ನವದೆಹಲಿ:ದಯಾಮರಣ ಕೋರಿದ್ದ ಮಗನಿಗೆ ಮರುಜನ್ಮ ನೀಡುವಲ್ಲಿ ಯಶಸ್ವಿಯಾಗಿರುವ ಚೆನ್ನೈನ ರಾಜೀವ್‌ಗಾಂಧಿ ಸರ್ಕಾರಿ ಆಸ್ಪತ್ರೆ ವೈದ್ಯರು ತಾಯಿ ಮಡಲಿಗೆ ಮಗನನ್ನು ಮರಳಿಸಿದ ಭಾವನಾತ್ಮಕ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಶರವಣನ್ ಹಾಗೂ ಸತ್ಯಜ್ಯೋತಿ ದಂಪತಿ ಎರಡನೇ ಪುತ್ರ 12 ವರ್ಷದ ಸೂರ್ಯಕುಮಾರ್ ಮನೆಯಲ್ಲಿನ ಸ್ಯಾನಿಟೈಸರ್ ಬಾಟಲಿಯೊಂದಿಗೆ ಆಟವಾಡುವಾಗ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿತ್ತು. ಇದರಲ್ಲಿ ಬಾಲಕನ ಹೊಟ್ಟೆ ಹಾಗೂ ಕೈಗಳಿಗೆ ತೀವ್ರ ಸುಟ್ಟಗಾಯಗಳಾಗಿದ್ದವು. ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಘಟನೆ ಬಳಿಕ ಬಾಲಕನಿಗೆ ಮೂರ್ಛೆ ರೋಗ, ಕಿಡ್ನಿ ವೈಫಲ್ಯ ಸೇರಿ ಬಹುಅಂಗಾಂಗ ವೈಲ್ಯದ ಕಾಯಿಲೆಗಳಿಗ ತುತ್ತಾಗಿದ್ದ. ಬಡತನದ ಬೇಗೆಯಲ್ಲಿದ್ದ ದಂಪತಿಗ ಮಗನ ಅವಸ್ಥೆ ನೋಡಲಾಗಲಿಲ್ಲ, ತಾಯಿ ಸತ್ಯಜ್ಯೋತಿ ತನ್ನ ಮಗನಿಗೆ ದಯಾಮರಣ ದಯಪಾಲಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದರು. ಸಚಿವರ ಅಣತಿಯಂತೆ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕಿಸಿಕೊಡಲಾಯಿತು. ಸತತ 1 ವರ್ಷ ಚಿಕಿತ್ಸೆ ಪಡೆದ ಬಾಲಕ ಚೇತರಿಸಿಕೊಂಡಿದ್ದು, ಗುರುವಾರ ಆರೋಗ್ಯ ಸಚಿವ ಸುಬ್ರಮಣಿಯನ್ ಬಾಲಕನನ್ನು ಬೇಟಿಯಾಗಿ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಿದ್ದು ಬಾಲಕನ ಹೆಚ್ಚುವರಿ ಸುಟ್ಟ ಗಾಯದ ಗುರುತಗಳನ್ನು ತೆಗೆಯಲಾಗಿದೆ, ಅನೇಕ ಶಸ ಚಿಕಿತ್ಸೆಗಳ ಮೂಲಕ ಬಾಲಕ ಶೇ.90 ಚೇತರಿಸಿಕೊಂಡಿದ್ದಾನೆ.
ಬಾಲಕನಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಥೆರನಿರಾಜನ್, ಡಾ.ಶ್ರೀದೇವಿ, ಶ್ರೀಧರ್, ಮಹದೇವನ್ ಮತ್ತಿತರರನ್ನು ಸಚಿವರು ಅಭಿನಂದಿಸಿದ್ದಾರೆ.
ಸಚಿವ ಸುಬ್ರಮಣಿಯನ್ ಅವರು ನಮ್ಮ ಕೈಯಿಂದ ನಯಾ ಪೈಸೆ ಖರ್ಚು ಮಾಡಿಸದೆ ನನ್ನ ಮಗನ ಚಿಕಿತ್ಸೆಗೆ ನೆರವಾಗಿದ್ದಾರೆ, ಸಚಿವರ ಸಹಕಾರ ಹಾಗೂ ವೈದ್ಯರ ಸೇವೆ ನಾವು ಕೃತಜ್ಞರಾಗಿದ್ದೇವೆ ಎಂದು ಬಾಲಕನ ತಂದೆ ಶರವಣನ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 4 =
Remember me
