ಹುಬ್ಬಳ್ಳಿ:ಇಲ್ಲಿನ ರಾಮನಗರದ ‘ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ನಟ ಸುದೀಪ್​ ಅಣತಿಯಂತೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿಯವರು ಜಾಗ ತಮ್ಮದೆಂದು ನ್ಯಾಯಾಲಯದ ಮೂಲಕ ಕಳೆದ ವಾರ ಶಾಲೆ ಖಾಲಿ ಮಾಡಿಸಿದ್ದರು. ಅಂದು ಶಾಲೆ ಖಾಲಿ ಮಾಡಿಸಲು ಬಂದ ಸೊಸೈಟಿ ಸಿಬ್ಬಂದಿ ಮತ್ತು ಪೊಲೀಸರ ಮುಂದೆ ‘ಶಾಲೆ ಖಾಲಿ ಮಾಡ್ಬೇಡಿ.. ನಾನು ಓದಿ ದೊಡ್ಡ ವ್ಯಕ್ತಿ ಆಗ್ಬೇಕು, ನನ್ನ ತಾಯಿಯನ್ನ ಸಾಕಬೇಕು… ನಮ್ ಶಾಲೆ ಖಾಲಿ ಮಾಡ್ಸಿದ್ರೆ ನಮ್​ ಟೀಚರ್​ ರೋಡಲ್ಲಿ ಕೂರ್ಸಿ ಪಾಠ ಮಾಡ್ಬೇಕಾ? ನಮ್ಗೆ ಯಾರ್ಗೂ ಶಾಲೆ ಬಿಟ್​ ಕೊಡಾಕ ಮನಸ್ಸಿಲ್ರಿ…’ ಎಂದು ಮಕ್ಕಳು ಗೋಳಾಡಿದ್ದರು. ಬಳಿಕ ಶಿಕ್ಷಕರು ರಸ್ತೆಬದಿ ಬಿಸಿಲಲ್ಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇದೆಲ್ಲವನ್ನೂ ‘ದಿಗ್ವಿಜಯ ನ್ಯೂಸ್​’ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ಸುದ್ದಿ ನೋಡಿದ ಅಭಿನಯ ಚಕ್ರವರ್ತಿ ಸುದೀಪ್​ ತಕ್ಷಣ ‘ದಿಗ್ವಿಜಯ’ ನ್ಯೂಸ್ ಚಾನಲ್​ನ ಪ್ರತಿನಿಧಿಗೆ ಕರೆ ಮಾಡಿ ಶಾಲೆಯ ಬಗ್ಗೆ ಮಾಹಿತಿ ಪಡೆದರು. ಈ ಶಾಲೆಯ ಮಕ್ಕಳಿಗೆ ನೆರವು ನೀಡುವ ಜತೆಗೆ ಬೇರೆ ಕಟ್ಟಡದ ವ್ಯವಸ್ಥೆ ಮಾಡುವುದಾಗಿ ಭರಸವೆ ನೀಡಿದ್ದರು.
ಕಿಚ್ಚನ ಭರವಸೆಯಂತೆ ಇಂದು ಬೆಳಗ್ಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಸಮಸ್ಯೆ ಆಲಿಸಿದರು. ಶಾಲೆ ಮುಖ್ಯ ಶಿಕ್ಷಕ ವೀರಪ್ಪ ಹಂಚಿನಮನಿ, ಸ್ಥಳೀಯರಾದ ಆನಂದ ಪಿಳ್ಳೈ, ಸುನೀಲ ಸಾಂಡ್ರಾ, ಶಾಲೆಯ ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ನ್ಯಾಯಾಲಯದ ಮೂಲಕ ಶಾಲೆ ಖಾಲಿ ಮಾಡಿಸಿದೆ. ಇದರಿಂದಾಗಿ ರಸ್ತೆಬದಿ ಬಿಸಿಲಲ್ಲಿ ಕುಳಿತು ವಿದ್ಯಾಭ್ಯಾಸ ಕಲಿಯುವಂತಾಗಿದೆ ಮಕ್ಕಳು ಕಣ್ಣೀರಿಟ್ಟರು. ಇದೇ ವೇಳೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳ ಮೊಬೈಲ್​​ಗೆ ವಿಡಿಯೋ ಕಾಲ್​ ಮೂಲಕ ಮಕ್ಕಳೊಂದಿಗೆ ಮಾತನಾಡಿದ ಸುದೀಪ್​, ನಾನಿದ್ದೇನೆ ಭಯಪಡಬೇಡಿ ಎಂದು ಧೈರ್ಯ ತುಂಬಿದರು. ಖುಷಿಯಾದ ಮಕ್ಕಳು ಮತ್ತು ಶಿಕ್ಷಕ ಧನ್ಯವಾದ ಸಲ್ಲಿಸಿದರು.
‘ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆ’ ಮಕ್ಕಳಲ್ಲಿ ಬೆಳಕು ತಂದಿದೆ ಕಿಚ್ಚನ ಆ ಒಂದು ಮಾತು!

ಸಿಡಿ ಕೇಸ್​: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − 3 =
Remember me
