ಬೆಂಗಳೂರು:ಈತ ಹೊಸ ಪ್ರಪಂಚಕ್ಕೆ ಕಾಲಿಟ್ಟು ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದಿದ್ದ. ಬಂದಿದ್ದೂ ಫೇಸ್​ಬುಕ್​ ಸ್ನೇಹಿತನ ಮೇಲಿದ್ದ ನಂಬಿಕೆಯ ಮೇಲೆ. ಬರುತ್ತಿರುವಾಗ ದಾರಿಯಲ್ಲಿ ಕೆಲವರು ಕಿಡ್ನ್ಯಾಪ್​ ಮಾಡಿದ್ದಾರೆ. ಈಗ ಪೊಲೀಸರು ಆರೋಪಿಗಳನ್ನು ಹಿಡಿದಿದ್ದು 17 ವಯಸ್ಸಿನ ಯುವಕನನ್ನು ಕಾಪಾಡಿದ್ದಾರೆ.
ಗುಜರಾತ್​ನ ವಡೋದರಾ ನಗರ, ಮನನೋಹನ್‌ ಗ್ರಾಮದಲ್ಲಿ ವಾಸವಿರುವ ಪ್ರವೀಣ್ ಕುಮಾರ್ (17) ಎಂಬುವನು ಬೆಂಗಳೂರಿನ ಕೆಲಸಕ್ಕೆ ಸೇರುವ ಸಲುವಾಗಿ ಡಿ.10ರಂದು ಬಂದಿದ್ದಾನೆ. ಈತನ ತಂದೆ, ಒಂದು ದಿನ ಆದರೂ ಫೋನ್​ ಮಾಡಿಲ್ಲ ಎಂದಯ ಅನುಮಾನಗೊಂಡು ಡಿ.12ರಂದು ಸಂಜೆ ಸುಮಾರು 07-30ಕ್ಕೆ ಪ್ರವೀಣ್‌ ಕುಮಾ‌ನಿಗೆ ಕರೆ ಮಾಡಿದ್ದಾರೆ. ಆಗ ‘ನನ್ನನ್ನು ಯಾರೋ 05 ಜನ ಅಪರಿಚಿತ ವ್ಯಕ್ತಿಗಳು ಯಶವಂತಪುರ ರೈಲುನಿಲ್ದಾಣದಿಂದ ಕರೆದುಕೊಂಡು ಬಂದು ಒಂದು ರೂಂನಲ್ಲಿ ಕೂಡಿಹಾಕಿದ್ದಾರೆ’ ಎಂದು ಪ್ರವೀಣ ತಿಳಿಸಿದ್ದ. ಇದಾದ ಕೆಲವೇ ಸಮಯದಲ್ಲಿ ಮತ್ತೊಂದು ನಂಬರ್‌ನಿಂದ ತಂದೆ ಅರುಣ್​ ಕುಮಾರ್​ಗೆ ಕರೆ ಬಂದಿದ್ದು, ‘ನೀನು ಎರಡು ಲಕ್ಷ ರೂಗಳನ್ನು ನಾವು ತಿಳಿಸುವ ಮೊಬೈಲ್ ನಂಬರ್‌ಗೆ ಫೋನ್ ಪೇ ಮಾಡಿದರೆ ನಿನ್ನ ಮಗನನ್ನು ಬಿಡುತ್ತೇವೆ’ ಎಂದು ಹೇಳಿ ಬೆದರಿಸಿದ್ದಾರೆ. ಭಯಗೊಂಡ ತಂದೆ, ಅಪಹರಣಕಾರರು ತಿಳಿಸಿದ ಪೊನ್ ನಂಬರ್‌ಗೆ 40 ಸಾವಿರ ರೂಗಳನ್ನು ಫೋನ್ ಪೇ ಮಾಡಿದ್ದಾರೆ.
ಮತ್ತೊಮ್ಮೆ ಪೋನ್ ಮಾಡಿದ ಅಪಹರಣಕಾರರು ’60 ಸಾವಿರ ರೂಗಳನ್ನು ಪೋನ್ ಪೇ ಮಾಡು. ಇಲ್ಲವಾದಲ್ಲ ನಿನ್ನ ಮಗನ ಕೈ ತುಂಡು ಮಾಡಿ ಎಸೆಯುತ್ತೇವೆ’ ಎಂದಿದ್ದಾರೆ. ಗಾಬರಿಗೊಂಡ ಅರುಣ್​ ಕುಮಾರ್​, ತಕ್ಷಣ ಬೆಂಗಳೂರಿಗೆ ಬಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೀಗೆ ಬಂದ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸರು ತನಿಖೆ ಮಾಡಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಬೆಂಗಳೂರು ದಂಡು ರೈಲ್ವೇ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರಿ ಜಿ. ಪ್ರಭಾಕರ ರವರು ಪ್ರಕರಣದ ಪತ್ತೆಗಾಗಿ ಶ್ರೀ ಎಂ. ಶಿವಕುಮಾರ್ ಪಿ.ಎಸ್.ಐ. ಬೆಂಗಳೂರು ಗ್ರಾಮಾಂತರ ಮತ್ತು ಶ್ರೀ. ಶರಣಬಸವರಾಜ ಆರಾಧರ ಪಿ.ಎಸ್.ಐ. ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ 2 ವಿಶೇಷ ತಂಡಗಳನ್ನು ರಚನೆಮಾಡಿದ್ದಾರೆ.
