ಬೆಂಗಳೂರು:ಎಂಥ ಕ್ರಿಮಿನಲ್​ ಆದ್ರೂ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬ ಮಾತು ಅಪರಾಧ ಲೋಕದಲ್ಲಿದೆ. ಅಂಥದ್ದೇ ಒಂದು ಸುಳಿವು ಇಲ್ಲಿ ಅಪಹರಣ ಪ್ರಕರಣವನ್ನು ಬಯಲಿಗೆಳೆದಿದೆ. ಅದರಲ್ಲೂ ಕಿಡ್ನ್ಯಾಪ್ ಮಾಡಿದ್ದ ಮಹಿಳೆ ಬಾಯ್ಬಿಟ್ಟು ಕೆಟ್ಟಂತಾಗಿದೆ. ಅವಳು ಹೇಳಿದ್ದ ‘ಹಾಲು-ಉಪ್ಪಿಟ್ಟು’ ಎಂಬ ಎರಡು ಪದವೇ ಅವಳನ್ನು ಸಿಕ್ಕಿ ಬೀಳುವಂತೆ ಮಾಡಿದೆ.
ಮುಳಬಾಗಿಲು ಮೂಲದ, ಶಿವಾಜಿನಗರ ನಿವಾಸಿ ನಂದಿನಿ ಅಲಿಯಾಸ್ ಆಯೆಷಾ ಎಂಬಾಕೆಯೇ ಸಿಕ್ಕಿಬಿದ್ದ ಮಹಿಳೆ. ಈಕೆ ಅಪಹರಣ ಮಾಡಿದ್ದ 42 ದಿನಗಳ ನವಜಾತ ಶಿಶುವನ್ನು ನಿನ್ನೆ ರಕ್ಷಣೆ ಮಾಡಿದ್ದ ಪೊಲೀಸರು ಪಾಲಕರಿಗೆ ಒಪ್ಪಿಸಿದ್ದಾರೆ. ಇದಾದ ಬೆನ್ನಿಗೇ ಈಕೆ ಸಿಕ್ಕಿಬಿದ್ದಿದ್ದು ಹೇಗೆ ಎಂಬ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಕಲಾಸಿಪಾಳ್ಯದ ದುರ್ಗಮ್ಮ ಟೆಂಪಲ್ ರಸ್ತೆ ಶಂಭುಪಾಳ್ಯ ನಿವಾಸಿ ಫರ್ಹೀನ್​ ಬೇಗಂ (27) ಎಂಬಾಕೆ ಶನಿವಾರ ಬೆಳಗ್ಗೆ 7.30ರಲ್ಲಿ ಮನೆಯಲ್ಲಿ ತನ್ನ ಶಿಶುವಿಗೆ ಹಾಲು ಕುಡಿಸಿ ಪಕ್ಕದಲ್ಲಿ ಮಲಗಿಸಿಕೊಂಡು ತಾನೂ ಮಲಗಿದ್ದರು. ಮನೆಗೆ ಡೋರ್ ಲಾಕ್ ಆಗಿರಲಿಲ್ಲ.
ಇದನ್ನೂ ಓದಿ:ನಾಲ್ಕು ಜೀವಗಳ ರಕ್ಷಣೆ ಮಾಡಿ ಪ್ರಾಣ ಕಳೆದುಕೊಂಡ ವೃದ್ಧ!
ಈ ವೇಳೆ ಮನೆಗೆ ನುಗ್ಗಿದ ಆಯೆಷಾ ಮಗು ಮತ್ತು ಮೊಬೈಲ್ ಫೋನ್​ ಎತ್ತಿಕೊಂಡು ಪರಾರಿ ಆಗಿದ್ದಳು. ತಾಯಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಆರೋಪಿ ಮಗುವಿನೊಂದಿಗೆ ನಾಪತ್ತೆಯಾಗಿದ್ದಳು. ದಿಕ್ಕು ತೋಚದ ಫರ್ಹೀನ್​ ಬೇಗಂ ಕಲಾಸಿಪಾಳ್ಯ ಠಾಣೆಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ:ವಯಾಗ್ರ ತೆಗೆದುಕೊಂಡ ಆತ ಅವಳ ಮಾತು ಕೇಳದೆ ಕೊನೆಗೆ ಸಾವಿಗೀಡಾದ!
ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮತ್ತೊಂದೆಡೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮಾಗಡಿ ರಸ್ತೆ ರೈಲ್ವೇ ಕ್ವಾರ್ಟರ್ಸ್ ಬಳಿ ಆಯೆಷಾ ಮಗುವಿನೊಂದಿಗೆ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದಳು. ಈ ಸಂದರ್ಭದಲ್ಲಿ ಮಗು ಕೂಡ ಜೋರಾಗಿ ಅಳುತ್ತಿತ್ತು. ಆಗ ಸ್ಥಳೀಯ ಮಹಿಳೆಯೊಬ್ಬರು ‘ಮಗುವಿಗೆ ಏನು ತಿನ್ನಿಸಿದ್ರಿ?’ ಎಂದು ಕೇಳಿದ್ದರು. ಆಗ ಆಯೆಷಾ ಹಾಲು-ಉಪ್ಪಿಟ್ಟು ಎಂದಿದ್ದಳು. ಅಷ್ಟು ಚಿಕ್ಕ ಮಗುವಿಗೆ ಹಾಲು-ಉಪ್ಪಿಟ್ಟು ತಿನ್ನಿಸ್ತಾರಾ? ಎಂಬ ಅನುಮಾನ ಮೂಡಿದ್ದರಿಂದ ಸ್ಥಳೀಯ ಮಹಿಳೆ ಕೂಡಲೇ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆ ಮತ್ತು ಮಗುವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕಲಾಸಿಪಾಳ್ಯದಲ್ಲಿ ಅಪಹರಿಸಲಾಗಿದ್ದ ಮಗು ಎಂಬುದು ಗೊತ್ತಾಗಿದೆ. ಮಹಿಳೆಯನ್ನು ಬಂಧಿಸಿದ ಪೊಲೀಸರು ಮಗುವನ್ನು ಪಾಲಕರಿಗೆ ಒಪ್ಪಿಸಿದ್ದರು.
ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

ಚುನಾವಣೆಗೆ ನಿಲ್ಲುವವರಿಗೂ ಇಲ್ಲಿ 5 ಲಕ್ಷ ರೂ. ಕೊಡ್ತಾರೆ!; ಷರತ್ತುಗಳೇನು?

ಯಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 3 =
Remember me
