ ಆಗಿದ್ದರೆ, ನಿರೂಪಕರು ಆ ಕಾರ್ಯಕ್ರಮದ ಮುಖ್ಯ ಆಧಾರ ಸ್ಥಂಬವಾಗಿರುತ್ತಾರೆ.
ಬಿಗ್​ಬಾಸ್​​ ಕನ್ನಡ ಪ್ರಾರಂಭವಾದ ದಿನದಿಂದಲೂ ನಟ ಸುದೀಪ್​ ಮುನ್ನಡೆಸಿಕೊಂಡು ಬಂದಿದ್ದಾರೆ. ಕಿಚ್ಚಿನ ಸಾರಥ್ಯ ಇದ್ರೆ ಬಿಗ್​ಬಾಸ್​ಗೆ ಕಳೆ. ಬಿಗ್​ಬಾಸ್​ ವೇದಿಯಲ್ಲಿ ಸುದೀಪ್​ ಅವರೆ ಎಷ್ಟೋ ಬಾರಿ ಹೇಳಿದ್ದಾರೆ ನಾನು ಇಲ್ಲಿ ದುಡ್ಡು ಕೊಡದೆ ಪಾಠವನ್ನು ಕಲಿತ ಎಷ್ಟೋ ಉದಾಹರಣಗಳಿವೆ ಎಂದಿದ್ದಾರೆ. ಸುದೀಪ್​ ಅವರಿಗಾಗಿಯೇ ಬಿಗ್​ಬಾಸ್​ ನೋಡುವ ಅಭಿಮಾನಿಗಳ ಬಳಗವೂ ಕೂಡಾ ಬಿಗ್​ಬಾಸ್​ ಕಾರ್ಯಕ್ರಮಕ್ಕೆ ಇದೆ.

ಸತತ 10ನೇ ಬಾರಿಗೆ ಕಿಚ್ಚ ಸುದೀಪ್‌ ಅವರೇ ಈ ಬಿಗ್‌ಬಾಸ್ ಶೋ ಹೋಸ್ಟ್‌ ಮಾಡಿದ್ದರು. ಇದೊಂದು ದಾಖಲೆ ಅಂದ್ರೆ ತಪ್ಪಾಗಲ್ಲ. ಬೇರೆ ಭಾಷೆಗಳಲ್ಲಿ ನಡೆದ ಬಿಗ್‌ಬಾಸ್‌ ರಿಯಾಲಿಟಿ ಶೋಗಳಿಗೆ ಅನೇಕ ಬಾರಿ ಹೋಸ್ಟ್‌ ಚೇಂಜ್‌ ಆಗಿದ್ದಾರೆ.

ಕಿಚ್ಚ ಇಲ್ಲದಿದ್ರೆ ಬಿಗ್‌‌ಬಾಸ್‌ ಇಲ್ಲ ಅನ್ನೊ ಮಟ್ಟಿಗೆ ಎಲ್ಲರಿಗೂ ಅನ್ನಿಸಿದೆ. ಬಿಗ್‌ಬಾಸ್‌ ಯಾರು ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ಕಿಚ್ಚ ಇಲ್ಲ ಅಂದ್ರೆ ಬಿಗ್‌‌ಬಾಸ್‌ ನೋಡದೇ ಇಲ್ಲ ಎನ್ನುವ ಅಭಿಮಾನಿಗಳು ತುಂಬಾ ಜನ ಇದ್ದಾರೆ. ಕನ್ನಡ ಬಿಗ್‌‌ಬಾಸ್‌ ಅಭಿಮಾನಿಗಳಿಗೆ ಒಂದು ಬ್ಯಾಡ್‌ ನ್ಯೂಸ್ ಇದೆ. ಅದೇನಪ್ಪಾ ಅಂದ್ರೆ ಕಿಚ್ಚ ಸುದೀಪ್‌ ಇನ್ಮುಂದಿನ ಸೀಸನ್‌ಗಳಲ್ಲಿ ಹೋಸ್ಟ್‌ ಆಗಿರುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

10 ಸೀಸನ್‌ ನಡೆಸಿಕೊಟ್ಟಿರೋ ಕಿಚ್ಚ, ಮುಂದಿನ ಸೀಸನ್‌ಗಳಲ್ಲಿ ಹೋಸ್ಟ್‌ ಆಗಿರೋದಿಲ್ಲ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.ಇದು ನಿಜವಾದ್ರೆ ನಿಜಕ್ಕೂ ಎಲ್ಲರಿಗೂ ಬೇಜಾರಾಗುತ್ತೆ. ಕಿಚ್ಚನಿಲ್ಲದೇ ಬಿಗ್‌ಬಾಸ್‌ ಶೋ ಊಹೆ ಕೂಡ ಮಾಡೋಕ್ಕಾಗಲ್ಲ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಜನ, ಅಥವಾ ಸುಳ್ಳಾ ಎನ್ನುವ ಯಾವುದೆ ಮಾಹಿತಿ ಇಲ್ಲ. ಆದರೆ ಹೀಗೊಂದು ಸುದ್ದಿ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಿಗ್‌ಬಾಸ್‌ ಸೀಸನ್ 10 ಕೂಡ ಮುಗಿದಿದೆ. ಕಾರ್ತಿಕ್‌ ಮಹೇಶ್‌ ಬಿಗ್‌ಬಾಸ್‌ ಸೀಸನ್‌ 10 ಕಪ್‌ ಗೆದ್ದಿದ್ದಾರೆ. ಫಸ್ಟ್‌‌ ರನ್ನರ್‌ ಆಪ್‌ ಆಗಿದ್ದಾರೆ ಡ್ರೋಣ್‌ ಪ್ರತಾಪ್‌. ನಿನ್ನೆ ಅದ್ಧೂರಿಯಾಗಿ ಈ ಫಿನಾಲೆ ಕಾರ್ಯಕ್ರಮ ನಡೆದಿದೆ. ನಿನ್ನೆ ಕಾರ್ಯಕ್ರಮದಲ್ಲೂ ಕಿಚ್ಚನಿಗೆ ಬಿಗ್‌ಬಾಸ್‌ ವಿಶೇಷ ಗೌರವ ಕೂಡ ಸಲ್ಲಿಸಲಾಗಿದೆ.
ಫ್ರೆಂಡ್ಸ್ ಸುಮಾರು ಜನರು ಇದ್ದಾರೆ, ಆದ್ರೆ..;ಗರ್ಲ್​ಫ್ರೆಂಡ್​ ವಿಚಾರದಲ್ಲಿ ಬಿಗ್​ಬಾಸ್​ ಕಾರ್ತಿಕ್ ಹೇಳಿದ್ದೇನು ಗೊತ್ತಾ?

“ಜನುಮದ ಜೋಡಿ” ಶಿಲ್ಪಾಗೆ ಕನ್ನಡವೇ ಬರ್ತಿರಲಿಲ್ಲ..ಆದ್ರು ನಟಿಸಿ ರಾಜ್ಯ ಪ್ರಶಸ್ತಿ ಪಡೆದ್ರು.. ಈಗ ಶಿಲ್ಪಾ ಎಲ್ಲಿದಾರೆ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