ಕಾರ್ಯಾಚರಣೆ ನಡೆಸಿದ ವಿಶೇಷ ತಂಡಗಳು ಪ್ರಕರಣ ವರದಿಯಾದ 12 ಗಂಟೆಯ ಒಳಗೆ ಪ್ರಭಾತ್ ಎ (21). ಎಂಬುವನನ್ನು ಪತ್ತೆಮಾಡಿ ಪ್ರವೀಣ್ ಕುಮಾರ್​ನನ್ನು ರಕ್ಷಣೆ ಮಾಡಿದ್ದಾರೆ ವಿಚಿತ್ರ ಎಂದರೆ ಈತ ಓರ್ವ ಡಿಪ್ಲೊಮಾ ವಿದ್ಯಾರ್ಥಿ! ನಂತರ ಈ ಪ್ರಭಾತ್​ ನೀಡಿದ ಮಾಹಿತಿ ಮೇರೆಗೆ ರಂಗನಾಥ.ಕೆ (19) ಕುಶಾಲ್ ಟಿ.ಎಸ್ (19) ಎಂಬ ಆರೋಪಿಗಳನ್ನು ಸಹ 24 ಗಂಟೆಯೊಳಗೆ ಪತ್ತೆ ಮಾಡಿದ್ದಾರೆ.
ಬಿಹಾರ ಮೂಲದ ಪ್ರಭಾತ್, ಕುಟುಂಬ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ನಗರದ ಕಾಲೇಜಿನಲ್ಲಿ ಪ್ರಭಾತ್, ಡಿಪ್ಲೊಮಾ ಓದುತ್ತಿದ್ದ. ಕುಣಿಗಲ್ ಕಾಲೇಜಿನಲ್ಲಿ ರಂಗನಾಥ್, ಪಿಯುಸಿ ಓದುತ್ತಿದ್ದ. ಕುಶಾಲ್, ಎಸ್‌ಎಸ್‌ಎಲ್‌ಸಿ ಅರ್ಧಕ್ಕೆ ಬಿಟ್ಟು ಕೃಷಿ ಮಾಡುತ್ತಿದ್ದ. ಪ್ರಭಾತ್, ಕಾಲೇಜಿಗೆ ಹೋಗದೆ ಎಲ್ಲೆಡೆ ಸುತ್ತಾಡುವಾಗ ಈ ಇಬ್ಬರು ಸ್ನೇಹಿತರು ಪರಿಚಯವಾಗಿದ್ದರು.
ಮತ್ತೊಂದೆಡೆ ಬಿಹಾರದ ಪ್ರವೀಣ್, ಎಸ್‌ಎಸ್‌ಎಲ್‌ಸಿ ಓದಿ ಗುಜರಾತಿನ ಅಹಮದಾಬಾದ್‌ನ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿದ್ದ. 25 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪ್ರಭಾತ್‌ಗೂ ಮತ್ತು ಪ್ರವೀಣ್‌ಗೆ ಪರಿಚಯವಾಗಿತ್ತು. ಇಬ್ಬರು ಬಿಹಾರವಾದ ಕಾರಣಕ್ಕೆ ಆತ್ಮೀಯತೆ ಬೆಳೆದಿತ್ತು. ಬಿಹಾರದಲ್ಲಿ ಪ್ರವೀಣ್, ಪಾಲಕರು ದೊಡ್ಡ ರೈತರು ಆಗಿದ್ದರು. ಇದನ್ನು ತಿಳಿದ ಪ್ರಭಾತ್, ತನ್ನ ಸ್ನೇಹಿತರ ಜತೆ ಸೇರಿ ಪ್ರವೀಣ್‌ನನ್ನು ಬೆಂಗಳೂರಿಗೆ ಕರೆಸಿಕೊಂಡು ಅಪಹರಣ ಮಾಡಿ ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
