ಬೆಂಗಳೂರು:ತನ್ನ ತಾಯಿ, ತಮ್ಮ ಹಾಗೂ ಅತ್ತೆಯನ್ನು ಶಾಸಕರು ಅಪಹರಣ ಮಾಡಿದ್ದಾರೆ ಎಂದು ಪುತ್ರ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್​ ಅವರಿಗೆ ದೂರು ನೀಡಿದ್ದು, ನಮ್ಮ ಕುಟುಂಬದವರ ಜೀವಕ್ಕೆ ಅಪಾಯವಾದರೆ ಅದಕ್ಕೆ ಶಾಸಕರೇ ನೇರ ಹೊಣೆ ಎಂದೂ ಆರೋಪಿಸಿದ್ದಾರೆ. ಅಲ್ಲದೆ ತಾಯಿ, ತಮ್ಮ, ಅತ್ತೆಯನ್ನು ಪತ್ತೆ ಮಾಡಿ ರಕ್ಷಿಸಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.
ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಅಲ್ಲಿನ ನಗರಸಭಾ ಸದಸ್ಯೆ ಶೈನಾಜ್ ಬೇಗಂ ಅವರ ಪುತ್ರ ಎಂ.ಡಿ. ಅಲಿ ಜೆ.ಎಚ್. ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಶಾಸಕರು ನನ್ನ ತಾಯಿ, ತಮ್ಮ, ಅತ್ತೆಯನ್ನು ಅಪಹರಿಸಿ ಬಂಧನದಲ್ಲಿ ಇರಿಸಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ.
ನನ್ನ ತಾಯಿ ಶೈನಾಜ್ ಬೇಗಂ ರಾಯಚೂರಿನ ವಾರ್ಡ್ ಸಂಖ್ಯೆ 26ರ ಚುನಾಯಿತ ನಗರಸಭೆ ಸದಸ್ಯರಾಗಿದ್ದು, ಮಧುಮೇಹ ಹೆಚ್ಚಾದ್ದರಿಂದ ಮಾ. 27ರಂದು ಬೆಂಗಳೂರಿನ ಕನ್ನಿಂಗ್​ಹ್ಯಾಂ ರಸ್ತೆಯ ಪೊಲೀಸ್ ಆಯುಕ್ತರ ಕಚೇರಿ ಎದುರು ಇರುವ ಸ್ಪರ್ಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲದೆ ಅವರನ್ನು ನೋಡಿಕೊಳ್ಳಲು ನನ್ನ ತಮ್ಮ ಮೊಹಮ್ಮದ್ ಆಲಂ ಮತ್ತು ಅತ್ತೆ ಖಾಜಾ. ಬಿ. ಜೊತೆಗಿದ್ದರು.
ಇದನ್ನೂ ಓದಿ:ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ
ಇಂದು ಬೆಳಗ್ಗೆ ಐದಕ್ಕೆ ನನ್ನ ತಾಯಿಯ ಮೊಬೈಲ್​ಫೋನ್​ಗೆ ಕರೆ ಮಾಡಿದ್ದಾಗ ಸ್ವಿಚ್ಡ್​ ಆಫ್ ಆಗಿರುವುದಾಗಿ ಧ್ವನಿ ಸಂದೇಶ ಬಂದಿತ್ತು. ನಂತರ ನಾನು ಹೊಸಪೇಟೆಯಿಂದ ಬೆಂಗಳೂರಿಗೆ ಬಂದು ಸ್ಪರ್ಶ್​ ಆಸ್ಪತ್ರೆಗೆ ತಲುಪಿ ವಿಚಾರಿಸಿದಾಗ ಬೆಳಗ್ಗೆ ಬಿಳಿ ಬಣ್ಣದ ಇನ್ನೋವಾದಲ್ಲಿ ಯಾರೋ ಬಂದು ಕರೆದುಕೊಂಡು ಹೋಗಿದ್ದಾರೆ ಎಂದರು. ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ತೆಗೆಸಿ ನೋಡಿದಾಗ ಕೆಎ-36-ಎನ್-8100 ನೋಂದಣಿ ಇರುವ ಬಿಳಿ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು ಕಾಣಿಸಿತು. ವಾಹನ ಸಂಖ್ಯೆ ಪರಿಶೀಲಿಸಿದಾಗ ಅದು ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್​ಗೆ ಸೇರಿದ್ದು ಎಂದು ತಿಳಿಯಿತು. ನಾವು ಈ ವಿಚಾರ ತಿಳಿದಾಗಿನಿಂದ ಶಾಸಕರನ್ನು, ಅವರ ಬೆಂಬಲಿಗರನ್ನು ಸಂಪರ್ಕಿಸಿ ನನ್ನ ತಾಯಿ, ತಮ್ಮ ಹಾಗೂ ಅತ್ತೆ ಅವರನ್ನು ಕಳುಹಿಸಿ ಕೊಡಲು ಮನವಿ ಮಾಡಲು ಪ್ರಯತ್ನಿಸಿದರೂ ಯಾರೂ ನಮಗೆ ಸ್ಪಂದಿಸಿಲ್ಲ ಎಂದು ಅಲಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಎಂಗೆ ಅವಾಚ್ಯವಾಗಿ ನಿಂದಿಸಿದ್ದ ಶಾಬಾಜ್‌ ಖಾನ್ ಕೊನೆಗೂ ಪೊಲೀಸ್ ವಶಕ್ಕೆ..
ನಾಳೆಗೆ ನಿಗದಿಯಾಗಿರುವ ನಗರಸಭಾ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ನನ್ನ ತಾಯಿ ಮತ ಚಲಾಯಿಸದೆ ಗೈರು ಹಾಜರಾಗುವಂತೆ ಮಾಡುವ ದುರುದ್ದೇಶದಿಂದ ಆಸ್ಪತ್ರೆಯಿಂದ ಅವರನ್ನು ಅಪಹರಣ ಮಾಡಿ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದಾರೆ. ನನ್ನ ತಾಯಿ ಮತ್ತು ನಮ್ಮ ಕುಟುಂಬದವರ ಜೀವಕ್ಕೆ ಅಪಾಯವಾದರೆ ಅದಕ್ಕೆ ಶಾಸಕ ಶಿವರಾಜ ಪಾಟೀಲ್ ಅವರೇ ನೇರ ಹೊಣೆ. ಅಪಹರಣಕ್ಕೊಳಗಾಗಿರುವ ನನ್ನ ತಾಯಿಯನ್ನು ರಕ್ಷಿಸಬೇಕೆಂದು ಮತ್ತು ಅಪಹರಿಸಿದ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಅಲಿ ಮನವಿ ಮಾಡಿಕೊಂಡಿದ್ದಾರೆ.
ಜನ್ಮದಿನದಂದೇ ಮರಣ: ಬೈಕ್​ನಲ್ಲಿ ಹೋಗುವಾಗ ತಲೆ ಮೇಲೇ ಬಿದ್ದ ಮರ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
