ಬೆಂಗಳೂರು:ತಂದೆ-ಮಗನ ಗ್ಯಾಂಗ್​ವೊಂದು ಬೆಂಗಳೂರಲ್ಲಿ ಯುವಕನೊಬ್ಬನನ್ನು ಸಿನಿಮಾ ಸ್ಟೈಲ್​ನಲ್ಲಿ ಅಪಹರಿಸಿ, ಚಿಕ್ಕಬಳ್ಳಾಪುರದಲ್ಲಿ ಆರೇಳು ದಿನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ, ಶವವನ್ನು ಚಾರ್ಮಾಡಿಘಾಟ್​ನಲ್ಲಿ ಎಸೆದು ವಿಕೃತಿ ಮೆರೆದಿದೆ. ವಿಪರ್ಯಾಸ ಅಂದ್ರೆ ಯುವಕ ಸತ್ತು 9 ತಿಂಗಳಾದರೂ ಪಾಲಕರಿಗೆ ಮಗ ಸಾವಿನ ಸುದ್ದಿ ತಿಳಿದಿಲ್ಲ. ಮಗ ದುಡಿಯಲು ಹೋಗಿದ್ದಾನೆ, ಇನ್ನೇನು ಮನೆಗೆ ಬರುತ್ತಾನೆ ಎಂದೇ ಭಾವಿಸಿದ್ದರು. ಇತ್ತೀಚಿಗೆ ಎಸಿಪಿ ಕಚೇರಿಗೆ ಬಂದ ಪತ್ರ ಹಾಗೂ ಪೆನ್​ಡ್ರೈವ್​ ಕೊಟ್ಟ ಸುಳಿವಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದಾರೆ. ಕೊಲೆ ನಡೆದು 9 ತಿಂಗಳ ನಂತರ ಆರೋಪಿಗಳು ಸಿಕ್ಕಿಬಿದ್ದದ್ದೇ ರೋಚಕ.
ಕೋಣನಕುಂಟೆ ನಿವಾಸಿ ಎಚ್​.ಶರತ್​ ಕೊಲೆಯಾದ ಯುವಕ. ಕೊಲೆ ಆರೋಪಿಗಳಾದ ಚಿಕ್ಕಬಳ್ಳಾಪುರದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಲಪತಿ ಅಗಲಗುರ್ಕಿ ಅಲಿಯಾಸ್​ ವೆಂಕಟಾಚಲಪತಿ, ಈತನ ಮಗ ಎ.ವಿ.ಶರತ್​ ಕುಮರ್​ ಹಾಗೂ ಈತನ ಸ್ನೇಹಿತರಾದ ಕೆ.ಧನುಷ್​, ಶ್ರೀಧರ್​ ಮತ್ತು ಯಲಹಂಕದ ಎಂ.ಪಿ.ಮಂಜುನಾಥ್​ ಅವರನ್ನ ಕಬ್ಬನ್​ಪಾರ್ಕ್​ ಠಾಣೆ ಪೊಲೀಸರು ಪೊಲೀಸರು ಬಂಧಿಸಿದ್ದಾರೆ.
ಅರೆಬೆತ್ತಲೆಗೊಳಿಸಿ ಚಿತ್ರಹಿಂಸೆ:ಕೊಲೆಯಾದ ಶರತ್​, ಸರ್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ ಕಾರುಗಳನ್ನು ಕೊಡಿಸುವುದಾಗಿ ನಂಬಿಸಿ ಚಿಕ್ಕಬಳ್ಳಾಪುರ ಮತ್ತು ಯಲಹಂಕ ನಿವಾಸಿಗಳಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದ. ಆದರೆ, ಕಾರನ್ನೂ ಕೊಡಿಸದೆ ವಾಪಸ್​ ಹಣವನ್ನೂ ಕೊಡದೆ ವಂಚಿಸಿದ್ದ. ಈ ಹಣ ವಸೂಲಿ ಮಾಡಿಕೊಡುವಂತೆ 2022ರ ಮಾರ್ಚ್​ನಲ್ಲಿ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಲಪತಿ ಅಗಲಗುರ್ಕಿ ಅಲಿಯಾಸ್​ ವೆಂಕಟಾಚಲಪತಿಗೆ ಸಂತ್ರಸ್ತರು ಹೇಳಿದ್ದರು. ಆಗ ಹಣ ವಸೂಲಿ ಮಾಡುವಂತೆ ತನ್ನ ಮಗ ಶರತ್​ಕುಮಾರ್​ಗೆ ಚಲಪತಿ ಸೂಚಿಸಿದ್ದ. ಶರತ್​ ಕುಮಾರ್​ ತನ್ನ ಸ್ನೇಹಿತರು ಮತ್ತು ಸಾಲಕೊಟ್ಟ ಇತರರನ್ನು ಸೇರಿಸಿಕೊಂಡು ಸಂಚು ರೂಪಿಸಿ ಶರತ್​ನನ್ನು ಬನಶಂಕರಿ ಬಳಿಯಿಂದ ಅಪಹರಿಸಿದ್ದ. ಗೌರಿಬಿದನೂರಿನಲ್ಲಿರುವ ತನ್ನ ತೋಟದ ಮನೆಯಲ್ಲಿ ಹಾಗೂ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಸಂಕೇತ್​ ವಾಟದಹೊಸಹಳ್ಳಿಯಲ್ಲಿರುವ ಮಾವಿನ ತೋಟದ ಮನೆಯಲ್ಲಿ 6-7 ದಿನ ಅಕ್ರಮ ಬಂಧನದಲ್ಲಿರಿಸಿದ್ದರು. ಅರೆಬೆತ್ತಲೆಗೊಳಿಸಿ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿ ಬಳಿಕ ದೊಣ್ಣೆಯಿಂದ ಮತ್ತು ಹಗ್ಗದಿಂದ ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿ ಅಮಾನುಷವಾಗಿ ಹತ್ಯೆ ಮಾಡಿದ್ದರು.
