ಬೆಂಗಳೂರು:ಸಂಸ್ಕೃತದ ಶ್ಲೋಕವನ್ನು ಸುಲಲಿತವಾಗಿ ಹೇಳಬಲ್ಲ. 2 ಅಂಕಿಯ ಗಣಿತದ ಲೆಕ್ಕಗಳನ್ನು ನಿಮಿಷಗಳಲ್ಲಿ ಬಿಡಿಸಬಲ್ಲ. ಅಷ್ಟೇ ಅಲ್ಲ, ಯಾವುದಾದರು ಕಾರಿನ ಬ್ರಾಂಡ್ ಲೋಗೋ ತೋರಿಸಿದರೆ, ಆ ಕಂಪನಿಯ ಹೆಸರಾಂತ ಮಾಡೆಲ್‌ಗಳನ್ನು ಸೆಕೆಂಡುಗಳಲ್ಲಿ ಹೆಸರಿಸಬಲ್ಲ ಪೋರನ ವಯಸ್ಸೆಷ್ಟು ಗೊತ್ತೇ? ಕೇವಲ 5 ವರ್ಷ. ಋತ್ವಿಕ್ ಪ್ರಸಾದ್ ಎಂಬ ಈ ಬಾಲಕ ಅಸಾಮಾನ್ಯ ಪ್ರತಿಭಾವಂತ.
ಋತ್ವಿಕ್, ಬೆಂಗಳೂರಿನ ಗೋಲ್ಡನ್ ಆರ್ಚ್ ಮಾಂಟೆಸರಿಯಲ್ಲಿ ಯುಕೆಜಿ ಓದುತ್ತಿದ್ದಾನೆ. ತಂದೆ ಗೋವಿಂದ ಪ್ರಸಾದ್ ಜರ್ಮನಿ ಮೂಲದ ಡಯ್ಶಿ ಬ್ಯಾಂಕ್‌ನ ಉದ್ಯೋಗಿಯಾಗಿದ್ದರೆ, ಅಮ್ಮ ವಾಣಿಶ್ರೀ ಗೃಹಿಣಿ.
ಶ್ಲೋಕ, ಭಜನೆ ಹಾಡುವುದರಲ್ಲಿ ನಿಪುಣಸಾಮಾನ್ಯವಾಗಿ 5 ವರ್ಷದ ಮಕ್ಕಳು ಆಗತಾನೆ ಪದಗಳನ್ನು ಕೂಡಿಸಿ ಹೇಳಲು ಕಲಿಯುತ್ತಿರುತ್ತಾರೆ. ಕೆಲವು ಮಕ್ಕಳು ತೊದಲುತ್ತಾ ಪದ ಉಚ್ಛರಿಸುವುದುಂಟು. ಆದರೆ, ಋತ್ವಿಕ್ ಸ್ಪಷ್ಟ ಹಾಗೂ ಸ್ಫುಟವಾಗಿ ಸಂಸ್ಕೃತದ ಶ್ಲೋಕ, ದೇವರನಾಮ ಹಾಡುತ್ತಾನೆ. ಅದರಲ್ಲಿಯೂ ಕಾಲಭೈರವ ಅಷ್ಟಕಂ, ಭಜಗೋವಿಂದಂ ಗೀತೆಯನ್ನು ನಿರರ್ಗಳವಾಗಿ ಹಾಡಬಲ್ಲ.
ಕ್ಷಣಗಳಲ್ಲಿ ಗಣಿತದ ಲೆಕ್ಕ ಬಿಡಿಸುವ ಛಾತಿಗಣಿತದ ಕೂಡುವ, ಕಳೆಯುವ ಲೆಕ್ಕವನ್ನು ಮಾಡಲು ಇತರ ಮಕ್ಕಳು ಪುಸ್ತಕ, ಪೆನ್ಸಿಲ್ ಹಿಡಿದು, ನಿಧಾನವಾಗಿ ಬಿಡಿಸಿ ಉತ್ತರ ಕಂಡು ಹಿಡಿಯುತ್ತಾರೆ. ಆದರೆ, ಇದ್ಯಾವುದರ ಸಹಾಯ ಪಡೆಯದ ಋತ್ವಿಕ್, ಮನಸ್ಸಿನಲ್ಲಿಯೇ ಲೆಕ್ಕಚಾರ ಮಾಡಿ, ಕ್ಷಣಾರ್ಧದಲ್ಲಿ 2 ಅಂಕಿಯ ಉತ್ತರ ನೀಡಬಲ್ಲ. ಅಷ್ಟೇ ಅಲ್ಲ, ಪೀರಿಯಾಡಿಕ್ ಟೇಬಲ್‌ನ 118 ಅಟಾಮಿಕ್ ನಂಬರ್‌ಗಳ ಬಗ್ಗೆಯೂ ಹೇಳಬಲ್ಲ.
