ಚಾಮರಾಜನಗರ:ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಸಂಭವಿಸಿದ್ದ ವಿಷ ಪ್ರಸಾದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆಯಿಂದಾಗಿ ಸುಮಾರು 22 ತಿಂಗಳ ಕಾಲ ಬಂದ್​ ಆಗಿದ್ದ ದೇವಾಲಯದ ಬಾಗಲು ಅ.21 ತೆರೆಯಲಿದೆ.
ಅ.21ರಿಂದ 24ರವರೆಗೆ ವಿವಿಧ ಪೂಜೆಗಳು ಜರುಗಲಿವೆ. ಅಂದು ಮಧ್ಯಾಹ್ನ 12.30ರಿಂದ ಭಕ್ತರಿಗೆ ಮಾರಮ್ಮನ‌ ದರ್ಶನ ದೊರೆಯಲಿದೆ. ಆದರೆ ಪ್ರಸಾದ ಮತ್ತು ಪಂಕ್ತಿ ಸೇವೆಯನ್ನು ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಪ್ರಸಾದ ಮತ್ತು ಪಂಕ್ತಿ ಸೇವೆಗೆ ನಿರ್ಬಂಧ ಹೇರಿರುವುದು ಮಾತ್ರವಲ್ಲ, ಕರೊನಾ ಹಿನ್ನೆಲೆ ತಮಿಳುನಾಡಿನಿಂದ ಬರುವ ಭಕ್ತರ ಪ್ರವೇಶಕ್ಕೂ ಬ್ರೇಕ್​ ಹಾಕಲಾಗಿದೆ.
2018ರ ಡಿಸೆಂಬರ್ 14ರಂದು ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ಪ್ರಕರಣದಲ್ಲಿ 17 ಜನರು ಮೃತಪಟ್ಟಿದ್ದರು. 125ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇಗುಲವನ್ನು ವಶಕ್ಕೆ ಪಡೆದು, ಬಾಗಿಲನ್ನು ಬಂದ್ ಮಾಡಿ ಭಕ್ತರಿಗೆ ಪ್ರವೇಶ ನಿಷೇಧಿಸಿತ್ತು. ಇದೀಗ ಅ.21ರಂದು ದೇಗುಲದ ಬಾಗಿಲು ತೆರೆಯಲಾಗುತ್ತಿದೆ.
Web Exclusive: 21ರಿಂದ ಕಿಚ್ಚುಗುತ್ತಿ ಮಾರಮ್ಮನ ದರ್ಶನ; ವಿಷ ಪ್ರಸಾದ ಕೇಸ್​​ನಿಂದ ಬಂದ್ ಆಗಿದ್ದ ದೇಗುಲ

ಕನ್ನಡಿಗರ ಕೆಂಗಣ್ಣಿಗೆ ಗುರಿಯಾಯ್ತು ಸಿ.ಟಿ.ರವಿ ತಮಿಳು ಟ್ವೀಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − five =
Remember me