ಮೃತನ ಮೊಬೈಲ್​ನಿಂದಲೇ ಪಾಲಕರಿಗೆ ಸಂದೇಶ:ಕೊಲೆ ಮಾಡಿದ ಬಳಿಕ ಶವವನ್ನು ಕಾರಿನಲ್ಲಿಟ್ಟುಕೊಂಡು ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್​ಗೆ ಹೋಗಿ ಅಲ್ಲಿ ಎಸೆದು ಬಂದಿದ್ದರು. ಕೊಲೆಯಾಗಿ 9 ತಿಂಗಳು ಕಳೆದರೂ ವಿಷಯ ಯಾರಿಗೂ ಗೊತ್ತಿರಲಿಲ್ಲ. ಮೃತನ ಮೊಬೈಲ್​ನಿಂದಲೇ ಪಾಲಕರ ಮೊಬೈಲ್​ಗೆ ಸಂದೇಶ ಕಳುಹಿಸಿ ಪೊಲೀಸರ ದಾರಿ ತಪ್ಪಿಸಿದ್ದರು. “ನಾನು ದುಡಿಯಲು ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ” ಎಂದು ಸಂದೇಶ ಕಳುಹಿಸಿದ್ದರು. ಬಳಿಕ ಮೊಬೈಲ್​ ಅನ್ನು ಹೊರರಾಜ್ಯಕ್ಕೆ ತೆರಳುತ್ತಿದ್ದ ಲಾರಿಯೊಂದರ ಮೇಲೆ ಎಸೆದಿದ್ದರು. ಲಾರಿ ಮೈಸೂರು ಮಾರ್ಗವಾಗಿ ಹೊರ ರಾಜ್ಯಕ್ಕೆ ಹೋಗಿತ್ತು. ಮೊಬೈಲ್​ ಸ್ವಿಚ್ಡ್​ ಆಫ್​ ಆಗಿದ್ದರಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಶರತ್​ನ ಪಾಲಕರು, ತನ್ನ ಮಗ ದುಡಿಯಲು ಹೊರರಾಜ್ಯಕ್ಕೆ ಹೋಗಿದ್ದಾನೆ ಎಂದೇ ನಂಬಿ ಸುಮ್ಮನಾಗಿದ್ದರು.
ನಾಪತ್ತೆ ಕೇಸ್​ ದಾಖಲು:ಹಲವು ತಿಂಗಳಾದರೂ ಶರತ್​ ಮನೆಗೆ ವಾಪಸ್​ ಬಾರದಿದ್ದರಿಂದ ಅನುಮಾನಗೊಂಡ ಪಾಲಕರು, ಬನಶಂಕರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರಿಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆಯದ ಹಿನ್ನೆಲೆಯಲ್ಲಿ ತನಿಖೆ ಪ್ರಗತಿ ಕಂಡಿರಲಿಲ್ಲ. ಪಾಲಕರ ಮೊಬೈಲ್​ಗೆ ತಾನು ಹೊರರಾಜ್ಯಕ್ಕೆ ಹೋಗುತ್ತಿರುವುದಾಗಿ ಸಂದೇಶ ಕಳುಹಿಸಿದ್ದರಿಂದ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ.