ಯಾವ ತಾರೀಕಿನಂದು ಯಾವ ವಾರವಿತ್ತು?75 ವರ್ಷಗಳ ಅಂದರೆ 1950ರಿಂದ 2023ರವರೆಗಿನ ಕ್ಯಾಲೆಂಡರ್‌ನಲ್ಲಿ ಯಾವುದಾದರು ಒಂದು ದಿನಾಂಕವನ್ನು ಹೇಳಿದರೆ, ಅಂದು ಯಾವ ದಿನವಾಗಿತ್ತು? ಎಂದು ನಿಖರವಾಗಿ ಹೇಳುವ ಕಲೆ ಋತ್ವಿಕ್‌ಗೆ ಕರಗತವಾಗಿದೆ.
ಬ್ರ್ಯಾಂಡ್ ಲೋಗೋ ನೋಡಿ ಮಾಡೆಲ್ ಹೇಳಬಲ್ಲರುಯುವಕರಿಗೆ ಕಾರು, ದ್ವಿಚಕ್ರ ವಾಹನಗಳಲ್ಲಿ ಆಸಕ್ತಿಯಿರುವುದು ಸಹಜ. ಹಾಗೆಂದು ಎಲ್ಲ ಬ್ರ್ಯಾಂಡ್‌ಗಳ ಬಗ್ಗೆಯೂ ಜ್ಞಾನವುಳ್ಳವರಾಗಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ, ಬ್ರ್ಯಾಂಡ್ ಲೋಗೋ ನೋಡಿಯೇ, ಆ ಬ್ರ್ಯಾಂಡ್‌ನ ಜನಪ್ರಿಯ ಮಾಡೆಲ್‌ಗಳನ್ನು ಋತ್ವಿಕ್ ಹೆಸರಿಸುತ್ತಾನೆ.
ಎಲೆಕ್ಟ್ರಾನಿಕ್ ಉಪಕರಣಗಳೊಟ್ಟಿಗೆ ಆಟಎಲೆಕ್ಟ್ರಾನಿಕ್ ಉಪಕರಣಗಳ ಜ್ಞಾನವನ್ನು ಹೊಂದಿರುವ ಋತ್ವಿಕ್, ಯಾವುದಾದರೂ ಉಪಕರಣ ಕೈಯಲ್ಲಿ ಹಿಡಿದರೆ, ಅದಕ್ಕೆ ಯಾವ ಪಿನ್ನಿನ ಕೇಬಲ್ ಸೂಕ್ತ ಎಂಬುದನ್ನು ಕರಾರುವಕ್ಕಾಗಿ ಹೇಳಬಲ್ಲ.
ಹೊಸತನ್ನು ಕಲಿಯುವ ಉತ್ಸಾಹಿಬಾಲ್ಯವೆಂದರೆ ತಂದೆ-ತಾಯಿ ಹೇಳಿ ಕೊಟ್ಟಿದ್ದನ್ನು ಕಲಿಯುತ್ತಾ, ಸಮಾನ ವಯಸ್ಕರೊಟ್ಟಿಗೆ ಆಡುತ್ತಾ ಬೆಳೆಯುವ ಸಮಯ. ಆದರೆ, ಋತ್ವಿಕ್ ಎಲ್ಲರಿಗಿಂತ ಭಿನ್ನ ಮನಸ್ಥಿತಿಯ ಹುಡುಗ. ಪ್ರತಿದಿನ ಹೊಸತನ್ನು ಕಲಿಯುವ ಉತ್ಸಾಹವಿದ್ದು, ಯೂಟ್ಯೂಬ್ ಬಳಸಿಕೊಂಡು ತನಗಿಷ್ಟದ ದೇವರನಾಮ ಕಲಿಯುವುದು, ಅದರಲ್ಲಿ ಬರುವ ಲಿರಿಕ್ಸ್‌ಗಳನ್ನು ಪುಸ್ತಕದಲ್ಲಿ ಬರೆಯುವ ಅಭ್ಯಾಸ ಹೊಂದಿದ್ದಾನೆ.
ಪ್ರತಿನಿತ್ಯ ಹೊಸದು ಏನ್ನನಾದರು ಕಲಿಯಬೇಕೆಂಬ ಉತ್ಸಾಹ ಋತ್ವಿಕ್ ನಲ್ಲಿದೆ. ಇದರಿಂದ ಪೋಷಕರಾಗಿ ಆತನಿಗೆ ಏನನ್ನು ಕಲಿಸಬಹುದು ಎಂದು ಮೊದಲು ನಾವು ತಿಳಿಯಬೇಕಿರುವುದು, ನಮಗೆ ಮನೆ ಪಾಠದಂತಾಗಿದೆ.ಗೋವಿಂದ ಪ್ರಸಾದ್, ಋತ್ವಿಕ್ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 4 =
Remember me
