ಬೆಂಗಳೂರು :ಪೊಲೀಸ್ ಆಯುಕ್ತರ ಕಚೇರಿ ಕೂಗಳತೆ ದೂರದಲ್ಲಿಯೇ ಅಟ್ಟಿಕಾ ಗೋಲ್ಡ್ ಕಂಪನಿ ನೌಕರರನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಕಸಿದು ಬಿಟ್ಟುಕಳುಹಿಸಿದ್ದಾರೆ. ಈ ಕುರಿತು ಅಟ್ಟಿಕಾ ಗೋಲ್ಡ್ ಕಂಪನಿ ನೌಕರ ಸಾಗರ್ ಮದನ್‌ಲಾಲ್ ಜೈನ್(24) ಎಂಬಾತ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಇರುವ ಅಟ್ಟಿಕಾ ಗೋಲ್ಡ್ ಕಂಪನಿ ನೌಕರರಾದ ಸಾಗರ್ ಮತ್ತು ಪ್ರವೀಣ್ ನಗರದ ಇತರ ಶಾಖೆಗಳಿಂದ ಚಿನ್ನಾಭರಣ ಮತ್ತು ಹಣ ಸಾಗಾಟ ಮಾಡುತ್ತಿದ್ದಾರೆ. ನ.2ರ ರಾತ್ರಿ 9.20ರಲ್ಲಿ ಪ್ರವೀಣ್, ಕಚೇರಿಯಿಂದ ಹೊರಬರುತ್ತಿದಂತೆ ನಾಲ್ಕೈದು ಮಂದಿ ಏಕಾಏಕಿ ದಾಳಿ ನಡೆಸಿ ಮಾರಕಾಸ ತೋರಿಸಿ ಚೀರಾಟ ನಡೆಸದಂತೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ನಂತರ ಇನೋವಾ ಕಾರಿಗೆ ಹತ್ತಿಸಿಕೊಂಡು ಹಲ್ಲೆ ನಡೆಸಿ ನಗರದ ಎಲ್ಲೆಡೆ ಸುತ್ತಾಡಿಸಿ 2 ಮೊಬೈಲ್, 18 ಗ್ರಾಂ ಚಿನ್ನಾಭರಣ, ಉಂಗುರ ಕಿತ್ತುಕೊಂಡಿದ್ದಾರೆ.
ಕೊನೆಗೆ ರಾತ್ರಿ 11.30ರಲ್ಲಿ ಕೆ.ಆರ್.ಪುರ ಸಮೀಪ ನಿರ್ಜನ ಪ್ರದೇಶದಲ್ಲಿ ಕಾರಿನಿಂದ ಹೊರತಳ್ಳಿ ಪರಾರಿಯಾಗಿದ್ದಾರೆ. ಆಟೋದಲ್ಲಿ ಪ್ರವೀಣ್, ಕಚೇರಿಗೆ ಬಂದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರವೀಣ್ ಬಳಿ ಚಿನ್ನಾಭರಣ, ನಗದು ಇರುತ್ತದೆ ಎಂಬ ಕಾರಣಕ್ಕೆ ಅಥವಾ ಹಳೇ ದ್ವೇಷಕ್ಕೆ ಕೃತ್ಯ ಎಸಗಿದ್ದಾರ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 5 =
Remember me