ರಹಸ್ಯ ಬಯಲಿಗೆಳೆದ ಪೆನ್​ಡ್ರೈವ್​!:ಅನಾಮಧೇಯ ವ್ಯಕ್ತಿಯಿಂದ ಕೇಂದ್ರ ವಿಭಾಗದ ಎಸಿಪಿ ಅವರಿಗೆ ಒಂದು ಪತ್ರ ಮತ್ತು ಅದರೊಂದಿಗೆ ಪೆನ್​ಡ್ರೈವ್​ ಬಂದಿತ್ತು. ಪೆನ್​ಡ್ರೈವ್​ ತೆರೆದು ನೋಡಿದಾಗ ಅದರಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ದೃಶ್ಯ ಪೊಲೀಸರಿಗೆ ಕಂಡಿತ್ತು. ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಲ್ಲೆ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೆನ್​ಡ್ರೈವ್​ ದೃಶ್ಯಗಳನ್ನು ಆಧರಿಸಿ ಎ.ವಿ.ಶರತ್​ ಕುಮಾರ್​ ಮತ್ತು ಸ್ನೇಹಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.
ಬೆಚ್ಚೀಬಿಳಿಸುವ ವಿಡಿಯೋಗಳು:ಶರತ್​ನನ್ನು ಅಪಹರಿಸಿರುವ ಆರೋಪಿಗಳು ಆತನಿಗೆ ಚಿತ್ರಹಿಂಸೆ ಕೊಡುವುದನ್ನು ವಿಡಿಯೋ ಮಾಡಲಾಗಿದೆ. ಸಿನಿಮಾಗಳಲ್ಲಿ ತೋರಿಸುವಂತೆ ಅರೆಬೆತ್ತಲೆಗೊಳಿಸಿ, ಕೈಗಳನ್ನು ಹಿಂದಕ್ಕೆ ಕಟ್ಟಿ, ಕಾಲುಗಳನ್ನೂ ಕಟ್ಟಿ ಹಗ್ಗದಿಂದ ಹೊಡೆಯಲಾಗಿದೆ. ಅಲ್ಲದೆ ಮರದ ಕೊಂಬೆಗೆ ಕೈ ಮತ್ತು ಕಾಲುಗಳನ್ನು ಕಟ್ಟಿ ಜೋತು ಬಿಡಲಾಗಿದೆ. ಗೋಗರೆದರೂ ಬಿಡದೆ ಮನಬಂದಂತೆ ಥಳಿಸುತ್ತಿರುವ ದೃಶ್ಯಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದರೆ, ವಿಡಿಯೋವನ್ನು ಆರೋಪಿಗಳೇ ಮಾಡಿದರೆ ಅಥವಾ ಬೇರೆಯವರು ಮಾಡಿದರೆ ಎಂಬ ಮಾಹಿತಿ ಕೊಟ್ಟಿಲ್ಲ.
ಮೃತ ಶರತ್​ ಎಸ್ಸಿ ಜನಾಂಗಕ್ಕೆ ಸೇರಿದವನಾಗಿದ್ದು, ಈ ಸಂಬಂಧ ಎಸ್ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಈ ಕೃತ್ಯದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆ ಮತ್ತು ಶವದ ಪತ್ತೆ ಕಾರ್ಯ ಮುಂದುವರಿದಿದೆ.| ಆರ್​.ಶ್ರೀನಿವಾಸ್​ಗೌಡಕೇಂದ್ರ ವಿಭಾಗದ ಡಿಸಿಪಿ
ಟಾಪ್​ಲೆಸ್​ ಆಗಿ ಬಂದ ಉರ್ಫಿ! ತಿಂಡಿ ಪ್ಲೇಟ್​-ಜ್ಯೂಸ್​ ಗ್ಲಾಸ್​ ಹಿಡಿದು ಮೈಮಾಟ ಪ್ರದರ್ಶಿಸುತ್ತಾ ಬ್ರೇಕ್​ಫಾಸ್ಟ್​ ಎಂದ ನಟಿ… ವಿಡಿಯೋ ವೈರಲ್​

ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

ಶಿರಡಿ ಸಾಯಿಬಾಬಾಗೆ ವಜ್ರ ಖಚಿತ ಚಿನ್ನದ ಕಿರೀಟ ಅರ್ಪಿಸಿದ ಇಂಗ್ಲೆಂಡ್​ ಮೂಲದ ಭಕ್ತ!

ಗೋವಾಕ್ಕೆ ಹೋಗಿ ಮೋಜು-ಮಸ್ತಿ ಮಾಡೋಣ… ಪ್ರೇಯಸಿಯ ಆಸೆ ಈಡೇರಿಸಲು ಅಣ್ಣನ ಮನೆಯಲ್ಲಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ತಮ್ಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
